Health Tips: ಇಂದಿನ ಕಾಲದ ಆರೋಗ್ಯ ಮತ್ತು ಪ್ರಮುಖ ಸೌಂದರ್ಯ ಸಮಸ್ಯೆ ಅಂದ್ರೆ ಅದು ತಲೆಗೂದಲು ಉದುರೋದು. ಹಾಗಾಗಿ ನಾವಿಂದು ತಲೆಗೂದಲು ಉದುರದಿರಲು ಯಾವ ರೀತಿಯ ಆಯುರ್ವೇದಿಕ್ ಉಪಾಯ ಮಾಡಬಹುದು ತಿಳಿಯೋಣ ಬನ್ನಿ.
ನಿಮ್ಮ ತಲೆಗೂದಲು ಉದುರಬಾರದು ಅಂದ್ರೆ, ನೀವು ಮನೆಯಲ್ಲೇ ಶ್ಯಾಂಪೂ, ಅಥವಾ ಹೇರ್ ವಾಶ್ ಪುಡಿ ತಯಾರಿಸಿ ಬಳಸಬೇಕು. ಸಿಗೇಕಾಯಿ ಪುಡಿ ಮಾಡಿ ಬಳಸಬಹುದು. ಅಥವಾ ಸೀಗೇಕಾಯಿಯ ಶ್ಯಾಂಪೂ ತಯಾರಿಸಿ ಬಳಸಬಹುದು. ಇದಕ್ಕೆ ನೀವುದಾಸವಾಳದ ಎಲೆ, ಹೂವು ಬಳಸಬಹುದು.
ಇನ್ನು ಹೇರ್ ಕಂಡಿಷನಿಂಗ್ ಮಾಡಲು ನೀವು ದಾಸವಾಳದ ಎಲೆ ಅಥವಾ ಕಾಯಿಹಾಲಿನ ಬಳಕೆ ಮಾಡಬಹುದು. ಇದರಿಂದ ನಿಮ್ಮ ಕೂದಲ ಬುಡ ಶಕ್ತಿಯುತವಾಗುತ್ತದೆ. ಕೂದಲು ಸಾಫ್ಟ್ ಆ್ಯಂಡ್ ಶೈನಿಯಾಗಿರುತ್ತದೆ.
ಪ್ರತಿದಿನ ಬೆಳಿಗ್ಗೆ ತಿಂಡಿಗೂ ಮುನ್ನ ಡ್ರೈಫ್ರೂಟ್ಸ್ ಮತ್ತು ಚೀಯಾ ಸೀಡ್ಸ್ ನೀರಿನಲ್ಲಿ ನೆನೆಸಿಟ್ಟು ಸೇವಿಸಿ. ಇದು ದೇಹದ ಮೇಲೆ ಪ್ರಭಾವ ಬೀರಿ, ನಿಮ್ಮ ತಲೆಬುಡವನ್ನು ಗಟ್ಟಿಯಾಗಿಸುತ್ತದೆ. ಅದೇ ರೀತಿ ಹಣ್ಣು, ತರಕಾರಿ, ಹಾಲು, ತುಪ್ಪ, ಎಳನೀರು, ನೀರಿನ ಸೇವನೆಯೂ ಯಥೇಚ್ಛವಾಗಿ ಮಾಡಿದರೆ, ನಿಮ್ಮ ಕೂದಲು ಚೆನ್ನಾಗಿ ಬೆಳೆಯುತ್ತದೆ.
ಇದಲ್ಲದೇ ನೀವು ಬೆಳಿಗ್ಗೆ ತಿಂಡಿ ತಿನ್ನುವ ಮುನ್ನ ಕರಿಬೇವಿನ ಜ್ಯೂಸ್ ಕುಡಿದರೆ, ನಿಮ್ಮ ಕೂದಲಿನ ಬೆಳವಣಿಗೆ ಅತ್ಯುತ್ತಮವಾಗಿರುತ್ತದೆ. ಅಥವಾ ನೀವು ನಿಮ್ಮ ಊಟ ತಿಂಡಿಯಲ್ಲಿ ಕರಿಬೇವಿನ ಖಾರವಿರದ ಚಟ್ನಿಪುಡಿ ಬಳಸಬೇಕು.
ಇನ್ನು ನೀವು ಯೋಗ ಮಾಡುವುದಿದ್ದರೆ, ಯೋಗ ಗುರುಗಳಿಂದ ನಿಮ್ಮ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಆಗುವಂತೆ ಯೋಗ ಕಲಿತುಕ“ಳ್ಳಿ. ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಯೋಗ ಇರುತ್ತದೆ. ಅದೇ ರೀತಿ ಸೌಂದರ್ಯ ಹೆಚ್ಚಿಸಿಕ“ಳ್ಳಲು ಕೂಡ ಯೋಗವಿದೆ. ಇಂಥ ಯೋಗವನ್ನು ಪ್ರತಿದಿನ ಮಾಡುವುದರಿಂದ ನಿಮ್ಮ ಆರೋಗ್ಯ, ಸೌಂದರ್ಯ ಎಲ್ಲವೂ ಚೆನ್ನಾಗಿರುತ್ತದೆ.