Sandalwood: ಸದ್ಯ ಸ್ಯಾಂಡಲ್ವುಡ್ನಲ್ಲಿ ಮೋಡಿ ಮಾಡಿರುವ ಸಿನಿಮಾ ಅಂದ್ರೆ ಅದು ಪ್ರೇಮದ ಊರಲಿ ಸಿನಿಮಾ. ಈ ಸಿನಿಮಾದಲ್ಲಿ ಟಾಮ್ ಬಾಯ್ ಆಗಿ ನಟಿಸಿರುವ ರಮಿಕಾ ಶಿವು ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಬಾಲ್ಯದಲ್ಲಿ ತಮ್ಮ ಸಹೋದರಿ ಜತೆ ಜಗಳವಾಡಿದ್ದರ ಬಗ್ಗೆ ಫನ್ನಿ ಘಟನೆಯನ್ನು ರಮಿಕಾ ಶೇರ್ ಮಾಡಿದ್ದಾರೆ.
ರಮಿಕಾ ಅವರ ಸಹೋದರಿ ದೇವಕಿ. ರಮಿಕಾ ಮತ್ತು ದೇವಕಿ ಶಾಲೆಗೆ ಹೋದಾಗ, ರಮಿಕಾಳನ್ನ ರೋಸ್ಟ್ ಮಾಡಬೇಕೆಂಬ ಕಾರಣಕ್ಕೆ ಅವರ ಫ್ರೆಂಡ್ಸ್ ದೇವಕಿಯನ್ನು ವ್ಯಾನ್ ಹತ್ತಿಸಿ ಮನೆಗೆ ಕಳುಹಿಸಿದ್ದರು. ಆ ಕೋಪದಲ್ಲಿ ರಮಿಕಾ ದೇವಕಿ ಕೆನ್ನೆಗೆ ಬಾರಿಸಿದ್ದರಂತೆ. ಆಗ ದೇವಕಿ ಅತ್ತಿದ್ದು, ಎಲ್ಲಿ ಅಪ್ಪ ಅಮ್ಮನ ಬಳಿ ಈ ವಿಷಯವನ್ನೆಲ್ಲ ಹೇಳುತ್ತಾಳೋ ಎಂದು ಅಂದು ರಮಿಕಾ, ನೀನು ಇನ್ನೆಂದೂ ನನಗೆ ಅಕ್ಕ ಅಂತಾ ಕರೀಬೇಡಾ. ಹೆಸರಿನಿಂದಲೇ ಕರಿ. ಅಲ್ಲದೇ ನಾನು ಬೈಯ್ದರೆ ನನ್ನನ್ನೂ ಬೈಯ್ಯಿ, ನಾನು ಬಡಿದರೆ, ನೀನೂ ಬಡಿ ಎಂದು ಹೇಳಿದ್ದಾರೆ.
ಅಂದಿನಿಂದ ದೇವಕಿ ಗೌರವ ನೀಡು ಎಂದರೂ ಕೇಳದೇ, ಖುಷಿ ಅಂತಲೇ ಕರೀತಾಳೆ ಎಂದು ಫನ್ನಿ ಇನ್ಸಿಡೆಂಟ್ ಶೇರ್ ಮಾಡಿದ್ದಾರೆ.
ಅಲ್ಲದೇ, ದೇವಕಿಗೆ ರಮಿಕಾ ಅವರು ಇನ್ನ“ಂದು ಬಾರಿ ಕೆನ್ನೆಗೆ ಬಾರಿಸಿದ್ದು, ಈ ವೇಳೆ ಎಲ್ಲಿ ಅಪ್ಪ ಅಮ್ಮನ ಬಳಿ ಹೇಳುತ್ತಾಳೋ, ಹಾಗೆ ಹೇಳಿದರೆ ಅಪ್ಪಾ ಅಮ್ನಾ ನನ್ನನ್ನು ಎಲ್ಲಿ ಬಡಿಯುತ್ತಾರೋ ಎಂದು ರಮಿಕಾ ಡೆಟಾಲ್ ಕುಡಿದಿದ್ದರಂತೆ. ಬಳಿಕ ಹೇಗೋ ಮಾಡಿ, ರಮಿಕಾಗೆ ಚಿಕಿತ್ಸೆ ನೀಡಿ, ಸರಿ ಮಾಡಿದ್ದೆಂದು ಅವರೇ ಹೇಳಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ.




