Wednesday, August 20, 2025

Latest Posts

ಚುನಾವಣೆ ಆಯೋಗದ ಮೇಲೆ ಆರೋಪ‌ ಮಾಡಿದ್ದರೆ, ಬಿಜೆಪಿ ನಾಯಕರು ಯಾಕೆ ರಿಯ್ಯಾಕ್ಟ್ ಮಾಡ್ತಾರೆ.?- ಲಾಡ್ ಪ್ರಶ್ನೆ.

- Advertisement -

Political News: ಚುನಾವಣೆ ಆಯೋಗಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತವೇ, ರಾಜ್ಯ ಸರ್ಕಾರಗಳ ಅಧೀನದಲ್ಲಿ ಇವು ಇರುವುದಿಲ್ಲ. ಮತಗಳ್ಳತನ ಬಗ್ಗೆ ನಮ್ಮ ರಾಹುಲ್ ಗಾಂಧಿಯವರು ಚುನಾವಣೆ ಆಯೋಗದ ಮೇಲೆ ಆರೋಪ ಮಾಡಿದ್ದರೆ, ಅದಕ್ಕೆ ಬಿಜೆಪಿ ನಾಯಕರು ಬಹಳ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದರು.

ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ 79 ನೇ ಧ್ವಾಜಾರೋಹನ ನೆರವೇರಿಸಿದ ಬಳಿಕ ಮಾತನಾಡಿದ ಅವರು. ಒಂದೊಂದು ಮನೆಗೆ 60-100 ಓಟಗಳು ಬಂದಿದ್ದು ಹೇಗೆ.?, ಒಂದು ಯುತಿಗೆ ಓಟರ್ ಲೀಸ್ಟನಲ್ಲಿ 124 ವರ್ಷ ತೋರಿಸಿದ್ದಾರೆ. 65 ಲಕ್ಷ ಓಟಗಳು ಡಿಲೀಟ್ ಆಗಿವೆ. ನಾವು ಚುನಾವಣೆ ಆಯೋಗದ ಮೇಲೆ ಆರೋಪ ಮಾಡುತ್ತಿದ್ದೇವೆ. ಬಿಜೆಪಿಯವರು ಇದರ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ‌. ಬಿಜೆಪಿಯವರು ಚುನಾವಣೆ ಆಯೋಗ ತಪ್ಪು ಮಾಡಿದೆ ಅಂದ್ರೆ ಒಪ್ಪಿಕೊಳ್ಳಲಿ. ಇಲ್ವಾ ತಪ್ಪು ಮಾಡಿಲ್ಲ ಅಂದ್ರೇ ಅದನ್ನು ಹೇಳಲಿ. ಅದನ್ನು ಬಿಟ್ಟು ಸುಮ್ಮನೆ ಟೀಕೆ ಮಾಡಿದ್ರೆ ಏನ ಬಂತು..? ಎಂದು ಲಾಾಡ್ ಪ್ರಶ್ನಿಸಿದ್ದಾರೆ.

ಈಗ ಸುಪ್ರೀಂ ಕೋರ್ಟ್ ಕೂಡಾ ಚುನಾವಣೆ ಆಯೋಗಕ್ಕೆ ಬಿಹಾರದಲ್ಲಿ 65 ಲಕ್ಷ ಓಟ್ ಡಿಲೀಟ್ ವಿವರಣೆ ಕೇಳಿದೆ. ಅದನ್ನು ಚುನಾವಣೆ ಆಯೋಗ ನೀಡುತ್ತಿಲ್ಲ, ಇವರೇನು ಸುಪ್ರೀಂ ಕೋರ್ಟಗಿಂತ ಚುನಾವಣೆ ಆಯೋಗ ದೊಡ್ಡದಾ..?, ಜತೆಗೆ ದೇಶವ್ಯಾಪಿ ಈಗ ಮತಗಳ್ಳ ಡಿಲೀಟ್ ಬಗ್ಗೆ ಚರ್ಚೆ ನಡೆಯುತ್ತೇವೆ. ಇತಿಹಾಸದಲ್ಲಿಯೇ ಆಯೋಗದ ನಡೆ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದೆ ಅನ್ನಬಹುದು.

ಈ ಹಿಂದೆ ಪ್ರಧಾನಿಗಳು ಸೇಟ್ಲೈಟ್ ಮೂಲಕ ಸಮಸ್ಯೆ ಆಲಿಸಿ ಪರಿಹಾರ ಒದಗಿಸುತ್ತೆ ಎಂದು ಪ್ರಧಾನಿಗಳು ಹೇಳಿದ್ದರು. ಈಗ ಓಟ್‌ಗಳನ್ನು ಡಿಜಿಟಲ್ ಮೊದಲು ತರಲಿ. ಮಾತೇದ್ರೇ ಡಿಜಿಟಲ್ ಇಂಡಿಯಾ ಬಗ್ಗೆ ಮಾತಾಡ್ತಾರೆ ಮೋದಿಯವರು. ಇಂದಿನ ದಿನಮಾನದಲ್ಲಿ ಡಿಜಿಟಲ್ ಇಂಡಿಯಾ ಬಗ್ಗೆ ಮಾತಾಡೋರು, ಒಂದು ಡಿಜಿಟಲ್ ಓಟರ್ ಲೀಸ್ಟ ಕೋಡತ್ತಿಲ್ಲ ಎಂದು ನೇರ ಕಿಡಿಕಾರಿದರು.‌ ಜತೆಗೆ ಧರ್ಮಸ್ಥಳ ಎಸ್‌ಐಟಿ ಕುರಿತು ಕಾಂಗ್ರೆಸ್ ಮೇಲೆ ಬಿಜೆಪಿ ನಾಯಕರ ಆರೋಪ ಕುರಿತು ಪ್ರತಿಕ್ರಿಯಿಸಿ, ದೂರದಾರ ಕೋರ್ಟ ಹೋಗಿದ್ದಾನೆ, ಕೋರ್ಟ ನಿರ್ದೇಶನ ಮೇರೆಗೆ ಸರ್ಕಾರ ಎಸ್‌ಐಟಿ ರಚನೆ ಮಾಡಿ ತನಿಖೆಗೆ ಸೂಚಿಸಿದೆ. ತನಿಖೆ ಬರುತ್ತದೆ, ವರದಿ ಬಂದ ಬಳಿಕ ಸರ್ಕಾರ ಉತ್ತರಿಸುತ್ತದೆ‌. ಈ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಕಡೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

- Advertisement -

Latest Posts

Don't Miss