Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ರಾಜಕೀಯದಲ್ಲಾಗಲಿ, ಯಾವುದೇ ಕೆಲಸದಲ್ಲಾಗಲಿ ನಾವು ಸರಿಯಾಗಿದ್ರೆ ನಮ್ಮನ್ನು ಯಾರೂ ಬಳಸಿಕ“ಳ್ಳೋಕ್ಕೆ ಸಾಧ್ಯಾ ಇಲ್ಲಾ ಎಂದಿದ್ದಾರೆ.
ಈ ಬಗ್ಗೆ ಮಾತು ಮುಂದುವರಿಸಿರುವ ಅವರು, ನಾವು ಕೆಲಸ ಮಾಡುವ ಜಾಗದಲ್ಲಿ ನಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ, ಪದೇ ಪದೇ ತಪ್ಪು ಮಾಡುವ ಸ್ವಭಾವ, ಇತ್ಯಾದಿಗಳು ಇರದೇ, ನಾವು ಸರಿಯಾಗಿದ್ದರೆ, ನಾವು ಯಾರಿಗೂ ದಗ್ಗು ಸಲಾಮ್ ಮಾಡಬೇಕಿಲ್ಲ. ನಮ್ಮನ್ನು ಯಾರೂ ಬಳಸಿಕ“ಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ನಜ್ಮಾ ನಜೀರ್.
ಅಲ್ಲದೇ ಸಿನಿಮಾ ರಂಗವಾಗಲಿ, ರಾಜಕೀಯ ರಂಗವಾಗಲಿ ಇದರಲ್ಲಿ ಏನೇ ವಿವಾದ ನಡೆದ್ರೂ ಬೇಗ ವೈರಲ್ ಆಗುತ್ತದೆ. ಅಲ್ಲದೇ, ಈ ರಂಗದಲ್ಲಿ ಕೆಲಸ ಮಾಡುವ ಗಂಡಸರಿಗೆ ಪವರ್ ಇದೆ. ಅವರು ಯಾವ ರೀತಿ ಬೇಕಾದ್ರೂ ಹೆಣ್ಣು ಮಕ್ಕಳನ್ನು ಆಡಿಸಬಹುದು ಎಂದು ತಿಳಿದಿದ್ದಾರೆ. ಆದರೆ ಹೆಣ್ಣು ಮಕ್ಕಳು ಸರಿಯಾದ ದಾರಿಯಲ್ಲಿದ್ದರೆ, ಗಂಡಸರು ಅಂಥ ಹೆಂಗಸರ ಸುದ್ದಿಗೆ ಬರಲು ಹೆದರುತ್ತಾರೆ ಎಂದು ನಿಜಬಣ್ಣವನ್ನು ನಜ್ಮಾ ನಜೀರ್ ಬಯಲು ಮಾಡಿದ್ದಾರೆ.
ಯಾವ ರಂಗದಲ್ಲಾದ್ರೂ ಆಗಲಿ ನಮ್ಮ ಮೇಲೆ ನಮಗೆ ಕಾನ್ಫಿಡೆನ್ಸ್ ಇರಬೇಕು. ನಾವು ಸರಿಯಾದ ದಾರಿಯಲ್ಲಿದ್ರೆ, ಗಂಡಸರು, ಈ ಹೆಣ್ಣಿನ ಸುದ್ದಿ ಬೇಡಾ. ಇವಳು ಬಜಾರಿ. ನಾಳೆ ನಮ್ಮನ್ನೇ ತುಳಿದು ಬಿಡ್ತಾಳೆ ಅಂತಾ ದೂರ ಇರ್ತಾರೆ ಎಂದು ನಜ್ಮಾ ನಜೀರ್ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




