ನಾನು ಬಾಂಬೆಯವಳಲ್ಲ, ಏನೂ ಗೊತ್ತಿಲ್ಲದೇ ಬಂದೆ: Tanisha Kuppanda Podcast

Sandalwood: ನಟಿ ತನೀಷಾ ಕುಪ್ಪಂಡ ತಾನು ಸಿನಿ ದುನಿಯಾಗೆ ಬರುವಾಗ ಯಾವ ಯಾವ ಸಮಸ್ಯೆ ಅನುಭವಿಸಿದರು..? ಹೇಗೆ ಅವಕಾಶ ಸಿಕ್ಕಿತು ಅಂತಾ ವಿವರಿಸಿದ್ದಾರೆ.

ಸ್ಯಾಂಡಲ್‌್ವುಡ್ ಸಿನಿಮಾದಲ್ಲಿ ನಟಿಸಬೇಕು ಎಂದು ತನೀಷಾ ಅವಕಾಶಕ್ಕಾಗಿ ನ್ಯೂಸ್ ಪೇಪರ್‌ನಲ್ಲಿ ಸರ್ಚ್ ಮಾಡ್ತಿದ್ರಂತೆ. ನ್ಯೂಸ್‌ ಪೇಪರ್‌ನಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ಕಾಯಿನ್ ಭೂತ್‌ಗೆ ಹೋಗಿ ಕಾಲ್ ಮಾಡಿ ಅವಕಾಶ ಕೇಳುತ್ತಿದ್ದರು. ಅವರು ಆಡಿಷನ್‌ಗೆ ಬನ್ನಿ ಅಂದಾಗ, ಆಡಿಷನ್ ಅಂದ್ರೆ ಏನು ಅಂತಾನೇ ತಿಳಿದಿಲ್ಲ ಅಂತಾ ಕಾಲ್ ಕಟ್ ಮಾಡ್ತಿದ್ರಂತೆ ತನೀಷಾ.

ಅಲ್ಲದೇ ಕೆಲವು ಡಿಸ್ಟ್ರಿಬ್ಯೂಟರ್ ಬಳಿ ಹೋಗಿ ನನಗೆೇನು ಗ“ತ್ತಿಲ್ಲ, ನನಗೆ ನಟಿಸುವ ಅವಕಾಶ ಬೇಕು ಅಷ್ಟೇ ಅನ್ನೋ ಹಾಗೆ ಮಾತಾಡಿದ್ದೂ ಇದೇ ಅಂತಾ ತಮ್ಮ ಮುಂಚಿನ ಪ್ರಯತ್ನನ್ನು ನೆನಪು ಮಾಡಿಕ“ಂಡಿದ್ದಾರೆ ತನೀಷಾ ಕುಪ್ಪಂಡ.

ಆದರೆ ಅವರಿಗೆ ಸರಿಯಾಗಿ ಅವಕಾಶ ಸಿಗಲಿಲ್ಲ. ಅಲ್ಲದೇ, ಹತ್ತನೇ ತರಗತಿ ಮುಗಿಸಿ, ಸಿನಿಮಾದಲ್ಲಿ ಅವಕಾಶ ಹುಡುಕುವಾಗ, ತನೀಷಾ ದಡ್ಡಿ, ಓದಲಾಗದ ಕಾರಣ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ ಅಂತೆಲ್ಲ ಮಾತನಾಡಲು ಶುರು ಮಾಡಿದರಂತೆ. ಹಾಗಗಿ ತನೀಷಾ ಡಿಗ್ರಿ ಮಾಡಲು ನಿರ್ಧರಿಸಿದರು. ಆದರೆ ಕಾಲೇಜಿಗೆ ಸೇರಿದಾಗ, ಅಲ್ಲಿಯೂ ಸಿನಿಮಾಗೆ ಆಡಿಷನ್ ತೆಗೆದುಕ“ಳ್ಳಲು ಬರುತ್ತಿದ್ದರಂತೆ. ಹಾಗಾಗಿ ಅಲ್ಲಿಯೂ ತನೀಷಾ ಓದಿಗಿಂತ, ಆಡಿಷನ್ ನೀಡುುದರಲ್ಲೇ ಬ್ಯುಸಿಯಾಗಿದ್ದರಂತೆ. ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.

About The Author