Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ನಾನು ನನ್ನ ಪ್ರಯತ್ನದಿಂದ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷನಾಗಿದ್ದು ವಿನಃ ನನ್ನಪ್ಪನ ಇನ್ಫ್ಲುಯನ್ಸ್ನಿಂದ ರಾಜ್ಯಾಧ್ಯಕ್ಷನಾಗಿದ್ದಲ್ಲಾ ಎಂದು ನಿಖಿಲ್ ಕುಮಾರ್ಗೆ ಟಾಂಗ್ ನೀಡಿದ್ದಾರೆ.
ಅಲ್ಲದೇ ಅವರು ನಮ್ಮ ಸಿಎಂ ವಿರುದ್ಧ ಮಾತನಾಡುವುದನ್ನ ನಿಲ್ಲಿಸಬೇಕು ಅನ್ನೋದಷ್ಟೇ ಆಗ್ರಹ ಎಂದು ನಲಪಾಡ್ ಹೇಳಿದ್ದಾರೆ. ಅಲ್ಲದೇ ಗೌರವದಿಂದ ಮಾತನಾಡಲಿ. ನೀವೆಲ್ಲ ವಾಗ್ದಾಳಿ ನಡೆಸಬೇಕಾಗಿದ್ದು, ಪ್ರಶ್ನಿಸಬೇಕಾಗಿದ್ದು, ನಮ್ಮಂಥ ಯೂತ್ ಕಾಂಗ್ರೆಸ್ನವರನ್ನು, ಯುವ ಮೋರ್ಚಾದವರನ್ನು, ವಿನಃ ಡಿ.ಕೆ.ಶಿವಕುಮಾರ್ ಅವರಂಥ ನಾಯಕರನ್ನಲ್ಲ ಎಂದು ನಲಪಾಡ್ ತಿರುಗೇಟು ನೀಡಿದ್ದಾರೆ.
ಅಲ್ಲದೇ ನಾವು ಯಾರಿಗೆ ಗೌರವ ನೀಡಬೇಕೋ ಅವರಿಗೆ ಗೌರವ ನೀಡಿಯೇ ಮಾತನಾಡುತ್ತೇವೆ. ನೀವು ಗೌರವದಿಂದ ಇರಬೇಕು. ಮಿತಿ ಮೀರಿದರೆ ನಮಗೂ ಉತ್ತರಿಸಲು ಬರುತ್ತದೆ ಎಂದು ನಲಪಾಡ್ ನಿಖಿಲ್ ಕುಮಾರ್ಗ ಸವಾಲ್ ಹಾಕಿದ್ದಾರೆ.
ನಾವೂ ಗಾಂಧೀಜಿ ಹಿಂಬಾಲಕರೇ. 1 ಕೆನ್ನೆಗೆ ಬಡಿದರೆ ಇನ್ನ`ಂದು ಕೆನ್ನೆ ತೋರಿಸುತ್ತೇವೆ. ಅದೇ ರೀತಿ ನಾವು ಭಗತ್ ಸಿಂಗ್ ಅವರನ್ನು ನಂಬುತ್ತೇವೆ ಎಂದಿರುವ ನಲಪಾಡ್, ಗೌರವ ನೀಡಿ, ಗೌರವ ಪಡೆಯಿರಿ ಎಂದು ಹೇಳಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




