ತುಮಕೂರು: ರಸ್ತೆ ಬದಿ ನಿಲ್ಲಿಸಲಾಗಿದ್ದಂತ ಲಾರಿಗೆ ಕಾರು ಡಿಕ್ಕಿಯಾಗಿ, ಸ್ಥಳದಲ್ಲಿಯೇ ಗಂಡ-ಹೆಂಡತಿ ಸಾವನ್ನಪ್ಪಿರೋ ಘಡನೆ, ಮಲ್ಲಸಂದ್ರ ಬಳಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಮಲ್ಲಸಂದ್ರದ ಬಳಿಯಲ್ಲಿ, ರಸ್ತೆ ಬದಿಯಲ್ಲಿ ನಿಂತಿದ್ದಂತ ಲಾರಿಗೆ ಕಾರು ಡಿಕ್ಕಿಯಾಗಿ ಈಶ್ವರಪ್ಪ ಹಾಗೂ ಕಲ್ಪನಾ ಎನ್ನುವ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈಶ್ವರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೇ, ಕಲ್ಪನಾ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರು ಹೆಗ್ಗೆರೆಯಿಂದ ಸ್ವಗ್ರಾಮ ದೇವನಹಳ್ಳಿಗೆ ಬರುತ್ತಿದ್ದಾಗ, ಈ ಅಪಘಾತ ಸಂಭವಿಸಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




