Wednesday, July 2, 2025

Latest Posts

ನಾನು ಶುದ್ಧ ಹಿಂದೂಸ್ತಾನಿ, ಇಂಡಿಯನ್, 24 ಕ್ಯಾರೆಟ್ ಗೋಲ್ಡ್: ಜೋಶಿ ವಿರುದ್ಧ ಜಮೀರ್ ವಾಗ್ದಾಳಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹಮದ್ ಮಾತನಾಡಿದ್ದು, ನಾನು ಶುದ್ಧ ಹಿಂದೂಸ್ತಾನಿ ಇಂಡಿಯನ್, 24 ಕ್ಯಾರೆಟ್ ಗೋಲ್ಡ್. ಜೋಶಿ ಅವರಿಗೆ ಹಿಂದೂ ಮುಸ್ಲಿಂ ಬಿಟ್ಟರೆ ಏನು ಮಾತನಾಡಲ್ಲ. ಜೋಶಿ ಅವರೇ ರಾಜಕೀಯಕ್ಕೆ ಬಂದ ಮೇಲೆ ಜಾತಿ ಮಾಡಬಾರದು ಎಂದಿದ್ದಾರೆ.

ದರ್ಶನ್ ಬೇಲ್ ವಿಚಾರಕ್ಕೆ ಜಮೀರ್ ಪ್ರತಿಕ್ರಿಯೆ ನೀಡಿದ್ದು, ದರ್ಶನ್‌ಗೆ ಬೇಲ್ ಆಗುತ್ತೆ ಅಂತ ಹೇಗೆ ಹೇಳ್ತಿರಿ?
ಇನ್ನು ನ್ಯಾಯಧೀಷರು ಆದೇಶ ಮಾಡಿಲ್ಲ. ನಿರ್ಧಾರ ಪ್ರಕಟ ಆದ್ಮೇಲೆ ಮಾತನಾಡೋಣ ಎಂದರು.

ಸಂಪುಟದಿಂದ ಜಮೀರ್ ಅಹ್ಮದ್ ರನ್ನ ಕಿತ್ತೊಗೆಯ ಬೇಕು ಎಂದಿದ್ದ ಜೋಶಿಗೆ ಜಮೀರ್ ಪ್ರತಿಕ್ರಿಯೆ ನೀಡಿದ್ದು,
ನಾವು ಭಾರತೀಯ, ನನ್ನನ್ನ ಹೇಗೆ ಕಿತ್ತಾಕ್ತಾರೆ..? ಜೋಶಿ ಅವರಿಗೆ ಹಿಂದೂ ಮುಸ್ಲಿಂ ಬಿಟ್ಟರೆ ಏನು ಮಾತನಾಡಲ್ಲ. ಮುಸಲ್ಮಾನ್ ರು ಮತ ನೀಡಲ್ಲ ಅಂತ ಬಿಜೆಪಿ ಅವರು ದ್ವೇಷ ಮಾಡ್ತಾರೆ. ಮತ ಕೊಟ್ರೆ ಮುಸಲ್ಮಾನರು ಒಳ್ಳೆಯವರು. ನಾನು ಯಾವತ್ತು ಕೋಮುದ್ವೇಷ ಹರಡಿಸುವಂತ ಕೆಲಸ ಮಾಡಿಲ್ಲ. ನಾನು ಶುದ್ಧ ಹಿಂದೂಸ್ತಾನಿ ಇಂಡಿಯನ್, 24 ಕ್ಯಾರೆಟ್ ಗೋಲ್ಡ್. ಚುನಾವಣೆ ಬರ್ತಾ ಇರೋದ್ರಿಂದ ಹೀಗೆಲ್ಲಾ ಮಾಡ್ತಾ ಇದ್ದಾರೆ. ಇದು ಬಿಜೆಪಿ ಕಾಲದಿಂದಲೂ ನಡೀತಾ ಇದೆ. ಕಾನೂನು ಅಂತ ಇಲ್ವಾ, ಯಾರ ಆಸ್ತಿನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾನು ಹೇಳಿದಕೂಡಲೇ ನಿಮ್ಮ ಆಸ್ತಿಯನ್ನ ವಕ್ಫ ಆಸ್ತಿ ಮಾಡೋಕೆ ಆಗುತ್ತೆ.
ಎಂಕ್ರೋಜ್ಮೆಂಟ್ ಗಾಗಿ ನಾವು ಮಾಡ್ತಾ ಇದ್ದೇವೆ. ವಕ್ಫ ಕೈಯಲ್ಲಿ 23 ಸಾವಿರ ಎಕರೆ ಇದೆ, ಮಿಕ್ಕ 84 ಸಾವಿರ ಎಕರೆ ಎಂಕ್ರೋಜ್ಮೆಂಟ್ ಆಗಿದೆ ಎಂದು ಜಮೀರ್ ಹೇಳಿದ್ದಾರೆ.

ವಿಜಯಪುರದಲ್ಲಿ ರೈತರ ಪ್ರತಿಭಟನೆಗೆ ಜಮೀರ್ ಪ್ರತಿಕ್ರಿಯೆ ನೀಡಿದ್ದು, ಇವರು ರೈತರನ್ನ ಎತ್ತಿ ಕಟ್ಟುತ್ತಿದ್ದಾರೆ. ನಾನು ವಕ್ಫ ಸಚಿವನಾಗಿ ಹೇಳ್ತೇನೆ ಯಾವ ರೈತರಿಗೂ ತೊಂದರೆ ಆಗಲ್ಲ. ಬಿಜೆಪಿ ಅವರು ಹೋಗ್ತಾ ಇದ್ದಾರೆ, ಅವರಿಗೆ ಕೇಳಿದ್ದೆಲ್ಲ ದಾಖಲೆ ಕೊಡಿ ಅಂತ ಎಂ ಬಿ ಪಾಟೀಲ್ ಹೇಳ್ತಿದ್ದಾರೆ. ಚುನಾವಣೆ ಇರೋದಕ್ಕಾಗಿ ಬಿಜೆಪಿ ಅವರು ಹೀಗೆಲ್ಲಾ ಮಾಡ್ತಿದ್ದಾರೆ. ಇಲ್ಲಿರೋ ಮುಸ್ಲಿಂರು ಹಿಂದುಗಳೇ ಎಂದು ಜೋಶಿ ಹೇಳಿಕೆಗೆ ಜಮೀರ್ ತಿರುಗೇಟು ನೀಡಿದ್ದಾರೆ.

ಭಾರತದಲ್ಲಿರೋರೆಲ್ಲ ಭಾರತೀಯರು ಅಷ್ಟೇ. ಜೋಶಿ ಅವರೇ ರಾಜಕೀಯಕ್ಕೆ ಬಂದ ಮೇಲೆ ಜಾತಿ ಮಾಡಬಾರದು. ಮಾಡೋದಿದ್ರೆ ನಿಮ್ಮ ಮನೇಲಿ ಮಾಡ್ಕೊಳಿ. ಚುನಾವಣೆ ಮಾಡಬೇಕಾದ್ರೆ ಅಸಮಾಧಾನ ಇದ್ದೆ ಇರುತ್ತೆ. ಆದ್ರೆ ಎಲ್ಲರೂ ಕೂಡಿ ಮಾಡ್ತೇವೆ. ಶಿಗ್ಗಾವಿ, ಸಂಡೂರ್, ಚನ್ನಪಟ್ಟಣ ಎಲ್ಲಾ ಕಡೆಯಲ್ಲೂ ಹೋಗಬೇಕು. ಇವತ್ತು ಖಾದ್ರಿ ನಾಮ ಪತ್ರ ವಾಪಸ್ ಪಡೀತಾರೆ ಎಂದು ಜಮೀರ್ ಅಹಮದ್ ಹೇಳಿದ್ದಾರೆ.

- Advertisement -

Latest Posts

Don't Miss