ಸಿನಿಮಾಗೆ ಪೇಮೆಂಟ್ ಕೊಟ್ಟಿಲ್ಲ, ಶೋಕಿಗೆ ಕೆಲ್ಸ ಮಾಡ್ಬೇಡಿ: Raghu Ramappa Podcast

Sandalwood: ನಟ ರಘು ರಾಮಪ್ಪ ಅವರು 15 ವರ್ಷದಿಂದ ಸ್ಯಾಂಡಲ್‌ವುಡ್ ನಲ್ಲಿದ್ದಾರೆ. ಆದರೂ ಅವರಿಗೆ ಈ ಜರ್ನಿ ತೃಪ್ತಿ ನೀಡಿಲ್ಲ ಎಂದಿದ್ದಾರೆ. ಯಾಕೆ ಅಂತಲೂ ಕಾರಣ ಹೇಳಿದ್ದಾರೆ.

ಇನ್ನು ಸಿನಿಮಾ ಬಗ್ಗೆ ಮಾತನಾಡಿರುವ ರಘು ರಾಮಪ್ಪ , ಸಿನಿಮಾ ಶೋಕಿಗಾಗಿ ಮಾಡಬೇಡಿ. ನಿಮ್ಮ ಉದ್ದೇಶ ಉತ್ತಮವಾಗಿರಬೇಕು. ನಮ್ಮ ಟೀಂ ಇದ್ದರೆ, ಆಗ ನಾವು ಸಿನಿಮಾ ಮಾಡಿದರೆ ಅದು ಖಂಡಿತ ಗೆಲ್ಲುತ್ತದೆ. ನಾವು ಸಿನಿಮಾ ಬಗ್ಗೆ ಮಾತನಾಡಿದಾಗ, ಅದನ್ನು ಅರ್ಥ ಮಾಡಿಕ“ಳ್ಳುವವರು ಇದ್ದರೆ ಸಿನಿಮಾ ಗೆದ್ದಂತೆ ಎನ್ನುತ್ತಾೆ ರಘು ರಾಮಪ್ಪ.

ಇನ್ನು ಪೇಮೆಂಟ್‌ ಬಗ್ಗೆ ಮಾತನಾಡಿರುವ ರಘು ರಾಮಪ್ಪ, ನನಗೆ ಸರಿಯಾಗಿ ಪೇಮೆಂಟ್ ಸಿಗಲಿಲ್ಲ. ಅವಕಾಶ ನೀಡುತ್ತಾರೆ. ಆದರೆ ಪೇಮೆಂಟ್ ಕೇಳಿದಾಗ, ಏನೋ ಪೇಮೆಂಟ್ ಬೇಕೇನೋ ನಿನಗೆ. ಮುಂದಿನ ಸಿನಿಮಾದಲ್ಲಿ ಚಾನ್ಸ್ ನೀಡುತ್ತೇನೆ ಬಿಡು ಎನ್ನುತ್ತಾರೆ. ನನ್ನ ಫೋಟೋ ಹಿಡಿದು ತಾವು ಹೆಸರು ಗಳಿಸಿದರು, ಹಣ ಗಳಿಸಿದರು. ನಾನು ಕನಸು ಕಾಣುತ್ತ ಕುಳಿತೆ. ಆದರೆ ಸಿನಿಮಾನೇ ಮಾಡಿಲ್ಲ ಎಂದು ರಘು ರಾಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ಈಗ ನನಗೆ ಯಾವ ರೀತಿಯ ಸಿನಿಮಾ ಆಯ್ಕೆ ಮಾಡಬೇಕು ಎಂದು ಕಲಿತಿದ್ದೇನೆ. ಸುಮ್ಮನೆ ಬೇರೆಯವರಿಗೆ ಸಮಯ ನೀಡುವುದಿಲ್ಲ. ಸಮಯ ಅನ್ನೋದು ತುಂಬ ಬೆಲೆ ಬಾಳುವಂಥದ್ದು. ಅದಕ್ಕೆ ನಾವು ಬೆಲೆ ನೀಡಬೇಕು ಅಂತಾರೆ ರಘು ರಾಮಪ್ಪ.

About The Author