ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಪುರಾಣ ಕಥೆಗಳ ಪ್ರಕಾರ ದಾನ ನೀಡಿ ಉದ್ಧಾರವಾದವರೂ ಇದ್ದಾರೆ, ದಾನ ನೀಡಿ ಕೆಟ್ಟವರೂ ಇದ್ದಾರೆ. ಹಾಗಂತ ದಾನ ನೀಡುವುದು ತಪ್ಪು ಎಂದು ಎಲ್ಲೂ ಹೇಳಲಾಗಿಲ್ಲ. ದಾನ ನೀಡು, ಆದರೆ ದರಿದ್ರನಾಗಬೇಡ ಎಂದಷ್ಟೇ ದೊಡ್ಡವರು ಹೇಳಿದ್ದಾರೆ. ಇನ್ನು ನಾವು ಯಾರಿಗಾದರೂ ದಾನ ಮಾಡಿದರೆ ಅದನ್ನ ಎಲ್ಲಿಯೂ ಹೇಳಿಕೊಳ್ಳಬಾರದು. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉಳ್ಳವರಿಗೆ, ನಮ್ಮ ಮನೆಯವರಿಗೆ, ಶ್ರೀಮಂತರಿಗೆ ದಾನ ನೀಡಿದರೆ, ಅದರಿಂದ ಏನೂ ಪ್ರಯೋಜನವಿಲ್ಲ. ಅದು ಸಮುದ್ರಕ್ಕೆ ಉಪ್ಪು ಸುರಿದಂತಾಗುತ್ತದೆ. ಸಮುದ್ರದ ನೀರು ಉಪ್ಪಿನ ಅಂಶವನ್ನೇ ಹೊಂದಿದ್ದು, ಅದಕ್ಕೆ ಮತ್ತೆ ಉಪ್ಪು ಸುರಿದರೇನು ಪ್ರಯೋಜನ..? ಅಂತೆಯೇ ಉಳ್ಳವರಿಗೆ ದಾನ ಮಾಡಿದರೆ ಏನು ಪ್ರಯೋಜನ..? ಹಾಗಾಗಿ ಯಾರ ಬಳಿ ಉಣ್ಣಲು ಊಟ, ಉಡಲು ಬಟ್ಟೆ ಇರುವುದಿಲ್ಲವೋ ಅಂಥವರಿಗೆ ಸಹಾಯ ಮಾಡಿದರೆ ಉತ್ತಮ.
ಇಂದಿನ ಕಾಲದಲ್ಲಿ ದಾನ ಧರ್ಮ ಕೊಂಚ ಹೆಚ್ಚಾಗಿಯೇ ಇದೆ. ಪ್ರವಾಹದ ಸಂದರ್ಭದಲ್ಲಿ, ಕೊರೊನಾ ಕಾಲದಲ್ಲೆಲ್ಲ ಉಣ್ಣಲು ತಿನ್ನಲು ಇಲ್ಲದಿದ್ದವರಿಗೆ, ಹಲವರು ಸಹಾಯ ಮಾಡಿದ್ದಾರೆ. ಅದರಲ್ಲಿ ಕೆಲವರು ಪ್ರಚಾರ ಪ್ರಿಯರಾಗಿದ್ದು, ಊಟ, ಬಟ್ಟೆ ನೀಡಿ ಫೋಟೋಗೆ ಪೋಸ್ ಕೊಟ್ಟಿದ್ದೇ ಹೆಚ್ಚು. ಹೀಗೆ ಪ್ರಚಾರಕ್ಕಾಗಿ ಕೊಡುವ ದಾನದಿಂದ ಕಿಂಚಿತ್ತು ಪ್ರಯೋಜನವಿಲ್ಲ. ದಾನ ಎಂದರೆ ಬಲಗೈಯಿಂದ ಕೊಟ್ಟಿದ್ದು, ಎಡಗೈಗೆ ತಿಳಿಯಬಾರದು. ಅದನ್ನು ದಾನವೆನ್ನುತ್ತಾರೆ. ದಾನ ಮಾಡಿದ್ದನ್ನ ಊರು ತುಂಬ ಡಂಗುರ ಸಾರಿದರೆ ಅಂಥ ದಾನಕ್ಕೆ ಮಹತ್ವವೇ ಇರುವುದಿಲ್ಲ.
ದಾನದ ಬಗ್ಗೆ ಒಂದು ಚಿಕ್ಕ ಕಥೆ ಇದೆ. ಪ್ರಚಾರಪ್ರಿಯನೊಬ್ಬ ತನ್ನೂರಿನ ಬಡ ಬಗ್ಗರಿಗೆ ಊಟ, ಬಟ್ಟೆಯನ್ನ ದಾನ ಮಾಡುತ್ತಿದ್ದ. ತಾನು ಕೊಟ್ಟ ಊಟ ಮಾಡಿ, ಬಟ್ಟೆ ತೊಟ್ಟವರನ್ನ ತೋರಿಸಿ, ನೋಡಿ ನೋಡಿ ಇದು ನಾನು ಮಾಡಿದ ದಾನ. ನಾನು ಕೊಟ್ಟ ಬಟ್ಟೆಯನ್ನೇ ಆತ ಹಾಕಿಕೊಂಡಿದ್ದಾನೆ. ನಾನು ಇಷ್ಟು ಜನರಿಗೆ ದಾನ ಮಾಡಿದ್ದೇನೆಂದು ಜಂಬ ಕೊಚ್ಚಿಕೊಳ್ಳುತ್ತಿದ್ದ.
ಒಮ್ಮೆ ಈ ಪ್ರಚಾರಪ್ರಿಯನಿಗೆ ಒಂದು ಕನಸು ಬೀಳುತ್ತದೆ. ಆ ಕನಸಿನಲ್ಲಿ ಬಂದ ಯಮ, ಭೂಮಿಯ ಮೇಲಿನ ನಿನ್ನ ಜೀವನ ಇಂದು ಸಮಾಪ್ತಿಯಾಯಿತು. ನಿನ್ನ ಜೀವ ಹರಣ ಮಾಡಲು ಬಂದಿದ್ದೇನೆ. ಬಾ ನಿನ್ನನ್ನು ನರಕಕ್ಕೆ ಅಟ್ಟುತ್ತೇನೆ ಎನ್ನುತ್ತಾನೆ. ಅದಕ್ಕೆ ಈ ಪ್ರಚಾರ ಪ್ರಿಯ ನಾನ್ಯಾಕೆ ನರಕಕ್ಕೆ ಬರಬೇಕು..? ನಾನು ಎಷ್ಟು ಬಡ ಬಗ್ಗರಿಗೆ ದಾನ ಮಾಡಿದ್ದೇನೆ ಗೊತ್ತಾ..? ಊಟ, ವಸತಿ, ಬಟ್ಟೆ ಇಲ್ಲದಿದ್ದವರು ಇಂದು ನನ್ನ ಹೆಸರು ಹೇಳಿಕೊಂಡು ಸುಖವಾಗಿದ್ದಾರೆ. ಇಂಥ ಪುಣ್ಯದ ಕೆಲಸ ಮಾಡಿರುವ ನನಗೇಕೆ ನರಕವೆಂದು ಪ್ರಶ್ನಿಸುತ್ತಾನೆ.
ಆಗ ಈ ಪ್ರಶ್ನೆಗೆ ಉತ್ತರಿಸಿದ ಯಮ, ದಾನ ಮಾಡುವುದು ಪುಣ್ಯದ ಕೆಲಸವೇ.. ನೀನು ದಾನ ಮಾಡಿದಾಗ ನಿನ್ನ ಖಾತೆಗೆ ಪುಣ್ಯ ಸೇರುತ್ತಿತ್ತು. ಆದ್ರೆ ನೀನು ದಾನ ಮಾಡಿದ್ದನ್ನು ಎಲ್ಲರ ಬಳಿ ಹೇಳಿಕೊಂಡಾಗ ಪುಣ್ಯ ಖಾಲಿಯಾಗಿಬಿಡುತ್ತಿತ್ತು. ಹಾಗಾಗಿ ಈಗ ನಿನ್ನ ಖಾತೆಯಲ್ಲಿ ಪುಣ್ಯ ಉಳಿದಿಲ್ಲ. ಈ ಕಾರಣಕ್ಕೆ ನಾನು ನಿನ್ನನ್ನು ನರಕಕ್ಕೆ ಕರೆದೊಯ್ಯುತ್ತೇನೆ ಎಂದು ಯಮ, ಪಾಶವನ್ನು ಹಿಡಿದು ಬರುತ್ತಾನೆ. ಆಗ ಪ್ರಚಾರಪ್ರಿಯನಿಗೆ ಎಚ್ಚರವಾಗುತ್ತದೆ. ತನ್ನ ತಪ್ಪನ್ನು ಅರಿತ ಪ್ರಚಾರಪ್ರಿಯ ತಾನು ಮಾಡಿದ ದಾನವನ್ನು ಬೇರೆಯವರ ಬಳಿ ಹೇಳುವುದನ್ನ ನಿಲ್ಲಿಸುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

