ವಿದ್ಯಾರ್ಥಿಗಳು ಸಮಾಜದ ಪ್ರತಿಬಿಂಬ. ಆದ್ರೆ ಮಕ್ಕಳಲ್ಲಿ ಅಪರಾಧ ಪ್ರವೃತ್ತಿ ಹೆಚ್ಚಳವಾಗ್ತಿದೆ. ಹೀಗಂತ ಗೃಹ ಸಚಿವ ಜಿ. ಪರಮೇಶ್ವರ್ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ ನಿಮಿತ್ತ, ತುಮಕೂರಿ ಅಗಳಕೋಟೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕರನ್ನ ಸನ್ಮಾನಿಸಿ ಮಾತನಾಡಿದ ಸಚಿವ ಪರಮೇಶ್ವರ್ , 14ರಿಂದ 17 ವರ್ಷದವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗ್ತಿದ್ದಾರೆ. ಇದು ಭಾರೀ ಆತಂಕ ಮೂಡಿಸಿದೆ ಅಂತಾ ಹೇಳಿದ್ರು.
ನಾನು 3ನೇ ಬಾರಿಗೆ ರಾಜ್ಯದ ಗೃಹ ಸಚಿವನಾಗಿದ್ದೇನೆ. ಮಂತ್ರಿಯಾಗಿ ಪ್ರತಿ ದಿನ ಬೆಳಗ್ಗೆ ಕೊಲೆ, ಅತ್ಯಾಚಾರ ವಿಚಾರ ಕೇಳಬೇಕಾಗುತ್ತದೆ. 8ನೇ ತರಗತಿ ವಿದ್ಯಾರ್ಥಿ ಪಕ್ಕದ ಮನೆ ಮಹಿಳೆಯನ್ನು ಕೊಲೆ ಮಾಡ್ತಾನೆ. ಅವನ ಮನಸ್ಥಿತಿ ಹೇಗಿರಬೇಕು?. ಯಾವ ಶಾಲೆಯಲ್ಲಿ ಅವನು ಕಲಿಯಬಹುದು. ಯಾವ ಶಿಕ್ಷಕ ಅವನಿಗೆ ಪಾಠ ಹೇಳಬಹುದು?.
ಸ್ವಾತಂತ್ರ್ಯ ಬಂದು 78 ವರ್ಷ ಆಗಿದೆ. ಸಂವಿಧಾನದ ಪೀಠಿಕೆಯಲ್ಲಿ ಸಮಾನತೆ, ಭ್ರಾತೃತ್ವ, ಸಹೋದರತ್ವ ಪ್ರತಿಪಾದಿಸಲಾಗಿದೆ. ಈಗ ಎಲ್ಲರಿಗೂ ಸಮಾನತೆ ಸಿಕ್ಕಿದೆಯಾ?. ಇತಿಹಾಸ ಗಮನಿಸಿದ್ರೆ, ಕೇವಲ 1 ವರ್ಗಕ್ಕೆ ಮಾತ್ರ ಶಿಕ್ಷಣ ಸೀಮಿತವಾಗಿತ್ತು. ಹೀಗಾದ್ರೆ ಪ್ರತಿಯೊಬ್ಬರು ಪ್ರಜ್ಞಾವಂತರಾಗಲು ಹೇಗೆ ಸಾಧ್ಯ? ಇದುವರೆಗೆ ದೇಶದಲ್ಲಿ ಸಂಸ್ಕೃತ ಭಾಷೆ ಎಲ್ಲರಿಗೂ ಸಮಾನವಾಗಿ ಸಿಗಲಿಲ್ಲ. ನಾನು ಪಿಹೆಚ್‌ಡಿ ಮಾಡಿದ್ರೂ, ಸಂಸ್ಕೃತ ಭಾಷೆಯ ಇತಿಹಾಸ ತಿಳಿಯಲು ಆಗಲಿಲ್ಲ ಅಂತಾ, ಸಚಿವ ಪರಮೇಶ್ವರ್ ಬೇಸರ ಹೊರಹಾಕಿದ್ರು.