Sandalwood News: ಬಿಗ್‌ಬಾಸ್ ಮೂಲಕ ಪ್ರಸಿದ್ಧರಾಗಿರುವ ನಟಿ ತನಿಷಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ತನಿಷಾ ಅವರು ಚಿಕ್ಕವರಿದ್ದಾನಿಂದಲೂ ಹಿರೋಯಿನ್ ಆಗಬೇಕು ಎಂದೇ ನಿರ್ಧರಿಸಿದ್ದರು. ಹಾಗಾಗಿ ಬಾಲ್ಯದಿಂದಲೇ, ಯಾರು ಮುಂದೆ ಏನಾಗ್ತೀಯಾ ಅಂತಾ ಕೇಳಿದಾಗಲೆಲ್ಲ ನಾನು ಹಿರೋಯಿನ್ ಆಗ್ತೀನಿ ಅಂತಾನೇ ಹೇಳ್ತಿದ್ದರಂತೆ.
ಇನ್ನು ಬಾಲ್ಯದಲ್ಲಿ ತನಿಷಾಗೆ ಲಿಪ್‌ಸ್ಟಿಕ್ ಅಂತಾ ಬಿಟ್ಟು ಬೇರೆ ಏನೂ ಮೇಕಪ್ ತಿಳಿದಿರಲಿಲ್ಲ. ಅಲ್ಲದೇ ಸಣ್ಣದಿರುವಾಗ ತನೀಷಾ ಅವರದ್ದು ಟಾಮ್ ಬಾಯ್ ಬಿಹೇವಿಯರ್ ಇತ್ತಂತೆ. ರೆಕ್ಸೋನಾ, ಪಾರ್ಕ್ ಅವೆನ್ಯೂ, ನಿವಿಯಾ ಕ್ರೀಮ್ ಇದನ್ನೆಲ್ಲಾ ಬಳಕೆ ಮಾಡ್ತಿದ್ರು. ಆದರೆ 8ನೇ ಕ್ಲಾಸ್ ಬಳಿಕ, ತನ್ನ ಸೌಂದರ್ಯದ ಬಗ್ಗೆ ತನೀಷಾ ಗಮನ ನೀಡೋಕ್ಕೆ ಶುರು ಮಾಡಿದರಂತೆ.
ಇನ್ನು ಶಾಲೆಯಲ್ಲಿ ಆ್ಯನುವಲ್ ಡೇ ಇದ್ದಾಗ, ತನೀಷಾ ರೋಡಲೆಲ್ಲ ಡಾನ್ಸ್ ಮಾಡಿಕ“ಂಡು ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಆಗ ತನೀಷಾ ತಾಯಿಗೆ ನಿಮ್ಮ ಮಗಳು ರೋಡಲೆಲ್ಲಾ ಡಾನ್ಸ್ ಮಾಡ್ತಾಳೆ, ದಾರಿ ತಪ್ಪುತ್ತಾಳೆ ಹುಷಾರು ಅಂತಾ ರೇಗಿಸುತ್ತಿದ್ದರಂತೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

