Sandalwood: ಭೀಮಾ ಸಿನಿಮಾದಲ್ಲಿ ಗಿರಿಜಾ ಪಾತ್ರದ ಮೂಲಕ ಖ್ಯಾತಿ ಗಳಿಸಿರುವ ಪ್ರಿಯಾ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಶಿಕ್ಷಕಿಯಾಗುವ ಕನಸು ಕಂಡಿದ್ದ ಪ್ರಿಯಾ ಈಗ ಕಲಾವಿದೆಯಾಗಿದ್ದಾರೆ.
ಮೂಲತಃ ಮೈಸೂರು ಹುಡುಗಿಯಾಗಿರುವ ಪ್ರಿಯಾ ಅವರ ಮನೆಯಲ್ಲಿ ಯಾರೂ ಕಲಾವಿದರಲ್ಲ. ಎಲ್ಲರೂ ಶಿಕ್ಷಕ ವೃತ್ತಿ ಮಾಡುವವರೇ. ಪ್ರಿಯಾ ಅವರು ಕೂಡ ಶಿಕ್ಷಕಿಯಾಗಬೇಕು ಅಂತಲೇ ವಿದ್ಯಾಭ್ಯಾಸ ಮುಗಿಸಿದ್ದರು. ಆದರೆ ಅವರನ್ನು ನಟನೆ, ರಂಗಭೂಮಿ ಕೈಬೀಸಿ ಕರೆದಿತು. ಹಾಗಾಗಿ ಪ್ರಿಯಾ ಕಲಾವಿದರಾಗಿದ್ದಾರಂತೆ.
ಇನ್ನು ಮನೆಯಲ್ಲಿ ಅಪ್ಪನಿಗೆ ನೃತ್ಯ ಎಂದರೆ ಇಷ್ಟ. ಹಾಗಾಗಿ ಅದು ಕೂಡ ತಾನು ಕಲಾವಿದೆಯಾಗಲು ಕಾರಣ ಅಂತಾರೆ ಪ್ರಿಯಾ. ಆದರೆ ಪ್ರಿಯಾ ಅವರು ಶಾಲೆಯಲ್ಲಿ ಶಿಕ್ಷಕರಾಗದಿದ್ದರೂ, ಪತಿ ಅವಿನಾಶ್ ಜತೆ ಸೇರಿ ಆಗಾಗ ಆಕ್ಟಿಂಗ್ ವರ್ಕ್‌ಶಾಪ್ ಮಾಡುತ್ತಾರಂತೆ.
ಮಂಡ್ಯ ರಮೇಶ್ ಸರ್ ನಡೆಸುವ ನಟನಾ ಶಾಲೆಯಲ್ಲಿ ಸೇರಿದ ಬಳಿಕ, ಅಲ್ಲಿ ರಜಾ ಮಜಾ ಸಮ್ಮರ್ ಕ್ಯಾಂಪ್ ಸೇರುತ್ತಾರೆ. ಅಲ್ಲಿ ಅಗ್ನಿ ಮತ್ತು ಮಳೆ ನಾಟಕ ನೋಡಿ ತಾನೂ ನಟಿಯಾಗಬೇಕು ಅನ್ನೋ ನಿರ್ಧಾರ ತೆಗೆದುಕ“ಂಡಿದ್ದರು ಪ್ರಿಯಾ. ಆಗ ಪ್ರಿಯಾ ಮಂಡ್ಯ ರಮೇಶ್ ಅವರ ಬಳಿ ಹೋಗಿ, ತಾನೂ ರಂಗಭೂಮಿಯಲ್ಲಿ ಕೆಲಸ ಮಾಡುವ ನಿರ್ಧಾರ ಮಾಡಿದ್ದಾಗಿ ಹೇಳಿದರು. 2 ವರ್ಷದ ಬಳಿಕ ಪ್ರಿಯಾ ಅವರಿಗೆ ನಟನೆಗೆ ಅವಕಾಶ ಸಿಕ್ಕಿತು. ಅಲ್ಲಿಂದ ಪ್ರಿಯಾ ಅವರ ನಟನಾ ಜರ್ನಿ ಶುರುವಾಯಿತು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

