ಕಾಂಗ್ರೆಸ್ನ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ನವೆಂಬರ್ ತಿಂಗಳಲ್ಲಿ ಸರ್ಕಾರದಲ್ಲಿ ಬದಲಾವಣೆ ಅಥವಾ ಕ್ರಾಂತಿ ಸಂಭವಿಸಲಿದೆ ಎಂಬ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜಣ್ಣ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ನವೆಂಬರ್‌ನಲ್ಲಿ ಯಾವುದೇ ಬದಲಾವಣೆ ಅಥವಾ ಕ್ರಾಂತಿ ಆಗೋದಿಲ್ಲ. ಇದು ಸಂಪೂರ್ಣ ಸುಳ್ಳು ಮಾತು ಎಂದು ಹೇಳಿದರು.
ಊಹಾಪೋಹಗಳಿಗೆ ಯಾವುದೇ ಅವಕಾಶವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಇರುತ್ತದೆ. ಬಿಜೆಪಿಯವರು ಸುಳ್ಳು ಹೇಳಲು ರೂಢಿ ಮಾಡಿಕೊಂಡಿದ್ದಾರೆ. ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು ನವೆಂಬರ್ ನಲ್ಲಿ ಬದಲಾವಣೆ ಆಗತ್ತೆ ಅನ್ನೋ ಊಹೆ ಎಲ್ಲರು ಮಾಡುತ್ತಿದ್ದಾರೆ ಆದ್ರೆ ನನ್ನ ಪ್ರಕಾರ ಯಾವುದೇ ಬದಲಾವಣೆ ಇಲ್ಲ. ಯಾವುದೇ ಊಹೆಗಳಿಗೂ ಅವಕಾಶ ಇಲ್ಲಾ. ಸರ್ಕಾರ ನಿರಂತರವಾಗಿ ೫ ವರ್ಷ ಇದ್ದೆ ಇರತ್ತೆ. ಬಿಜೆಪಿಯವರಿಗೆ ಸುಳ್ಳು ಹೇಳಿ ರೂಢಿ. ಸುಳ್ಳಿನಿಂದಲೇ ರಾಜ್ಯ, ರಾಷ್ಟ್ರದಲ್ಲಿ ಬಂದಿದ್ದಾರೆ. ಬಿಜೆಪಿಯವರಿಗೆ ಏನು ಹೇಳೋಕೆ ಆಗಲ್ಲಾ ಎಂದಿದ್ದಾರೆ.
ಜತೆಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು, ಅಂದರೆ ಕಾರ್ಪೊರೇಷನ್, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷ ಆದಷ್ಟು ಬೇಗ ನಡೆಸಲು ಉದ್ದೇಶಿಸಿದೆ ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ.
ವಾರ್ಡನ್ : ಲಾವಣ್ಯ ಅನಿಗೋಳ