Sunday, November 16, 2025

Latest Posts

ನಾವು RSSನಿಂದ ಅಕೌಂಟೆಬಲಿಟಿಯನ್ನು ಕೇಳಿದರೆ ಮೈ ಮೇಲೆ ಚೇಳು ಬಿದ್ದವರಂತೆ ಆಡುವುದೇಕೆ?: ಪ್ರಿಯಾಂಕ್ ಖರ್ಗೆ

- Advertisement -

Political News: ಸಚಿವರಾದ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸುವುದನ್ನು ಮತ್ತು ಅದರ ವಿರುದ್ಧ ಪ್ರಶ್ನೆ ಕೇಳುವುದನ್ನು ಮುಂದುವರಿಸಿದ್ದು, ನಾವು RSSನಿಂದ ಅಕೌಂಟೆಬಲಿಟಿಯನ್ನು ಕೇಳಿದರೆ ಮೈ ಮೇಲೆ ಚೇಳು ಬಿದ್ದವರಂತೆ ಆಡುವುದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದಿರುವ ಅವರು, ಈ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ NGOಗಳೆಲ್ಲವೂ ನೋಂದಣಿ ಮಾಡಿಸಿಕೊಂಡಿವೆ, ಪ್ರತಿ ವರ್ಷ ಐಟಿ ಫೈಲ್ ಮಾಡುತ್ತವೆ, ತಮ್ಮ ಆದಾಯ ಅಥವಾ ದೇಣಿಗೆಯ ಮಾಹಿತಿಗಳನ್ನು ಸರ್ಕಾರಕ್ಕೆ ತಿಳಿಸುತ್ತವೆ. ಆರ್ಎಸ್ಎಸ್ NGO ಆಗಿದ್ದರೆ ಈ ಪ್ರಕ್ರಿಯೆ ನಡೆಸದೆ ಇರುವುದೇಕೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಒಂದು NGO ಮುಖ್ಯಸ್ಥರಿಗೆ ಅತಿ ಭದ್ರತೆಯ ಲಿಐಸನ್ ಪ್ರೊಟೊಕಾಲ್ ಸೆಕ್ಯೂರಿಟಿ ನೀಡಿರುವುದೇಕೆ? ಒಂದೇ ಒಂದು ರೂಪಾಯಿ ತೆರಿಗೆ ನೀಡದ ಯಕಶ್ಚಿತ್ NGO ಮುಖ್ಯಸ್ಥನಿಗೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವಂತಹ ಅನಿವಾರ್ಯ ಏನಿದೆ? ಇವರ ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ನಾವು ಆರ್ಎಸ್ಎಸ್ ನಿಂದ ಅಕೌಂಟೆಬಲಿಟಿಯನ್ನು ಕೇಳಿದರೆ ಮೈ ಮೇಲೆ ಚೇಳು ಬಿದ್ದವರಂತೆ ಆಡುವುದೇಕೆ? ಈ ದೇಶದ ಬಹುಸಂಖ್ಯಾತರು RSS ನ್ನು ಆಪ್ಪಿಕೊಂಡೂ ಇಲ್ಲ, ಒಪ್ಪಿಕೊಂಡೂ ಇಲ್ಲ. ಇವರು ಈ ದೇಶಕ್ಕಿಂತ, ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರೂ ಅಲ್ಲ, ಅತೀತರೂ ಅಲ್ಲ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss