ರೇಣುಕೆ ಪಾತ್ರಕ್ಕಾಗಿ ಕುದುರೆ ಓಡಿಸೋದು & ಕತ್ತಿ ವರಸೆ ಕಲಿತೆ: ನಟಿ ಮಹತಿ ಭಟ್

Sandalwood: ನಟಿ ಮಹತಿ ಭಟ್ ಗಟ್ಟಿಮೇಳ ಸಿರಿಯಲ್ ಬಳಿಕ ಉಧೋ ಉಧೋ ರೇಣುಕಾಾ ಯಲ್ಲಮ್ಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಾದ ರೇಣುಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕೆ ಆಯ್ಕೆಯಾಗಲು ಮಹತಿ ಏನೇನು ಕಲಿತಿದ್ದಾರೆ ಅನ್ನೋ ಬಗ್ಗೆ ಅವರೇ ಹೇಳಿದ್ದಾರೆ.

ಸಿಇಟಿ ಪರೀಕ್ಷೆ ನಡೆಯುತ್ತಿರಬೇಕಾದರೆ, ರೇಣುಕಾ ಪಾತ್ರಕ್ಕಾಗಿ ಅವಕಾಶ ಬಂದಿತ್ತು. ಆಗ ಮಹತಿಗೆ ಆ ರೋಲ್ ಮಾಡಕ್ಕೆ ಆಗತ್ತಾ ಇಲ್ಲವಾ ಅನ್ನೋ ಹಾಗೆ ಅನ್ಸಿತ್ತಂತೆ. ಆದರೂ ಪಾತ್ರ ಮಾಡಲು ಓಕೆ ಎಂದ ಮಹತಿ, ತನಗೆ ಇನ್ನೂ ಜವಾಬ್ದಾರಿ ಹೆಚ್ಚಿದೆ ಅನ್ನೋದನ್ನು ಅರಿತು, ಕತ್ತಿ ವರಸೆ, ಕುದುರೆ ಸವಾರಿ ಎಲ್ಲವನ್ನೂ ಕಲಿತು, ಈ ಚಾಲೆಂಜಿಂಗ್ ರೋಲ್‌ ಮಾಡಲು ರೆಡಿಯಾದ್ರಂತೆ.

ಹೀಗೆ ರೆಡಿಯಾದ ಮಹತಿ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಆ ಪಾತ್ರಕ್ಕಾಗಿ ಎಷ್ಟಾಗತ್ತೋ ಅಷ್ಟು ಕಸರತ್ತು ಮಾಡುತ್ತ ಹೋದರು. ಇದೀಗ ಮಹತಿಯನ್ನು ಅಂಜಲಿ ಎಂದು ಕರೆಯುವುದಕ್ಕಿಂತ ಹೆಚ್ಚು ರೇಣುಕೆ ಅನ್ನೋ ಹೆಸರಲ್ಲೇ ಗುರುತಿಸುತ್ತಾರಂತೆ. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.

About The Author