ಮೊದಲೆಲ್ಲ ಮದುವೆ ಮನೆ ಅಂದ್ರೆ ಅತಿಥಿಗಳ ಆಗಮನ, ಪುಟ್ಟ ಪುಟ್ಟ ಮಕ್ಕಳ ಗೌಜಿ ಗಲಾಟೆ, ಮದುವೆ ಮನೆಲಿ ರುಚಿ ರುಚಿಯಾದ ತಿಂಡಿ, ಸಂಬಂಧಿಕರ ಹರಟೆ, ಮಧುಮಕ್ಕಳ ಮನೆಯವರಿಗೆ ಮದುವೆ ಬಗ್ಗೆ ಓಡಾಟ. ಮದುವೆ ಮನೇಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸ. ಮನೆ ಮುಂದೆ ಚಪ್ಪರ. ಮನೆ ಗಂಡು ಮಕ್ಕಳೆಲ್ಲ ಸೇರಿ ಮನೆಗೆ ಹೂವಿನ ಅಲಂಕಾರ ಮಾಡೋದು. ಮಧುಮಗಳ ಅಕ್ಕ ತಂಗಿ, ಚಿಕ್ಕಮ್ಮ ದೊಡ್ಡಮ್ಮ ಎಲ್ಲ ಸೇರಿ ಮಧುಮಗಳನ್ನ ಶೃಂಗಾರ ಮಾಡೋದು. ಮನೆಯನ್ನ ಚಂದ ಮಾಡಿ ಅಲಂಕರಿಸೋದು. ಮದುವೆ ಮನೆ ಅಂದರೆ ಒಂಥರಾ ಟೆನ್ಶನ್- ಎಂಜಾಯ್‌ಮೆಂಟ್, ಒಂದು ಭಾವನಾತ್ಮಕ ಕಾರ್ಯಕ್ರಮ ಆಗಿರ್ತಿತ್ತು.
ಆದ್ರೆ ಈಗಿನ ಕಾಲದಲ್ಲಿ ಕೆಲವರು ಮದುವೆ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳೋಕ್ಕೆ ಇಷ್ಟಪಡಲ್ಲ. ಹುಡುಗ- ಹುಡುಗಿ ಹುಡ್ಕೋಕ್ಕೆ ಬ್ರೋಕರ್ಸ್ ಇರ್ತಾರೆ. ಮದುವೆ ಜವಾಬ್ದಾರಿ ತೊಗೋಳಕ್ಕೆ ವೆಡ್ಡಿಂಗ್ ಪ್ಲಾನರ್ಸ್ ಇರ್ತಾರೆ. ಅದಕ್ಕಾಗಿಯೇ ಲಕ್ಷ ಲಕ್ಷ ಖರ್ಚಾದ್ರೂ ಪರವಾಗಿಲ್ಲ, ಮನೆ ಜನ ಮದುವೆಯನ್ನ ಎಂಜಾಯ್ ಮಾಡೋಕ್ಕೆ ಇಷ್ಟಾ ಪಡ್ತಾರೆ. ಹಾಗಾಗಿ ಈಗ ವೆಡ್ಡಿಂಗ್ ಪ್ಲಾನರ್‌ಗಳ ಮೂಲಕ ಮದುವೆ ಮಾಡಿಸೋದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಸೆಲೆಬ್ರಿಟಿಗಳಂತೂ ಹೀಗೆ ಮಾಡೋದು.
ಹಾಗಾದ್ರೆ ವೆಡ್ಡಿಂಗ್ ಪ್ಲಾನರ್ ಆಗೋದಕ್ಕೆ ಏನೇನು ಬೇಕು. ಯಾವ ಯಾವ ಕೆಲಸ ಮಾಡುವವರು ನಿಮ್ಮ ಗ್ರೂಪ್‌ನಲ್ಲಿ ಇರಬೇಕು. ಮದುವೆ ಮನೆಯಲ್ಲಿ ಎಂತಹ ಜವಾಬ್ದಾರಿಯನ್ನ ನೀವು ನಿಭಾಯಿಸಬೇಕಾಗತ್ತೆ ಅನ್ನೋದರ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.
ಮೊದಲನೆಯದಾಗಿ ವೆಡ್ಡಿಂಗ್ ಪ್ಲಾನರ್ ಉದ್ಯಮ ಶುರು ಮಾಡೋಕ್ಕೆ ಚಿಕ್ಕ ಆಫೀಸ್ ಇರಬೇಕು. ಮದುವೆ ಮನೇಲಿ ಬೇಕಾಗಿರುವ ಸಾಮಗ್ರಿಗಳನ್ನ ತರೋದಕ್ಕೆ ಜನ, ಕೇ ಟರಿಂಗ್ ಟೀಮ್, ಮಧುಮಗಳಿಗೆ ಅಲಂಕಾರ ಮಾಡೋಕ್ಕೆ ಬ್ಯೂಟಿಶಿಯನ್ಸ್, ಮದುವೆ ಮನೆ ಜನರಿಗೆ ಮೆಹಂದಿ ಹಾಕೋದಕ್ಕೆ ಜನ, ಮಧುಮಕ್ಕಳ ಡ್ರೆಸ್ ಡಿಸೈನರ್, ಮನೆಗೆ- ಮದುವೆ ಮಂಟಪಕ್ಕೆ ಅಲಂಕಾರ ಮಾಡುವವರು.
ಮದುವೆಗೆ ಬರುವರನ್ನ ಕರೆತರೋಕ್ಕೆ ವೆಹಿಕಲ್‌ಗಳು, ಆಮೇಲೆ ಮಧುಮಕ್ಕಳ ಫೋಟೋ ಶೂಟ್, ವೀಡಿಯೋ ಶೂಟ್ ಮಾಡುವವರು. ಇವರೆಲ್ಲ ವೆಡ್ಡಿಂಗ್ ಪ್ಲಾನರ್ ಗ್ರೂಪ್‌ನಲ್ಲಿ ಇರೋದು ತುಂಬಾ ಮುಖ್ಯ. ಇನ್ನು ಕೆಲ ಮದುವೆಗಳಲ್ಲಿ ಮೋಜು ಮಸ್ತಿ ಹಾಡು ಕುಣಿತ ಇವೆಲ್ಲವನ್ನ ಬಯಸುತ್ತಾರೆ. ಅಂಥ ವೇಳೆ ಮ್ಯೂಸಿಕ್ ಬ್ಯಾಂಡ್‌ಗಳ ವ್ಯವಸ್ಥೆಯೂ ಮಾಡಬೇಕಾಗುತ್ತದೆ.
ಮದುವೆ ಮನೆಯಲ್ಲಿ ಕೆಲವು ಸಲ ಅಡುಗೆ ಸಾಮಗ್ರಿಯಲ್ಲಿ ಕಡಿಮೆಯಾಗುವುದೋ, ಮಧುಮಗಳಿಗೆ ಮೇಕಪ್ ಮಾಡೋಕ್ಕೆ ಬರಬೇಕಾಗಿರೋ ಬ್ಯೂಟಿಶಿಯನ್ಸ್ ಕೈ ಕೊಡುವುದೋ, ಯಾವುದಾದರೂ ವಸ್ತು ಕಳೆದು ಹೋಗುವುದೋ, ಅತಿಥಿ ಸತ್ಕಾರದಲ್ಲಿ ಕೊಂಚ ಏರುಪೇರಾಗುವುದು, ಪವರ್ ಕಟ್ ಆಗುವುದು, ಕೇಟರಿಂಗ್‌ನವರು ಕೈ ಕೊಡುವುದು, ಇಂಥದ್ದೆಲ್ಲ ಆಗುತ್ತಿರುತ್ತದೆ. ಇಂಥ ಸಮಸ್ಯೆಗಳನ್ನ ಜಾಣತನದಿಂದ ನಿಭಾಯಿಸುವ ರೀತಿಯನ್ನ ವೆಡ್ಡಿಂಗ್ ಪ್ಲಾನರ್ ಅರಿತಿರಬೇಕು.
ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ನಿಮ್ಮ ಗ್ರೂಪ್‌ನ ಯಾವುದಾದರೂ ಸದಸ್ಯರು ಮದುವೆಗೆ ಬಂದ ಅತಿಥಿಗಳ ಜೊತೆ ಸೊಕ್ಕಿನಿಂದ, ಸಿಟ್ಟಿನಿಂದ ಮಾತನಾಡಿದ್ದಲ್ಲಿ, ಅಥವಾ ಅಡುಗೆ ಮಾಡುವಾಗ ಸ್ವಚ್ಛತೆ ನಿಭಾಯಿಸದಿದ್ದಲ್ಲಿ, ಊಟ ಬಡಿಸುವಾಗ ತಾಳ್ಮೆ ಕಳೆದುಕೊಂಡಲ್ಲಿ ನಿಮ್ಮ ಕಂಪನಿಗೆ ಧಕ್ಕೆ ಬರುವುದು ಖಚಿತ.
ಆದ್ದರಿಂದ ನಿಮ್ಮ ಗ್ರೂಪ್‌ನ ಪ್ರತಿ ಸದಸ್ಯನ ಮಾತು ಮಿತವಾಗಿ ಹಿತವಾಗಿ ಎಲ್ಲರಿಗೂ ಇಷ್ಟವಾಗುವಂತಿರಬೇಕು. ಮುಂದಿನ ಮದುವೆಯಲ್ಲೂ ಕೂಡ ಅವರು ನಿಮ್ಮನ್ನೇ ವೆಡ್ಡಿಂಗ್ ಪ್ಲಾನರ್ ಆಗಿ ಇನ್ವೈಟ್ ಮಾಡುವಂತಾಗಬೇಕು.
ಇಷ್ಟೇ ಅಲ್ಲದೇ, ಖರ್ಚು ವೆಚ್ಚಗಳ ಲೆಕ್ಕವನ್ನ ಪರ್ಫೆಕ್ಟ್ ಆಗಿ ನಿಭಾಯಿಸುವ ಅಕೌಂಟೆಂಟ್ ಇರಬೇಕು. ನಿಮ್ಮ ಕಂಪನಿ ಹೆಸರನ್ನ ಸ್ಪ್ರೆಡ್ ಮಾಡೋಕ್ಕೆ, ಫೇಮಸ್ ಮಾಡೋಕ್ಕೆ ವಿಸಿಟಿಂಗ್ ಕಾರ್ಡ್ ಮಾಡಿಸಿಕೊಳ್ಳುವುದು ಉತ್ತಮ. ಅಲ್ಲದೇ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಪ್‌ನಲ್ಲಿ ನಿಮ್ಮ ಕಂಪನಿ ಬಗ್ಗೆ ಪ್ರಚಾರ ಆರಂಭಿಸಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ