Tumakuru News: ತುಮಕೂರು: ಆರ್ ಎಸ್ ಎಸ್ ಚಟುವಟಿಕೆ ಬ್ಯಾನ್ಗೆ ಸಿಎಂ ಗೆ ಪ್ರಿಯಾಂಕ್ ಖರ್ಗೆ ಪತ್ರ ವಿಚಾರ ಕುರಿತಂತೆ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.
ಆರ್ ಎಸ್ ಎಸ್ ನೂರು ವರ್ಷಗಳ ತುಂಬಿದ ಸಂಘಟನೆಯಾಗಿದೆ. ನೂರು ವರ್ಷಗಳಿಂದ ದೇಶದ ಜನರಲ್ಲಿ ದೇಶಭಕ್ತಿ ದೇಶಪ್ರೇಮವನ್ನು ಹುಟ್ಟು ಹಾಕುವ ಸಂಸ್ಥೆಯಾಗಿದೆ. ಆರ್ ಎಸ್ ಎಸ್ ರಾಜಕೀಯ ಪಕ್ಷ ಅಲ್ಲ ಅದರಲ್ಲಿರುವ ಯಾರೂ ಕೂಡ ಶಾಸಕರು ಮಂತ್ರಿಯಾಗಿಲ್ಲ. ದೇಶದಲ್ಲಿ ನೈಸರ್ಗಿಕ ವಿಪೋಪಗಳು ಎದುರಾದಾಗ ಆರ್ಮಿ , ಪೊಲೀಸ್ರಿಗಿಂತಲೂ ಮೊದಲು ಆರ್ ಎಸ್ ಎಸ್ ಸಹಾಯಕ್ಕೆ ಮುಂದಾಗುತ್ತೆ ಎಂದು ಸುರೇಶ್ ಗೌಡ ಹೇಳಿದ್ದಾರೆ.
ದೇಶದಲ್ಲಿಯವರೆಗೂ ಯಾವುದೇ ಕೋಮು ದ್ವೇಶದ ಕೆಲಸ ಆರ್ ಎಸ್ ಎಸ್ ಮಾಡಿಲ್ಲ. ಇಂದು ಕಾಂಗ್ರೆಸ್ ಆರ್ ಎಸ್ ಎಸ್ ನ ಬ್ಯಾನ್ ಮಾಡಿ ಕೋರ್ಟ್ ನಿಂದ ಚಿಮಾರಿ ಹಾಕಿಸಿಕೊಂಡಿದೆ. ಜವಹರ್ ಲಾಲ್ ನೆಹರು ಇಂದಿರಾಗಾಂಧಿ ಅವರೇ ಇಂತ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇನ್ನು ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಸಿದ್ದರಾಮಯ್ಯ ಮಾಡೋ ತಾಕತ್ತಿದಿಯಾ..? ಎಂದು ಸುರೇಶ್ ಗೌಡ ಪ್ರಶ್ನಿಸಿದ್ದಾರೆ.
ತಾಕತ್ತಿದ್ದರೆ ನಿಮ್ಮ ತಂದೆ ಖರ್ಗೆ ಸಿದ್ದರಾಮಯ್ಯ ನೀವು ಸೇರಿ ಆರ್ ಎಸ್ ಎಸ್ ಬ್ಯಾನ್ ಮಾಡಿ ನೋಡೋಣ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಎಸ್ ಡಿ ಪಿ ಐ, ಪಿ ಎಫ್ ಐ ಸಂಘಟನೆ ತುಷ್ಠಿಕರಣ ಮಾಡಲು ಹೊರಟಿದ್ದಿರಾ. ಇದೇ ರೀತಿ ಮಾಡಿ ದೆಹಲಿಯಲ್ಲಿ ಸೊನ್ನೆ ಸುತ್ತಿಸಿಕೊಂಡಿದ್ದೀರಾ..? ಇನ್ನು ಬಿಹಾರ ಚುನಾವಣೆಲ್ಲೂ ಕೂಡ ಮೂರು ಸೊನ್ನೆ ಸುತ್ತಿಸಿಕೊಳ್ಳುವುದು ಪಕ್ಕಾ.
ಪ್ರಿಯಾಂಕ ಖರ್ಗೆ ಅವರ ಈ ನಡೆ ಕಾಂಗ್ರೆಸ್ ಪಕ್ಷದ ಕೊನೆಯ ಮೊಳೆಯಾಗಿದೆ. ಬುದ್ಧಿ ಭ್ರಮಣೆಯಾಗಿ ಇಂಥ ಹೇಳಿಕೆ ನೀಡುತ್ತಿರುವ ತಮ್ಮ ಮಗನಿಗೆ ಮಲ್ಲಿಕಾರ್ಜುನ ಖರ್ಗೆಯವರು ಬುದ್ದಿ ಹೇಳಲಿ. ಆರ್ ಎಸ್ ಎಸ್ ,ಹಿಂದುಗಳು ಹಾಗೂ ನಾವುಗಳು ಇಡೀ ದೇಶಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಸುರೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ.

