Saturday, July 20, 2024

Latest Posts

‘ಲವ್ 360’ ಚಿತ್ರಕ್ಕೆ ನಾಯಕನಾದ ಎಂಬಿಬಿಎಸ್ ಹುಡುಗ.!

- Advertisement -

ಕನ್ನಡ ಸಿನಿರಂಗಕ್ಕೆ ‘ಮೊಗ್ಗಿನ ಮನಸ್ಸು’, ‘ಕೃಷ್ಣನ್ ಲವ್ ಸ್ಟೋರಿ’ ಅಂತಹ ಅದ್ಭುತ ಲವ್ ಸ್ಟೋರಿಗಳಿರುವ ಚಿತ್ರಗಳನ್ನು ಶಶಾಂಕ್ ಅವರು ನಿರ್ದೇಶನ ಮಾಡಿದ್ದೂ, ಇದೀಗ ‘ಲವ್ 360’ ಸಿನಿಮಾವನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಹೊಸ ಪ್ರತಿಭೆ ಪ್ರವೀಣ್ ನಾಯಕನಾಗಿದ್ದು, ‘ಲವ್ ಮಾಕ್ಟೇಲ್’ ಸಿನಿಮಾ ನಟಿ ರಚನಾ ಇಂದರ್ ನಾಯಕಿಯಾಗಿದ್ದಾರೆ.

ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತಿದೆ. ಈ ಸಂತಸವನ್ನು ಹಂಚಿಕೊಳ್ಳಲು ಈ ಚಿತ್ರತಂಡ ಪತ್ರಿಕಾಗೋಷ್ಠಿಯನ್ನ ಆಯೋಜಿಸಿತ್ತು. ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಶಶಾಂಕ್ “ಬಹಳ ದಿನಗಳ ನಂತರ ನಿಮ್ಮನೆಲ್ಲಾ ನೋಡುತ್ತಿರುವುದು ಖುಷಿಯಾಗಿದೆ. ‘ತಾಯಿಗೆ ತಕ್ಕ ಮಗ’ ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರವಿದು. ಲಾಕ್‌ಡೌನ್ ಸಮಯದಲ್ಲಿ ಸಿದ್ದವಾದ ಕಥೆಯಿದು. ನಾನು ಮತ್ತು ಉಪೇಂದ್ರ ಅವರ ಚಿತ್ರ ನಿರ್ದೇಶಿಸಬೇಕಿತ್ತು.‌ ಅದು ದೊಡ್ಡಮಟ್ಟದ ಚಿತ್ರ. ಚಿತ್ರೀಕರಣಕ್ಕೆ ಕೊರೊನಾ ನಿಯಮಾವಳಿಗಳು ಸಹಕಾರಿಯಾಗುವಂತೆ ಕಾಣಲಿಲ್ಲ. ಹಾಗಾಗಿ ಆ ಚಿತ್ರ ಮುಂದೂಡಿ, ಈ ಚಿತ್ರ ಆರಂಭ ಮಾಡಿದೆ. ಅದರಲ್ಲೂ ಹೊಸಬರೊಂದಿಗೆ ನಾನು ಕೆಲಸ ಮಾಡಿ ಸುಮಾರು ವರ್ಷಗಳೇ ಆಗಿತ್ತು. ಈ ಚಿತ್ರದ ಮೂಲಕ ಪ್ರವೀಣ್ ಎಂಬ ನೂತನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ. ಪ್ರವೀಣ್ ಸೇರಿದಂತೆ ಅವರ ಕುಟುಂಬದರೆಲ್ಲಾ ವೈದ್ಯರು. ಹೊಸಪೇಟೆ ಬಳಿಯ ಮಾರಮ್ಮನಹಳ್ಳಿಯಲ್ಲಿ ಇವರ ಆಸ್ಪತ್ರೆ ಇದೆ. ಸಾವಿರಾರು ಜನಕ್ಕೆ ಉಚಿತ ಚಿಕಿತ್ಸೆ ನೀಡಿ‌ ಪ್ರವೀಣ್ ತಂದೆ ಆ ಊರಿನ ಸುತ್ತ ಹೆಸರುವಾಸಿಯಾಗಿದ್ದರು” ಎಂದು ಶಶಾಂಕ್ ತಿಳಿಸಿದ್ದಾರೆ.

ಬಳಿಕ ಈ ಸಿನಿಮಾದ ನಟ ನಮತನಾಡಿ “ನಾನು ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕೂಡ ನಟನೆಯಲ್ಲಿ ಆಸಕ್ತಿ ಇದೆ. ತಿಂಗಳಲ್ಲಿ ಮೂರು ದಿನ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಗೆ ಬಂದು ಅಭಿನಯ ಕಲಿಯುತ್ತಿದೆ. ಅಪ್ಪನಿಗೆ ವಿಷಯ ತಿಳಿದು ಬಯ್ಯುತ್ತಿದ್ದರು. ಈಗ ಅಪ್ಪ ಇಲ್ಲ. ಅಮ್ಮನ ಮುಂದೆ ನನ್ನ ಆಸೆ ಹೇಳಿಕೊಂಡೆ. ಅಮ್ಮ ನನ್ನ‌ ಆಸೆಗೆ ಆಸರೆಯಾದರು. ಆ ನಂತರ ಶಶಾಂಕ್ ಸರ್ ಪರಿಚಯವಾಯಿತು. ಶಶಾಂಕ್ ಅವರು ಸಾಕಷ್ಟು ವರ್ಕ್‌ಶಾಪ್ ನಡೆಸಿ ನನಗೆ ಅಭಿನಯ ಕಲಿಸಿದರು. ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದೀನಿ. ಈ ಚಿತ್ರದಲ್ಲಿ ಬೋಟ್ ಮ್ಯಕಾನಿಕ್ ಪಾತ್ರ ಮಾಡಿದ್ದೀನಿ. ಡಾಕ್ಟರ್ ಆಗಬೇಕಿತ್ತು. ಈಗ ಆಕ್ಟರ್ ಆಗಿದ್ದೀನಿ” ಎಂದು ಪ್ರವೀಣ್ ಹೇಳಿದ್ದಾರೆ.

ಇನ್ನು ಲವ್ ಮಾಕ್ಟೇಲ್ ನ ನಟಿ ರಚನಾ ಇಂದರ್ ಮಾತನಾಡಿ “ನಾನು ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಅಭಿನಯಿಸಿದ್ದೆ. ಆದರೆ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯಿಸಿರುವ ಮೊದಲ ಚಿತ್ರವಿದು. ಈ ಚಿತ್ರದ ಆಡಿಷನ್ ಇದಾಗ ಅಮ್ಮ ಜಡೆ ಹಾಕಿ, ಜುಂಕಿ ಹಾಕಿಸಿಕೊಂಡು ಕರೆದುಕೊಂಡು ಹೋಗಿದ್ದರು. ನಾನು ಬೇಡ ಅಂದೆ. ಅಮ್ಮ ಇರಲಿ ಅಂದರು. ಶಶಾಂಕ್ ಅವರಿಗೆ ನಾನು ಹೋಗಿದ್ದ ರೀತಿ ಇಷ್ಟವಾಯಿತಂತೆ. ಆನಂತರ ನಾನು ಸೆಲೆಕ್ಟ್ ಆದೆ. ನಂತರ ನಿರ್ದೇಶಕರು ವರ್ಕ್‌ಶಾಪ್ ಮೂಲಕ ಅಭಿನಯ ಹೇಳಿಕೊಟ್ಟರು. ಪಾತ್ರ ತುಂಬಾ ಚೆನ್ನಾಗಿದೆ” ಎಂದು ರಚನಾ ಇಂದರ್ ಹೇಳಿಕೊಂಡಿದ್ದಾರೆ.

ಬಳಿಕ ಇನ್ನೂ ಮುಂತಾದವರು ಮಾಧ್ಯಮದೊಂದಿಗೆ ಮಾತನಾಡಿದರು.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

 

 

- Advertisement -

Latest Posts

Don't Miss