Sandalwood News: ನಟಿ ಹರಿಣಿ ಶ್ರೀಕಾಂತ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕಲಾಪಯಣದ ಬಗ್ಗೆ ಹೇಳಿದ್ದಾರೆ.
ಹರಿಣಿ ಫ್ಯಾಮಿಲಿಯಲ್ಲಿ ಹೆಚ್ಚು ಸಂಗೀತಗಾರರೇ ಇದ್ದದ್ದಂತೆ. ಮನೆಯಲ್ಲಿ ಅಮ್ಮ, ಅಜ್ಜಿ ಎಲ್ಲ ಹಾಡಿದ್ರೆ, ಅಪ್ಪ ಮೃದಂಗ ನುಡಿಸುತ್ತಿದ್ದರು. ಹಾಗಾಗಿ ನಾನು ಸಂಗೀತ ಕೇಳುತ್ತಲೇ ಬೆಳೆದವಳು. ಆದರೆ ನನಗೆ ಅಟ್ರ್ಯಾಕ್ಟ್ ಆಗಿದ್ದು ನೃತ್ಯ. ಹಾಗಾಗಿ ನಾನು ಭರತನಾಟ್ಯ ಕಲಿತಿದ್ದು ಎನ್ನುತ್ತಾರೆ ಹರಿಣಿ.
ಇನ್ನು 10ನೇ ತರಗತಿ ಮುಗಿದ ತಕ್ಷಣವೇ ಹರಿಣಿ ಅವರಿಗೆ ನಿರೂಪಣೆ ಮಾಡುವ ಅವಕಾಶ ಸಿಕ್ಕಿತ್ತಂತೆ. 30 ವರ್ಷದ ಹಿಂದೆ ಹೀಗೆ ಅವಕಾಶ ಸಿಗೋದು ಸುಲಭದ ಮಾತಲ್ಲ. ಅದರಲ್ಲೂ ಹರಿಣಿ ಇಂಗ್ಲೀಷ್ ಮಿಡಿಯಂನಲ್ಲಿ ಓದಿದ್ದು. ಆದರೆ ಹರಿಣಿ ಅವರ ತಾತ ಚಿಕ್ಕಂದಿನಿಂದಲೇ ಹರಿಣಿ ಅವರಿಗೆ ಸ್ಪಷ್ಟ ಕನ್ನಡ ಹೇಳಿಕ“ಟ್ಟಿದ್ದರು. ಹೀಗಾಗಿ ಹರಿಣಿಗೆ ನಿರೂಪಣೆ ಸುಲಭವೇ ಆಗಿತ್ತು.
ಅವರ ಸ್ನೇಹಿತೆ ಮಾಡಬೇಕಾದ ಶೋ, ಯಾವುದೋ ಕಾರಣಕ್ಕೆ ಇವರಿಗೆ ಸಿಕ್ಕಿತ್ತು. ಅಂದಿನಿಂದ ಇವರ ಕಲಾಪಯಣ ಶುರುವಾಯ್ತು. ನಾನು 1 ದಿನ ಟಿವಿಲಿ ಬರಬೇಕು. ಟಿವಿಲಿ ಬಂದ್ರೆ ನಾನು ಹೇಗೆ ಕಾಣ್ತೀನಿ ಅನ್ನೋ ಕುತೂಹಲ ಇದ್ದಿದ್ದು, ಪ್ರಯತ್ನ ಮಾಡಿದ ಫಲವಾಗಿ ಹರಿಣಿಯವರು ನಿರೂಪಣೆಯಿಂದ ಕಲಾಪಯಣ ಶುರು ಮಾಡಿ, ಇದೀಗ ಕಲಾವಿದೆಯಾಗಿದ್ದಾರೆ. ಅವರ ಸಂಪೂರ್ಣ ಸಂದರ್ಶನ ನೋಡಲು ಈ ವೀಡಿಯೋ ನೋಡಿ.