ಕರ್ಪೂರ.. ಮನೆಯಲ್ಲಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರದ ವೇಳೆ ಅಗತ್ಯವಿರುವ ವಸ್ತುಗಳಲ್ಲಿ ಒಂದು. ಎಲ್ಲ ದೇವಸ್ಥಾನಗಳಲ್ಲೂ, ಪೂಜೆ ಪುನಸ್ಕಾರದಲ್ಲೂ ಇದನ್ನ ಬಳಸುವುದರಿಂದ ಇದರ ವ್ಯಾಪಾರ ಮಾಡಿದ್ರೆ ಉತ್ತಮ ಲಾಭ ಗಳಿಸಬಹುದು. ಇವತ್ತು ನಾವು ಇದರ ಬಗ್ಗೆ ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ನೀವು ಕರ್ಪೂರದ ಉದ್ಯಮ ಶುರುಮಾಡಬೇಕಾದ್ರೆ, ನಿಮ್ಮ ಬಳಿ ಕರ್ಪೂರ ಮಾಡುವ ಮಷಿನ್ ಇರಬೇಕು. ಈ ಮಷಿನ್ ಬೆಲೆ 50 ಸಾವಿರ ರೂಪಾಯಿ ತನಕ ಇರುತ್ತದೆ. ಇನ್ನು ಕರ್ಪೂರ ಮಾಡಲು ಕೆಲ ಕಚ್ಚಾ ವಸ್ತುಗಳ ಅವಶ್ಯಕತೆ ಇರುತ್ತದೆ. ಕರ್ಪೂರ ತಯಾರಿಸಲು ಕ್ಯಾಂಪರ್ ಪೌಡರ್ ಬೇಕಾಗುತ್ತದೆ.
ಈ ಉದ್ಯಮ ಶುರು ಮಾಡಲು ನಿಮಗೆ ಕೆಲಸಗಾರರ ಅವಶ್ಯಕತೆ ಇರೋದಿಲ್ಲಾ. ಇದರೊಂದಿಗೆ ರೆಡಿ ಮಾಡಿದ ಕರ್ಪೂರವನ್ನು ಪ್ಯಾಕ್ ಮಾಡಿ ಮಾರಲು ಪ್ಯಾಕಿಂಗ್ ಮಷಿನ್ ಕೂಡ ಪರ್ಚೇಸ್ ಮಾಡಬೇಕಾಗುತ್ತದೆ.
ಇನ್ನು ಪ್ರಚಾರ ಮಾಡಲು ನೀವು ಆನ್‌ಲೈನ್ ಸಹಾಯ ಪಡೆಯಬಹುದು. ಅಥವಾ ಯಾವುದಾದರೂ ಪೂಜಾ ಸಾಮಗ್ರಿ ಮಾರುವ ಅಂಗಡಿಯಲ್ಲಿ ನಿಮ್ಮ ಪ್ರಾಡಕ್ಟ್ ಮಾರಬಹುದು. ಅಥವಾ ಡೈರೆಕ್ಟ್ ಆಗಿ ದೇವಸ್ಥಾನದ ಬಳಿ ಇರುವ ಅಂಗಡಿಗಳಲ್ಲಿ ನಿಮ್ಮ ಪ್ರಾಡಕ್ಟ್ ಮಾರಾಟ ಮಾಡಬಹುದು.