Sunday, September 8, 2024

Latest Posts

Idga Garden: ಈದ್ಗಾ ಮೈದಾನದ ಗಣಪತಿ ಹೆಸರಲ್ಲಿ ಅವ್ಯವಹಾರದ ಆರೋಪ:

- Advertisement -

ಹುಬ್ಬಳ್ಳಿ; ವಾಣಿಜ್ಯನಗರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಟಾಪನೆಗೆ ಸಾಕಷ್ಟು ಹೋರಾಟ ನಡೆದಿದೆ. ಅದೆಷ್ಟೋ ಜನರು ಕೆಲಸ ಕಾರ್ಯವನ್ನು ಬಿಟ್ಟು ಗಣಪತಿ ಪ್ರತಿಷ್ಟಾಪನೆಗೆ ಪಟ್ಟು ಹಿಡಿದು ಅನುಮತಿ ಪಡೆದುಕೊಂಡಿದ್ದಾರೆ. ಸಾಕಷ್ಟು ವಿರೋಧದ ನಡುವೆಯೂ ವಿಜೃಂಭಣೆಯಿಂದ ಗಣಪತಿ ಉತ್ಸವ ನಡೆಸಲಾಯಿತು. ಆದರೆ ಇದೆಲ್ಲದರ ಮಧ್ಯದಲ್ಲಿ ಈಗ ಗಂಭೀರ ಆರೋಪವೊಂದು ಕೇಳಿ ಬಂದಿದೆ.

ಹುಬ್ಬಳ್ಳಿಯ ಪ್ರತಿಷ್ಠಿತ ಈದ್ಗಾದಲ್ಲಿ ಕಳೆದ ವರ್ಷ ಗಣಪತಿ ಪ್ರತಿಷ್ಟಾಪನೆ ಮಾಡಿ ಕಾಣಿಕ ಹಣದಲ್ಲಿ ದೊಡ್ಡ ಅವ್ಯವಹಾರ ಮಾಡಲಾಗಿದೆ ಎಂದು ಹಿಂದೂಸ್ತಾನ ಜನತಾ ಪಾರ್ಟಿ ಗಂಭೀರವಾಗಿ ಆರೋಪಿಸಿದೆ. ಬಿಜೆಪಿ ನಾಯಕರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಲ್ಲದೇ ಕಾಣಿಕೆ ಹಣವನ್ನು ಏನು ಮಾಡಿದ್ದಾರೆ ಎಂಬುವುದರ ಬಗ್ಗೆ ಯಾವುದೇ ಲೆಕ್ಕ ತೋರಿಸದೇ ಲಕ್ಷಾಂತರ ರೂಪಾಯಿ ನುಂಗಿದ್ದಾರೆ. ಅಲ್ಲದೇ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ನಾವು ಸುಮಾರು ದಿನ ಹೋರಾಟ ಮಾಡಿದ್ದೇವೆ. ಆದರೆ ಬೇರೆಯವರಿಗೆ ಅನುಮತಿ ನೀಡಿದ್ದಾರೆ. ಇದರಲ್ಲಿ ಕೂಡ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ. ಮುಖ್ಯವಾಗಿ ಗಣಪತಿ ಕಾಣಿಕೆ ಹಣದಲ್ಲಿಯೇ ಗೋಲಮಾಲ್ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಅಲ್ಲದೇ ಈದ್ಗಾದಲ್ಲಿ ಗಣಪತಿ ಪ್ರತಿಷ್ಟಾಪನೆಯ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಹಿಂದೂ ಸಂಘಟನೆಯೇ ಆರೋಪ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

ಸಾರ್ವಜನಿಕರ ಹಣವನ್ನು ತಿಂದು ತೇಗಿರುವಲ್ಲಿ ಸಾಕಷ್ಟು ಪ್ರಭಾವಿಗಳು ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ದೊಡ್ಡ ದೊಡ್ಡ ಹೋರಾಟದ ಮೂಲಕ ಯಶಸ್ವಿಯಾಗಿ ನಡೆದಿರುವ ಚೆನ್ನಮ್ಮ ವೃತ್ತದ ಗಣಪತಿ ಪ್ರತಿಷ್ಟಾಪನೆ ಹೆಸರಲ್ಲಿ ಹಣ ಹೊಡೆದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆದರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ಸವ ಮಹಾಮಂಡಳದ ಮುಖ್ಯಸ್ಥರಾದ ಸಂಜೀವ ಬಡಸ್ಕರ್, ಎಲ್ಲದಕ್ಕೂ ಲೆಕ್ಕವನ್ನು ಇಟ್ಟಿದ್ದೇವೆ ಅಂತಿದ್ದಾರೆ.

ಒಟ್ಟಿನಲ್ಲಿ ಸಾಕಷ್ಟು ವಿರೋಧದ ನಡುವೆಯೂ ಗಣಪತಿ ಪ್ರತಿಷ್ಟಾಪನೆಗೆ ಅವಕಾಶ ಸಿಕ್ಕಿದೆ. ಆದರೆ ಇಂತಹ ಅವ್ಯವಹಾರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಲೆಕ್ಕದ ದಾಖಲೆ ಬಿಡುಗಡೆ ಮಾಡುವ ಮೂಲಕ ಆರೋಪಕ್ಕೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕಿದೆ.

Siddaramaiah : ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

Edga Ground : ಗಣೇಶ ಪ್ರತಿಷ್ಠಾಪನೆಗೆ ಅನುಮತಿಗೆ ಆಯುಕ್ತರ ವಿಳಂಬ : ಬೀದಿಗಿಳಿದ ಪ್ರತಿಭಟನಾಕಾರರು

Rain : ಕರಾವಳಿಯಲ್ಲಿ ಮಳೆ ಮುನ್ಸೂಚನೆ : ಎಲ್ಲೋ ಅಲರ್ಟ್ ಘೋಷಣೆ

- Advertisement -

Latest Posts

Don't Miss