www.karnatakatv.net : ರಾಯಚೂರು: ಬಸವಸಾಗರ ಜಲಾಶಯದಿಂದ ಸರಿ ಸುಮಾರು ಮೂರು ಲಕ್ಷದ ೫೦,೦೦೦ ಕ್ಯೂಸೆಕ್ಸ್ ನೀರನ್ನ ಕೃಷ್ಣಾ ನದಿಗೆ ಹರಿಬಿಟ್ಟಿರುವ ಹಿನ್ನಲೆ,
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನ ಹಡಗಿ ಸೇತುವೆ ಸಂಪೂರ್ಣ ಜಲಾವೃತ ವಾಗಿದೆ…! ಜಿಲ್ಲೆಯ ದೇವದುರ್ಗದ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು,
ಇಂದು ಬೆಳಗ್ಗೆ 3,50,000 ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನ ನದಿಗೆ ಹರಿ ಬಿಡಲಾಗಿದೆ. ಇನ್ನು ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಹಿನ್ನಲೆ ನೀರು ರಭಸವಾಗಿ ಹರಿಯುತ್ತಿದ್ದು ಜಿಲ್ಲಾಡಳಿತದಿಂದ ಎಚ್ಚರಿಕೆಯ ಕ್ರಮಗಳನ್ನ ಕೈಗೊಳ್ಳಾಗುತ್ತಿದೆ. ಇದಲ್ಲದೇ ಲಿಂಗಸ್ಗೂರು ತಾಲ್ಲೂಕಿನ ಹಂಚಿನಾಳ ಗ್ರಾಮದ ಬಳಿಯ ಶೀಲಹಳ್ಳಿ ಸೇತುವೆ ಕೂಡ ಜಲಾವೃತವಾಗಿದೆ. ನೂರಾರು ರೈತರ ಪಂಪ್ ಸೆಟ್ , ಮೋಟಾರ್ ಗಳು ನೀರಲ್ಲಿ ಕೊಚ್ಚಿ ಹೋಗಿವೆ.. ಹೀಗಾಗಿ ನದಿ ಪಾತ್ರದ ಗ್ರಾಮಗಳ ಜನ ಯಾವುದೇ ಕಾರಣಕ್ಕೆ ನದಿ ಬಳಿ ತೆರಳದಂತೆ ಡಂಗೂರ ಸಾರುವುದರ ಮುಖಾಂತರ, ಮೈಕ್ ಮೂಲಕ ಪ್ರಚಾರ ಮಾಡುವಂತೆ ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ.