ಊದು ಬತ್ತಿ ಮತ್ತು ಧೂಪವನ್ನ ಭಾರತದಲ್ಲಿ ಹಲವರು ಬಳಸುತ್ತಾರೆ. ಅದರಲ್ಲೂ ಹಿಂದುಗಳ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಊದುಬತ್ತಿ ಬೆಳಗಿ ದೇವರ ಪೂಜೆ ಮಾಡಲಾಗುತ್ತದೆ.
ಅಷ್ಡೇ ಅಲ್ಲದೇ ಧಾರ್ಮಿಕ ಕೇಂದ್ರ, ದೇವಸ್ಥಾನ, ಧ್ಯಾನ ಕೇಂದ್ರಗಳಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಊದುಬತ್ತಿಯ ಉಪಯೋಗ ಮಾಡುತ್ತಾರೆ. ಭಾರತದಲ್ಲಿಷ್ಟೇ ಅಲ್ಲದೇ, ವಿದೇಶದಲ್ಲೂ ಊದುಬತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಿದೇಶಿಗರು ಕೂಡ ಆಧ್ಯಾತ್ಮದತ್ತ ಮುಖ ಮಾಡಿದ್ದು, ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದಾರೆ. ಧ್ಯಾನ ಮಾಡುವುದು, ಯೋಗ ಮಾಡುವುದಲ್ಲದೇ ಕೆಲ ವಿದೇಶಿಗರು ತಮ್ಮ ಮನೆಯಲ್ಲಿ ಧೂಪ, ಊದು ಬತ್ತಿಯ ಉಪಯೋಗ ಮಾಡುತ್ತಿದ್ದಾರೆ.
ಇಂಥ ಊದು ಬತ್ತಿಯ ಉದ್ಯೋಗ ನೀವು ಶುರು ಮಾಡುವುದಿದ್ದರೆ, ನಾವಿವತ್ತು ನಿಮಗೆ ಈ ಉದ್ಯಮ ಶುರು ಮಾಡುವುದು ಹೇಗೆ..? ಇದಕ್ಕೆ ಯಾವ ಲೈಸೆನ್ಸ್ ಪಡಿಯಬೇಕು ಅನ್ನೋದರ ಬಗ್ಗೆ ಮಾಹಿತಿ ನೀಡ್ತೀವಿ.
ದೊಡ್ಡ ಮಟ್ಟದಲ್ಲಿ ನೀವು ಊದುಬತ್ತಿ ಉದ್ಯಮ ಆರಂಭಿಸುವುದಿದ್ದರೆ, ವಿದೇಶದಲ್ಲೂ ನಿಮ್ಮ ಪ್ರಾಡಕ್ಟ್ ಸೇಲ್ ಮಾಡಬೇಕೆಂದರೆ ಟ್ರೇಡ್ ಲೈಸೆನ್ಸ್, ಬ್ರ್ಯಾಂಡ್ ನೇಮ್ ಗಾಗಿ ಲೈಸೆನ್ಸ್, ನೋ ಆಬ್ಜಕ್ಷನ್ ಸರ್ಟಿಫಿಕೇಟ್ ಕೂಡ ತೆಗೆದುಕೊಳ್ಳಬೇಕಾಗುತ್ತದೆ.
ಇನ್ನು ಊದುಬತ್ತಿ ತಯಾರಿಸಲು ಬೇಕಾಗಿರುವ ಕಚ್ಚಾವಸ್ತುಗಳ ಬಗ್ಗೆ ಮಾತನಾಡೋದಾದ್ರೆ, ಪ್ರಿ ಮಿಕ್ಸ್ ಊದುಬತ್ತಿ ಪೌಡರ್, ಊದುಬತ್ತಿ ಕಡ್ಡಿ, ಡಿಇಪಿ ಎಣ್ಣೆ, ಸುಗಂಧ ದ್ರವ್ಯ, ಊದುಬತ್ತಿ ಪ್ಯಾಕಿಂಗ್ ಮಟಿರಿಯಲ್‌ನ ಅವಶ್ಯಕತೆ ಇರುತ್ತದೆ.
ಇನ್ನು ಕೆಲಸಗಾರರನ್ನಿಟ್ಟುಕೊಂಡು ನೀವು ಊದುಬತ್ತಿ ತಯಾರಿಸಬಹುದು. ಅಲ್ಲದೇ ಊದುಬತ್ತಿ ಮಾಡುವ ಮಷಿನ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಮಷಿನ್ ಮೂಲಕ ನೀವು ದಿನಕ್ಕೆ ಅತಿ ಹೆಚ್ಚು ಊದುಬತ್ತಿ ತಯಾರಿಸಬಹುದು. ಆದ್ರೆ ಮಷಿನ್ ಬಳಸುವಾಗ 2ರಿಂದ 3 ಕೆಲಸಗಾರರ ಅವಶ್ಯಕತೆ ಇರುತ್ತದೆ.
ಇನ್ನು ಮಷಿನ್ ಬೆಲೆ ನೋಡುವುದಾದರೆ 50ರಿಂದ 80 ಸಾವಿರದ ತನಕ ಈ ಮಷಿನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರೊಂದಿಗೆ ವೇಯ್ಟಿಂಗ್ ಮಷಿನ್ ಕೂಡ ಖರೀದಿಸಬೇಕಾಗುತ್ತದೆ. ಊದುಬತ್ತಿ ತಯಾರಿಸುವ ಮೊದಲು ಎಷ್ಟು ಪ್ರಮಾಣದ ಕಚ್ಚಾವಸ್ತು ಬಳಸಬೇಕೆಂಬುದನ್ನ ವೇಯ್ಟ್ ಮಾಡಿ ನೋಡಬೇಕಾಗುತ್ತದೆ.
ಮೊದಲು ನಿಮ್ಮ ನಗರ, ರಾಜ್ಯ, ಅಕ್ಕಪಕ್ಕದ ರಾಜ್ಯದಲ್ಲಿ ಈ ಪ್ರಾಡಕ್ಟನ್ನ ಮಾರಿ. ಈ ರೀತಿ ನಿಮ್ಮ ಪ್ರಾಡಕ್ಟ್ ಲಾಭ ಗಳಿಸುತ್ತ, ಒಳ್ಳೆಯ ಪ್ರಚಾರ ಸಿಕ್ಕ ಮೇಲೆ ವಿದೇಶಕ್ಕೆ ರಫ್ತು ಮಾಡಬಹುದು. ನಿಮ್ಮ ಪ್ರಾಡಕ್ಟ್‌ನ ಕ್ವಾಲಿಟಿ, ಕ್ವಾಂಟಿಟಿ, ಪ್ರಚಾರ, ಕೆಲಸದ ಮೇಲೆ ಲಾಭ ಡಿಪೆಂಡ್ ಆಗಿರುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.