Monday, December 23, 2024

Latest Posts

ಹಣ್ಣಿನ ವ್ಯಾಪಾರ ಮಾಡುವವರಿಗೆ ಇಲ್ಲಿದೆ ಕೆಲ ಟಿಪ್ಸ್..

- Advertisement -

ಹಣ್ಣು- ತರಕಾರಿ ವ್ಯಾಪಾರ ಮಾಡುವ ಐಡಿಯಾ ಇದ್ದರೆ ಅಂಥವರಿಗೆ ನಾವಿವತ್ತು ಕೆಲ ಐಡಿಯಾಗಳನ್ನ ನೀಡಲಿದ್ದೇವೆ. ಹಣ್ಣು ತರಕಾರಿ ವ್ಯಾಪಾರ ಮಾಡೋಕ್ಕೆ ಒಳ್ಳೆ ಜಾಗವನ್ನ ಗೊತ್ತು ಮಾಡಿಕೊಳ್ಳಿ. ಜನಜಂಗುಳಿ ಇರುವ ಪ್ರದೇಶ, ಮಾರುಕಟ್ಟೆ, ಮಾಲ್ ಬಳಿ, ಇನ್ನಿತರೆ ದೊಡ್ಡ ದೊಡ್ಡ ಶಾಪ್‌ಗಳ ಬಳಿ ನೀವು ನಿಮ್ಮ ಹಣ್ಣಿನ ಅಂಗಡಿ ಓಪೆನ್ ಮಾಡಬಹುದು.

ಹೋಲ್‌ಸೇಲ್ ಅಂಗಡಿಯಿಂದ ಕಡಿಮೆ ಬೆಲೆಗೆ ತಂದು ಹಣ್ಣು ತರಕಾರಿ ವ್ಯಾಪಾರ ಮಾಡಬಹುದು. ಜನ ಹೆಚ್ಚಾಗಿ ಬೆಳ್ಳಂಬೆಳಿಗ್ಗೆ ಫ್ರೆಶ್ ತರಕಾರಿ ಸಿಗುತ್ತದೆ ಎಂಬ ಕಾರಣಕ್ಕೆ ಬರುವುದರಿಂದ ನೀವು ಮಾರುವ ಹಣ್ಣು ತರಕಾರಿ ಆದಷ್ಟು ಫ್ರೆಶ್ ಆಗಿರುವಂತೆ ನೋಡಿಕೊಳ್ಳಿ.

ಇನ್ನು ಹಬ್ಬ ಹರಿದಿನಗಳಲ್ಲಿ, ಆಯಾ ಸೀಸನ್‌ಗಳಲ್ಲಿ ವಿವಿಧ ತರಹದ ಹಣ್ಣುಗಳಿಗೆ ಬಹುಬೇಡಿಕೆ ಇರುತ್ತದೆ. ಅಂಥ ಸಮಯದಲ್ಲಿ ಚಾಣಾಕ್ಷತನದಿಂದ ವ್ಯಾಪಾರ ಮಾಡಿದಲ್ಲಿ ಒಳ್ಳೆಯ ಲಾಭ ಬರುತ್ತದೆ.

ಇನ್ನು ಬಂಡವಾಳದ ಬಗ್ಗೆ ನೋಡುವುದಾದರೆ, ಅಂಗಡಿಯ ಅಡ್ವಾನ್ಸ್, ಪ್ರತಿ ತಿಂಗಳ ಬಾಡಿಗೆ, ತರಕಾರಿ ಹಣ್ಣುಗಳ ಖರ್ಚು ಎಲ್ಲವನ್ನೂ ನೋಡಿದರೆ. ಸುಮಾರು ಒಂದುವರೆ ಎರಡು ಲಕ್ಷ ರೂಪಾಯಿ ಈ ವ್ಯಾಪಾರ ಆರಂಭಿಸುವಾಗ ಎತ್ತಿಡಬೇಕಾಗುತ್ತದೆ. ಅಂಗಡಿಗೆ ಐವತ್ತರಿಂದ ಒಂದು ಲಕ್ಷದವರೆಗೆ ಅಡ್ವಾನ್ಸ್ ನೀಡಬೇಕಾಗುತ್ತದೆ. ಮತ್ತು ಪ್ರತಿ ತಿಂಗಳು 8ರಿಂದ 10 ಸಾವಿರ ಬಾಡಿಗೆ ಬರಬಹುದು. ಇನ್ನು ಹಣ್ಣು ತರಕಾರಿಗಳನ್ನ ಕೊಂಡುಕೊಂಡಳ್ಳು ತಿಂಗಳಿಗೆ ಸಪರೇಟ್ ಆಗಿ ಖರ್ಚಾಗುತ್ತದೆ. ಆದ್ದರಿಂದ ಈ ವ್ಯಾಪಾರಕ್ಕೆ ಒಂದುವರೆ ಲಕ್ಷ ಬಂಡವಾಳವಂತೂ ಹೂಡಲೇಬೇಕು. ಇನ್ನು ವ್ಯಾಪಾರ ಉತ್ತಮವಾಗಬೇಕಂದ್ರೆ ನಿಮ್ಮ ಮಾತು ಹಿತ ಮಿತವಾಗಿರಲಿ. ನೀವು ಮಾರೋ ಹಣ್ಣು ತರಕಾರಿ ಒಳ್ಳೆಯ ಕ್ವಾಲಿಟಿಯದ್ದಾಗಿರಲಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss