Saturday, July 27, 2024

Latest Posts

ಮನೆಯಲ್ಲಿ ಕಾಮಾಕ್ಷಿ ದೀಪ ಹಚ್ಚಿದರೆ..?

- Advertisement -

ಮನೆಯಲ್ಲಿ ಕಾಮಾಕ್ಷಿ ದೀಪವನ್ನು ಹಚ್ಚಬೇಕು, ಕಾಮಾಕ್ಷಿ ದೀಪವನ್ನು ಹಚ್ಚಿದರೆ ಪುಣ್ಯ ಬರುತ್ತದೆ ಎಂದು ಪುರಾತನರು ಹೇಳುತ್ತಾರೆ. ಪ್ರತಿ ಮನೆಯಲ್ಲೂ ದೊಡ್ಡವರು ಪವಿತ್ರವಾಗಿ ಭಾವಿಸುವ ಕಾಮಾಕ್ಷಿ ದೀಪ ಮಂಗಳ ವಸ್ತುವುಗಳಲ್ಲಿ ಒಂದಾಗಿರುವುದು ವಿಶೇಷ ಕಾಮಾಕ್ಷಿ ದೀಪವನ್ನು ಪ್ರತಿನಿತ್ಯ ಹಚ್ಚಿ ಪೂಜಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ, ಬಡತನ ನಿವಾರಣೆಯಾಗುತ್ತದೆ ಎನ್ನುತ್ತಾರೆ ಪೂರ್ವಿಕರು .

ಕಾಮಾಕ್ಷಿ ದೀಪವನ್ನು ಪೂಜಿಸುವುದು ಕಾಮಾಕ್ಷಿ ದೇವಿಯನ್ನು ಪೂಜಿಸುವುದರ ಸಮ ಕುಲದೈವವಾದ ಕಾಮಾಕ್ಷಿ ಅಮ್ಮನವರಿಗೆ ಕಾಮಾಕ್ಷಿ ದೀಪವನ್ನು ಹಚ್ಚಿ ಪೂಜಿಸಬೇಕು ಎನ್ನುತ್ತಾರೆ ಆಧ್ಯಾತ್ಮಿಕರು. ಕಾಮಾಕ್ಷಿ ದೇವಿಯನ್ನು ಎಲ್ಲಾ ದೇವತೆಗಳಿಗೆ ಶಕ್ತಿ ನೀಡುವ ತಾಯಿ ಎಂದು ಪೂಜಿಸಲಾಗುತ್ತದೆ.

ಯಜ್ಞ ಯಾಗಾದಿ ಕಾರ್ಯಕ್ರಮಗಳು, ಪ್ರತಿಷ್ಠೆಗಳು, ಗೃಹಪ್ರವೇಶಾದಿ ಕಾರ್ಯಕ್ರಮಗಳಲ್ಲಿ ಈ ಕಾಮಾಕ್ಷಿ ದೀಪವನ್ನು ದೀಪಾರಾಧನೆಗೆ ಬಳಸುವುದು ಶ್ರೇಷ್ಠ ಕಾಮಾಕ್ಷಿ ದೀಪವನ್ನು ಹಚ್ಚುವವರು ಎರಡು ಬತ್ತಿಯನ್ನು ಹಾಕಿ ಎಳ್ಳೆಣ್ಣೆಯಿಂದ ದೀಪವನ್ನು ಬೆಳಗಿಸಬೇಕು. ಹಾಗೆಯೇ ಪ್ರತಿದಿನ ಸಂಜೆ ಲಕ್ಷ್ಮಿ ಕಮಲದ ಬತ್ತಿಗಳಿಂದ ಪೂಜಿಸುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ.

ಈ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ತೊಳೆಯಬಾರದು. ಪ್ರತಿದಿನ ಬೆಳಗಿನ ಜಾವ ಮತ್ತು ಸಾಯಂಕಾಲದ ಸಮಯದಲ್ಲಿ ಕಾಮಾಕ್ಷಿಯ ದೀಪದಿಂದ ದೀಪಾರಾಧನೆಯನ್ನು ಮನೆಯಲ್ಲಿ ಮಾಡಿದರೆ ಸಕಲ ರೀತಿಯಲ್ಲಿಯೂ ಒಳ್ಳೆಯದಾಗುವುದು. “ದೇವರ ದೀಪ” ಹಚ್ಚುವಾಗ ಯಾವಾಗಲು ಕುಳಿತು ಹಚ್ಚಬೇಕು‌..!

ಕಾಮಾಕ್ಷಿ ದೀಪವನ್ನು ಬಳಸುವಾಗ ಆ ದೀಪಕ್ಕೆ ಕುಂಕುಮ ಇಟ್ಟ ನಂತರ ಅದೇ ಕೈಯಿಂದ ದೇವರ ರೂಪಕ್ಕೂ ಕುಂಕುಮ ಇಟ್ಟು, ಸುತ್ತಲೂ ಹೂವಿನಿಂದ ಅಲಂಕಾರ ಮಾಡಿ ಆ ದೀಪವನ್ನು ನೆಲಕ್ಕೆ ತಾಕದಂತೆ ಒಂದು ತಾಮ್ರದ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಇರಿಸಬೇಕು. ಈ ದೀಪವನ್ನು ಎಳ್ಳೆಣ್ಣೆ ಅಥವಾ ಹಸುವಿನ ತಾಜಾ ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು.

ನಿಮ್ಮ ಗಡಿಯಾರದಲ್ಲಿ ನೀವು ಎಂದಾದರೂ 11:11 ಅನ್ನು ನೋಡಿದ್ದೀರಾ..? ಇದರ ಅರ್ಥ ನಿಮಗೆ ಗೊತ್ತೇ..?

ಮಕರ ಸಂಕ್ರಾಂತಿಯಂದು ಈ 5 ವಸ್ತುಗಳನ್ನು ದಾನ ಮಾಡಿ.. ಶನಿ ಸೇರಿದಂತೆ 6 ಗ್ರಹದೋಷಗಳು ನಿವಾರಣೆಯಾಗುತ್ತವೆ..!

ಶ್ರೀರಾಮರಿಂದ ಲಕ್ಷ್ಮಣನ ಪತ್ನಿ ಊರ್ಮಿಳಾದೇವಿ ಬಯಸಿದ ವರ..!

 

- Advertisement -

Latest Posts

Don't Miss