Tuesday, May 21, 2024

Latest Posts

ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು

- Advertisement -

National News: ಪ್ರಾಂಶುಪಾಲೆ ಶಾಲೆಯ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಶಿಕ್ಷಕಿ ಶಾಲೆಗೆ ತಡವಾಗಿ ಬಂದಳೆಂದು ಬಾಯಿಗೆ ಬಂದ ಹಾಗೆ ಮಾತನಾಡಿದ್ದು, ಶಿಕ್ಷಕಿ ಮತ್ತು ಪ್ರಾಂಶುಪಾಲೆಯ ನಡುವೆ ಜಗಳವಾಗಿ, ಜಗಳ ತಾರಕಕ್ಕೇರಿ, ಗುದ್ದಾಟ ನಡೆದಿದೆ. ಈ ವೇಳೆ ಪ್ರಾಂಶುಪಾಲೆ ಶಿಕ್ಷಕಿಯ ಬಟ್ಟೆ ಹಿಡಿದು ಎಳೆದು, ಹರಿದಿದ್ದಾಳೆ.

ಸ್ಥಳದಲ್ಲಿ ಇದ್ದ ಸಹ ಶಿಕ್ಷಕರು, ಜಗಳ ಬಿಡಿಸಲು ಹೋದರೂ ಕೂಡ, ಜಗಳ ಮುಂದುವರೆದಿದ್ದು, ಶಿಕ್ಷಕಿಯ ಬಟ್ಟೆ ಹರಿದ ಪ್ರಾಂಶುಪಾಲೆ ವಿರುದ್ಧ ಸಹ ಶಿಕ್ಷಕರು ಗರಂ ಆಗಿದ್ದಾರೆ. ಸ್ಥಳದಲ್ಲೇ ಇದ್ದ ಶಿಕ್ಷಕಿಯೊಬ್ಬರು, ನೀವು ಪ್ರಾಂಶುಪಾಲರಾಗಿ ಇಂಥ ಕೆಲಸ ಮಾಡುತ್ತೀರಾ..? ನಿಮ್ಮ ಮುಖ ತೋರಿಸಿ ಎಂದು ವೀಡಿಯೋ ಮಾಡಿಕೊಂಡಿದ್ದಾರೆ.

ಇನ್ನು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಂಶುಪಾಲೆಯ ವಿರುದ್ಧ ನೆಟ್ಟಿಗರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಮಕ್ಕಳಿಗೆ ಪಾಠ ಕಲಿಸುವವರೇ ಹೀಗೆ ಮಾಡಿದರೆ, ಹೇಗೆ ಅಂತಾ ಪ್ರಶ್ನಿಸಿದ್ದಾರೆ.

ನಿಮ್ಮ ಮುತ್ತಾತ ಬಂದ್ರು ಕಾಶ್ಮೀರದಲ್ಲಿ 370 ಆರ್ಟಿಕಲ್ ವಾಪಸ್ ತರೋಕ್ಕೆ ಆಗಲ್ಲ: ಪ್ರಹ್ಲಾದ್ ಜೋಶಿ

ಕರ್ನಾಟಕದಲ್ಲಿ ಮೋದಿ ಎಷ್ಟೆಲ್ಲ ಶೌಚಾಲಯ ನಿರ್ಮಿಸಿದ್ದಾರೆ. ಆದರೂ ಕಾಂಗ್ರೆಸ್‌ನವರು ಚೊಂಬು ಹಿಡಿದು ಓಡಾಡುತ್ತಿದ್ದಾರೆ: ಅಣ್ಣಾಮಲೈ

ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ: ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss