ಹಲವರು ಕಡುಬಡತನವನ್ನ ಕಂಡು ಶ್ರೀಮಂತರಾಗುತ್ತಾರೆ. ತಿನ್ನಲು ಅನ್ನವಿಲ್ಲದ ದಿನವನ್ನೂ ನೋಡಿರ್ತಾರೆ. ಪ್ರತಿದಿನ ಮೃಷ್ಟಾನ್ನ ಭೋಜನ ತಿನ್ನುವ ಸಮಯವನ್ನು ನೋಡಿರುತ್ತಾರೆ. ಈ ಶ್ರೀಮಂತಿಕೆ ಹಾಗೆ ಉಳಿಸಿಕೊಳ್ಳುವ ಅರ್ಹತೆ ಇರುವವನು ನಿಯತ್ತಾಗಿ ದುಡಿದು ತಿನ್ನುವವನು ಮಾತ್ರ. ಹಾಗಾದ್ರೆ ಶ್ರೀಮಂತರಾಗಲು ನಾವು ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋದರ ಬಗ್ಗೆ ನಾವಿವತ್ತು ಕೆಲ ಟಿಪ್ಸ್ಗಳನ್ನ ನೀಡಲಿದ್ದೇವೆ.

ಮೊದಲನೆಯದಾಗಿ ಪರಿವಾರ ಸಮೇತರಾಗಿ ಶ್ರೀಮಂತರಾಗಲು ಪ್ರಯತ್ನಿಸಬೇಕು. ನಿಮ್ಮ ಕೆಲಸಕ್ಕೆ ಪರಿವಾರ ಸಾಥ್ ನೀಡದಿದ್ದರೆ ಏನೂ ಸಾಧ್ಯವಾಗುವುದಿಲ್ಲ. ಕುಟುಂಬ ಎಂದರೆ ಕಲಹ ಎಂಬುದು ಸಾಮಾನ್ಯ. ಆದ್ರೆ ಸಕ್ಸಸ್ ಕಂಡುಕೊಳ್ಳಬೇಕಾದ್ರೆ ಎಲ್ಲರಿಗೂ ಪರಿವಾರದ ಸಾಥ್ ಬೇಕೆ ಬೇಕು.
ಅಪ್ಪ ದುಡಿಯಲು ಹೋದ್ರೆ, ಅಮ್ಮ ಮನೆಯಿಂದಲೇ ಏನಾದರೂ ಉದ್ಯಮ ಶುರು ಮಾಡಬಹುದು. ಇನ್ನು ಮಕ್ಕಳ ಕರ್ತವ್ಯ ಅಂದ್ರೆ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರುವುದು. ಅಮ್ಮನ ಮನೆಕೆಲಸಕ್ಕೆ ಸಹಾಯ ಮಾಡುವುದು.
ಯಾವ ಕುಟುಂಬದಲ್ಲಿ ಓರ್ವ ದುಡಿದು ಎಲ್ಲರೂ ಕೂತು ತಿನ್ನುವರೋ ಅಂಥವರು ಶ್ರೀಮಂತರಾಗಲು ಸಾಧ್ಯವಿಲ್ಲ. ಆದ್ರೆ ಒಬ್ಬರ ದುಡಿಮೆಗೆ ಎಲ್ಲರೂ ಸಾಥ್ ಕೊಟ್ಟಾಗ ಅವರು ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಇನ್ನೊಂದು ಮಾತಂದ್ರೆ ನಿಮ್ಮ ಶ್ರೀಮಂತಿಕೆ ಉಳಿಯಲು ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮತ್ತು ಗುಣಗಳನ್ನ ಕಲಿಸುವುದು ಉತ್ತಮ. ಅಪ್ಪ ದುಡಿದ ಹಣವನ್ನ ಜೋಪಾನವಾಗಿ ಉಳಿಸಿ, ತನ್ನ ಮುಂದಿನ ಪೀಳಿಗೆಗೂ ಸಹಾಯ ಮಾಡುವ ಗುಣ ಅವರಿಗಿರಬೇಕು. ಅದನ್ನು ಬಿಟ್ಟು ಅಪ್ಪ ಹೇಗೂ ಆಸ್ತಿ ಮಾಡಿದ್ದಾನೆ ನಾವು ಕೂತು ತಿನ್ನೋಣ ಎಂಬ ಗುಣ ಮಕ್ಕಳಿಗೆ ಬಾರದಂತೆ ನೋಡಿಕೊಳ್ಳಬೇಕು.
ಅಲ್ಲದೇ ಶ್ರೀಮಂತಿಕೆ ಬಂದ ಮೇಲೆ ಅಹಂಕಾರ ತೋರಿಸುವುದು. ಸಿಟ್ಟು, ದರ್ಪದಿಂದ ಮಾತನಾಡುವುದೆಲ್ಲ ಮಾಡಬಾರದು. ಅಲ್ಲದೇ ಎಷ್ಟೇ ಶ್ರೀಮಂತರಾದರೂ ನಿಮ್ಮ ಹಳೆಯ ದಿನಗಳನ್ನ ಮಾತ್ರ ಮರೆಯಬೇಡಿ. ನಿಮ್ಮ ಧಾರ್ಮಿಕ ಕಾರ್ಯ, ಪೂಜೆ ಪುನಸ್ಕಾರಗಳನ್ನ ಮಾಡುವುದನ್ನು ಕೂಡ ಮರೆಯಬೇಡಿ.
ಇಲ್ಲಿ ಎಲ್ಲಕ್ಕಿಂತ ಮುಖ್ಯವಾದುದೆಂದರೆ ಸಂಬಂಧಕ್ಕೆ ಬೆಲೆ ಕೊಡುವುದು. ಪರಿವಾರದ ಬೆಂಬಲ ಪಡೆಯುವುದು. ಹೆಚ್ಚಿನ ಖರ್ಚುವೆಚ್ಚಕ್ಕೆ ಕಡಿವಾಣ ಹಾಕಿ, ಉಳಿತಾಯ ಮಾಡುವುದನ್ನು ಕೂಡಾ ನಾವು ಗಮನದಲ್ಲಿಡಬೇಕು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.




