Wednesday, July 2, 2025

Latest Posts

ಇಕ್ಬಾಲ್ ಹುಸೇನ್‌ಗೆ ನೋಟೀಸ್ ಜಾರಿ ಮಾಡುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Political News: ನವೆಂಬರ್ 26ರ ಬಳಿಕ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಆಗುತ್ತಾರೆಂದು ರಾಮನಗರ ಶಾಸಕ ಇಕ್ಬಾಲ್ ಹುಸ್ಸೇನ್ ಹೇಳಿಕೆ ನೀಡಿದ್ದು, ಹಾಗೇನೂ ಇಲ್ಲ. ಸಿಎಂ ಬದಲಾಗುವ ಪ್ರಶ್ನೆಯೇ ಇಲ್ಲ. ನಾವು 2028ಕ್ಕೆ ಮತ್ತೆ ಅಧಿಕಾರಕ್ಕೆ ಬರಲು ತಯಾರಿ ನಡೆಸುತ್ತಿದ್ದೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ, ಎಲ್ಲ ನಾಯಕರು ಸೇರಿ ರಾಜ್ಯದ ಅಭಿವೃದ್ಧಿಗೆ ಮುಂದಾಗುತ್ತೇವೆ. ಅದನ್ನು ಬಿಟ್ಟು ಸಿಎಂ ಬದಲಾಗುವ ಯಾವ ವಿಷಯವೂ ಚರ್ಚೆಯಾಗಿಲ್ಲ. ನಾನು ಸಿಎಂ ಎಂದು ಇಕ್ಬಾಲ್ ಹುಸೇನ್ ಅಲ್ಲ ಯಾರೇ ಹೇಳಿದರೂ ನಾನು ಸುಮ್ಮನಿರೋದಿಲ್ಲ. ನಾನು ಇಕ್ಬಾಲ್ ಹುಸ್ಸೇನ್‌ಗೆ ನೋಟೀಸ್ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

ಅಲ್ಲದೇ, ಹುಸೇನ್ ಮಾತ್ರವಲ್ಲ, ಬಾಲಕೃಷ್ೞ ಆಗಲಿ ಯಾರೇ ಆಗಲಿ, ಈ ಬಗ್ಗೆ ಹೇಳಿಕೆ ನೀಡುವಂತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ ಚರ್ಚೆ ನಡೆದಿದ್ದು, ನಾವೆಲ್ಲ ಸೇರಿ, ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯ ಮಾಡಬೇಕು ಅಂತಾ ಚರ್ಚಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಸಂಘಟನೆಯ ವರ್ಷ. ಆ ಬಗ್ಗೆ ಮಾತನಾಡಲು ರಣ್ದೀಪ್ ಸೂರ್ಜೇವಾಲ ಬಂದಿದ್ದರು. ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಅಲ್ಲ ಎಂದು ಡಿಕೆಶಿ ಗುಡುಗಿದ್ದಾರೆ.

- Advertisement -

Latest Posts

Don't Miss