Thursday, May 30, 2024

Latest Posts

ನಿಜವಾಗ್ಲೂ ಅಕ್ಷಯ ತೃತೀಯಕ್ಕೆ ಚಿನ್ನಕೊಂಡರೆ, ಚಿನ್ನ ಅಕ್ಷಯವಾಗತ್ತಾ..? ಶ್ರೀಮಂತಿಕೆ ಬರತ್ತಾ..?

- Advertisement -

Spiritual News: ಪ್ರತೀ ವರ್ಷ ಅಕ್ಷಯ ತೃತೀಯದ ಸಮಯದಲ್ಲಿ ಹಲವರು ಚಿನ್ನ ಕೊಂಡುಕೊಳ್ಳುತ್ತಾರೆ. ಏಕೆಂದರೆ ಈ ದಿನ ಚಿನ್ನ ಖರೀದಿಸಿದರೆ, ಚಿನ್ನ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಹಲವರಿಗಿದೆ.

ಆದರೆ ಚಿನ್ನ ಖರೀದಿಸಬೇಕೆಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಇದು ಬಾಯಿಂದ ಬಾಯಿಗೆ ಹರಡಿರುವ ಮಾತಾಗಿ, ಸದ್ಯ ಈ ಪದ್ಧತಿ ಚಾಲ್ತಿಯಲ್ಲಿದೆ. ಅಕ್ಷಯ ತೃತೀಯದ ದಿನ ಏನೇ ಮಾಡಿದರೂ ಅದರ ಅಭಿವೃದ್ಧಿಯಾಗುತ್ತದೆ ಅಂತಾ ಹೇಳಲಾಗಿದೆ. ಹಾಗಾಗಿ ಮುಖ್ಯವಾಗಿ ದಾನ ಮಾಡಬೇಕಾಗಿದೆ. ಅಕ್ಷಯ ತೃತೀಯದ ದಿನ ದಾನ ಮಾಡಿದರೆ, ದಾನ ಮಾಡುವ ಯೋಗ್ಯತೆ ಹೆಚ್ಚಾಗುತ್ತದೆ ಎನ್ನುತ್ತಾರೆ.

ಅಲ್ಲದೇ, ಇದರಿಂದ ದಾನ ಮಾಡಿದವರಿಗೂ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಹೆಚ್ಚಾಗಿ ಪುಸ್ತಕ, ಅಕ್ಕಿ, ಅರಿಶಿನ ದಾನ ಮಾಡಲಾಗುತ್ತದೆ. ಈ ದಿನ ವಿದ್ಯಾಭ್ಯಾಸ ಶುರು ಮಾಡಿದರೆ, ವಿದ್ಯೆ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಹಲವರು ವಿದ್ಯಾಭ್ಯಾಸವನ್ನು ಇದೇ ದಿನ ಶುರು ಮಾಡುತ್ತಾರೆ. ಇನ್ನು ಗೃಹಪ್ರವೇಶ ಸೇರಿ ಹಲವು ಶುಭಕಾರ್ಯಗಳನ್ನು, ಪೂಜೆಯನ್ನು ಇದೇ ದಿನ ಮಾಡಲಾಗುತ್ತದೆ.

ಕಾಂಗ್ರೆಸ್ಸಿನವರು ಚುನಾವಣಾ ಸಮಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ನಾಪತ್ತೆಯಾಗುತ್ತಾರೆ: ಬಿ.ವೈ.ವಿಜಯೇಂದ್ರ

ಧಾರವಾಡದಲ್ಲಿ ಪಾದಯಾತ್ರೆ ನಡೆಸಿ, ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ

ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು

- Advertisement -

Latest Posts

Don't Miss