Friday, December 27, 2024

Latest Posts

ಕೊರೋನಾಕ್ಕೆ ಸ್ಪುಟ್ನಿಕ್-V ಲಸಿಕೆ ಪಡೆದ್ರೆ ಏಡ್ಸ್..!

- Advertisement -

ಕೊರೋನಾ ಮಹಾಮಾರಿಗೆ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-v ಲಸಿಕೆ ಇದೀಗ ಭಾರೀ ಆತಂಕ ಮೂಡಿಸಿದೆ. ಲಸಿಕೆ ಪಡೆದ್ರೆ ಕೊರೋನಾದಿಂದ ಬಚಾವಾಗೋದಿರಲಿ, ಗುಣವೇ ಆಗದ ಮಾರಕ ಕಾಯಿಲೆ ಬಂದು ಜೀವಕ್ಕೇ ಕುತ್ತು ಬರೋದು ಗ್ಯಾರೆಂಟಿ.

ಹೌದು, ಸ್ಪುಟ್ನಿಕ್-v ಲಸಿಕೆ ಪಡೆಯುವ ಪುರುಷರಲ್ಲಿ ಎಚ್‌ಐವಿ ಏಡ್ಸ್ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಅಂತ ದಕ್ಷಿಣ ಆಫ್ರಿಕಾ ಈ ಲಸಿಕೆಯ ಮೇಲೆ ನಿಷೇಧ ವಿಧಿಸಿದೆ. ಈ ಆತಂಕಕಾರಿ ವಿಚಾರವನ್ನು ಅಧ್ಯಯನದಿಂದ ಬಹಿರಂಗಗೊoಡಿರೋ ಹಿನ್ನೆಲೆಯಲ್ಲಿ ಸದ್ಯ ನಮೀಬಿಯಾ ದೇಶ ಕೂಡ ಸ್ಪುಟ್ನಿಕ್ ಲಸಿಕೆಗೆ ಮಾನ್ಯತೆ ನೀಡಲು ಹಿಂದೇಟು ಹಾಕಿದೆ.

ಅಂದಹಾಗೆ, ಕೊರೋನಾ ಸೋಂಕಿನ ವಿರುದ್ಧ ಹೋರಡುವಲ್ಲಿ ಅಗತ್ಯವಾದ ಸ್ಪೆಕ್ ಪ್ರೊಟೀನ್‌ಗಳನ್ನು ರವಾನಿಸಲು ಅಡೆನೋವೈರಸ್ ಎಂಬ ದುರ್ಬಲಗೊಳಿಸಿದ ವೈರಸ್ ಅನ್ನು ಈ ಸ್ಪುಟ್ನಿಕ್-v ಲಸಿಕೆಯಲ್ಲಿ ವಾಹಕದ ರೂಪದಲ್ಲಿ ಬಳಸಲಾಗಿದೆ. ಇದನ್ನ ಅಡೆನೋವೈರಸ್ ಅಂತ ಕರೆಯಲಾಗುತ್ತೆ. ಇನ್ನು ಈ ಅಡೆನೋವೈರಸ್, ಪುರುಷರಲ್ಲಿ ಎಚ್‌ಐವಿ ಸೋಂಕು ತಗುಲುವ ಸಾಧ್ಯತೆ ಹೆಚ್ಚಿಸುತ್ತದೆ ಅಂತ ಅಧ್ಯಯನಗಳ ವೇಳೆ ಕಂಡುಬoದಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ಸ್ಪುಟ್ನಿಕ್ ಲಸಿಕೆಗೆ ಮಾನ್ಯತೆ ನೀಡೋದಿಲ್ಲ ಅಂತ ಖಡಾಖಂಡಿತವಾಗಿ ಘೋಷಿಸಿದೆ. ಆದ್ರೆ ಲಸಿಕೆ ಬಗ್ಗೆ ಆ ಎರಡೂ ದೇಶಗಳು ನಿರ್ಧಾರ ತೆಗೆದುಕೊಂಡಿರೋದು ಅವೈಜ್ಞಾನಿಕ ಅಂತ ರಷ್ಯಾದ ಲಸಿಕೆ ಉತ್ಪಾದಿಸಿರುವ ಗಮಲೇಯ ಸಂಶೋಧನಾ ಸಂಸ್ಥೆ ಸಮರ್ಥಿಸಿಕೊಳ್ತಿದೆ.

ಇನ್ನು ಭಾರತ ಸೇರಿದಂತೆ ಇತರೆ ದೇಶಗಳು ಈ ಸ್ಪುಟ್ನಿಕ್-ಗಿ ಲಸಿಕೆ ವಿಚಾರದಲ್ಲಿ ಅಷ್ಟೇನೂ ಆಸಕ್ತಿ ತೋರುತ್ತಿಲ್ಲ . ಯಾಕಂದ್ರೆ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ಗೆ ಹೋಲಿಸಿದರೆ ಸ್ಪುಟ್ನಿಕ್ ಲಸಿಕೆ ಸಂಗ್ರಹಿಸೋದು ಕಷ್ಟ. ಈ ಸ್ಪುಟ್ನಿಕ್ ವ್ಯಾಕ್ನಿನ್ ನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿಸಂಗ್ರಹಿಸಿ ಇಡಬೇಕಾಗುತ್ತೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಕೂಡ ಸ್ಪುಟ್ನಿಕ್ ಖರೀದಿಗೆ ಹಿಂದೇಟು ಹಾಕುತ್ತಿವೆ. ಇನ್ನು ಇದೇ ಕಾರಣಕ್ಕೆ ಭಾರತ ಕೂಡ ಈಗಾಗಲೇ ಬೇಡಿಕೆಯಿಟ್ಟಿದ್ದ ಸುಮಾರು 2500 ಡೋಸ್ ಸ್ಪುಟ್ನಿಕ್ ಲಸಿಕೆಯನ್ನೂ ರದ್ದುಗೊಳಿಸಿದೆ.

- Advertisement -

Latest Posts

Don't Miss