Wednesday, November 13, 2024

Latest Posts

Sandalwood News: ಪತಿಗೆ ಬೇಲ್ ಸಿಕ್ಕ ಖುಷಿಗೆ ಕಾಮಾಕ್ಯ ದೇವಿಗೆ ಧನ್ಯವಾದ ತಿಳಿಸಿದ ವಿಜಯಲಕ್ಷ್ಮೀ ದರ್ಶನ್

- Advertisement -

Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ 6 ವಾರಗಳ ಕಾಲ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಇಷ್ಟು ಸಾರಿ ಪ್ರಯತ್ನ ಪಟ್ಟಿದ್ದಕೂ ಈ ಬಾರಿ ಜಾಮೀನು ಸಿಕ್ಕಿದ್ದು, ದರ್ಶನ್ ಮತ್ತು ವಿಜಯಲಕ್ಷ್ಮೀಗೆ ಖುಷಿ ತಂದಿದೆ.

ವಿಜಯಲಕ್ಷ್ಮೀ ದರ್ಶನ್, ತನ್ನ ಪತಿಯ ತಪ್ಪನ್ನು ಕ್ಷಮಿಸಿ, ಆತನನ್ನು ಹೇಗಾದರೂ ಮಾಡಿ ಜಾಮೀನಿನ ಮೇಲೆ ಹೊರತರಬೇಕು ಎಂದು ಸಕಲ ಪ್ರಯತ್ನಗಳನ್ನು ಪಟ್ಟಿದ್ದಾರೆ. ಪದೇ ಪದೇ ಬೆಂಗಳೂರು, ಬಳ್ಳಾರಿ ಜೈಲಿಗೆ ಬಂದು ಪತಿಯ ಆರೋಗ್ಯ ವಿಚಾರಿಸಿ, ಊಟ ನೀಡಿ ಹೋಗಿದ್ದರು. ದರ್ಶನ್‌ಗಾಗಿ ಕೊಲ್ಲೂರಿನಲ್ಲಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಚಂಡಿಕಾ ಹೋಮ ಮಾಡಿಸಿದ್ದರು. ಅಲ್ಲದೇ, ದೂರದ ಮಧ್ಯಪ್ರದೇಶದಲ್ಲಿರುವ ಕಾಮಾಕ್ಯದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.

ಇದೀಗ ಅದೆಲ್ಲದರ ಪರಿಣಾಮವಾಗಿ, ದರ್ಶನ್‌ಗೆ ಬೇಲ್ ಸಿಕ್ಕಿದ್ದು, ವಿಜಯಲಕ್ಷ್ಮೀ ದರ್ಶನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಾಮಾಕ್ಯದೇವಿ ದೇವಸ್ಥಾನದ ಚಿತ್ರ ಹಾಕಿ, ಧನ್ಯವಾದ ಸಲ್ಲಿಸಿದ್ದಾರೆ. ಇನ್ನು ದರ್ಶನ್ ಜೈಲಿಗೆ ಹೋದ ಮೊದಲ ದಿನ ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಗ್ರಾಮ್ ಡಿಿ ಆ್ಯಕ್ಟಿವೇಟ್ ಮಾಡಿ, ನಾನು ನನ್ನ ಮಗ ಇಬ್ಬರೇ ಸಾಕು ಅನ್ನೋ ರೀತಿ ಇದ್ದರು. ಆದರೆ ದರ್ಶನ್‌ಗೆ ತಮ್ಮ ತಪ್ಪಿನ ಅರಿವಾಗಿ, ಆತ ಪಶ್ಚಾತಾಪ ಪಡುತ್ತಿದ್ದಾನೆಂದು ತಿಳಿದ ಬಳಿಕ, ಪತಿಯನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕು ಎಂದು ವಿಜಯಲಕ್ಷ್ಮೀ ಸತತ ಪ್ರಯತ್ನ ಪಟ್ಟಿದ್ದರು. ಆದರೆ ದರ್ಶನ್ ಚಿಕಿತ್ಸೆ ಪಡೆದ ಬಳಿಕ, ಮತ್ತೆ ಜೈಲು ವಾಾಸ ಅನುಭವಿಸಬೇಕಿದೆ.

ದರ್ಶನ್‌ ಹಲವು ಬಾರಿ ಜಾಮೀನಿಗಾಗಿ ಮನವಿ ಮಾಡಿದ್ದರೂ, ಇಷ್ಟು ಲೇಟಾಗಿ ಜಾಮೀನು ಸಿಗಲು ಕಾರಣ, ಅವರಿಗಿದ್ದ ತೀವ್ರ ಬೆನ್ನು ನೋವು. ಬೆನ್ನು ನೋವಿನ ಕಾರಣ, ದರ್ಶನ್ ಸರಿಯಾಗಿ ನಡೆಯಲು ಕೂಡ ಆಗುತ್ತಿರಲಿಲ್ಲ. ಹಾಗಾಗಿ ಬೆನ್ನು ನೋವು ನಿರ್ಲಕ್ಷಿಸಿದರೆ, ಮುಂದೆ ಪಾರ್ಶ್ವವಾಯುವಾಗುವ ಸಾಧ್ಯತೆ ಇರುವ ಕಾರಣ, ದರ್ಶನ್ ಅವರಿಗೆ ಶಸ್ತ್ರಿ ಚಿಕಿತ್ಸೆ ಪಡೆಯುವುದು ಅಗತ್ಯವಾಗಿತ್ತು. ಹಾಗಾಗಿ ಚಿಕಿತ್ಸೆ ಪಡೆಯಲು ಜಾಮೀನು ಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು.

ಇನ್ನು ಕೋರ್ಟ್ ದರ್ಶನ್‌ಗೆ ಷರತ್ತು ಬದ್ಧ ಜಾಮೀನು ನೀಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲು 6 ವಾರಗಳ ಕಾಲ ಸಮಯ ನೀಡಿದೆ. ಈ ಸಮಯದಲ್ಲಿ ದರ್ಶನ್ ದೇಶ ಬಿಟ್ಟು ಬೇರೆಡೆ ಹೋಗುವಂತಿಲ್ಲ. ಬೆಂಗಳೂರಿನಲ್ಲಿ ಯಾವ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು ಎಂದು ಹೇಳಲಾಗಿದೆ.

- Advertisement -

Latest Posts

Don't Miss