Monday, April 14, 2025

Latest Posts

ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ ದೇವರಿಗೆ ತಲುಪುತ್ತದೆ..!

- Advertisement -

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗಳನ್ನೂ ಮಾಡಲು ಕೆಲವು ನಿಯಮಗಳು ನಿರ್ಧಾರ ಗೊಂಡಿದೆ ನಾವು ಈ ನಿಯಮಗಳನ್ನು ಪಾಲಿಸಿಕೊಂಡು ಪೂಜೆಗಳನ್ನು ಮಾಡಬೇಕು ಹಾಗ ಮಾತ್ರ ನಮ್ಮ ಪೂಜೆಗಳಿಗೆ ಅರ್ಥವಿರುತ್ತದೆ . ಇಲ್ಲಿ ನಮ್ಮ ಆರಾಧನೆಯ ಫಲಕೂಡ ದೊರೆಯುತ್ತದೆ . ಕೆಲವೊಮ್ಮೆ ನಾವು ಭಕ್ತಿಯಿಂದ ಪೂಜೆಗಳನ್ನು ಮಾಡಿದರೂ ನಮ್ಮ ಮನಸ್ಸಿನ ಇಚ್ಛೆಗಳು ನೆರವೇರುವುದಿಲ್ಲ, ನಮ್ಮ ಕಷ್ಟಗಳೂ ಸಹ ದೂರವಾಗುವುದಿಲ್ಲ , ನಮಗೆ ಮಾನಸಿಕ ಶಾಂತಿಕೂಡ ದೊರೆಯುವುದಿಲ್ಲ ,ಈ ರೀತಿಏಕೆ ಹಾಗುತ್ತದೆ ಗೊತ್ತ..? ಇವುಗಳಿಗೆ ಕಾರಣ ನೀವು ಮಾಡುವಂತಹ ಪೂಜೆಗಳಲ್ಲಿ ತಪ್ಪಾಗಿರಬಹುದು ಅಥವಾ ಪೂಜೆ ಮಾಡುವಂತಹ ಸಮಯದಲ್ಲಿ ಕೆಲವೊಂದು ಮುಖ್ಯವಾದ ವಿಷಯಗಳನ್ನು ನೀವು ಮರೆಯುತ್ತಿರಬಹುದು ಈ ಕಾರಣಗಳಿಂದ ನಿಮ್ಮ ಪೂಜೆಯು ದೇವರಿಗೆ ತಲಪುತ್ತಿರುವುದಿಲ್ಲ ಹಾಗಾದರೆ ದೇವರ ಕೋಣೆಯಲ್ಲಿ ಯಾವ ರೀತಿಯ ಪೂಜೆಯನ್ನು ಮಾಡುವುದರಿಂದ ಸುಖ ಪ್ರಾಪ್ತಿಯಾಗುತ್ತದೆ , ಅನೋದರ ಬಗ್ಗೆ ತಿಳಿದುಕೊಳ್ಳೋಣ .

ಮೊದಲಿಗೆ ಪೂಜೆ ಮಾಡುವ ಮುನ್ನ ನಿಮ್ಮ ಪೂಜಾ ಕೊಠಡಿ ಸರಿಯಾದ ದಿಕ್ಕಿನಲ್ಲಿ ಇದ್ಯಾ ಇಲ್ಲವಾ ಎಂದು ನೋಡಬೇಕು , ವಾಸ್ತುವಿನ ಅನುಸಾರವಾಗಿ ಮನೆಯಲ್ಲಿ ದೇವರಕೋಣೆ ಉತ್ತರ ಪೂರ್ವ ಅಂದರೆ ಈಶಾನ್ಯ ದಿಕ್ಕಿನಲ್ಲಿ ಇರಬೇಕು , ಪ್ರತಿದಿನ ಮುಂಜಾನೆ ಬೇಗ ಎದ್ದು ಸ್ನಾನಾದಿ ಕಾರ್ಯಗಳನ್ನು ಮುಗಿಸಿಕೊಂಡು ಸ್ವಚ್ಛವಾದ ಬಟ್ಟೆಗಳನ್ನು ದರಸಿಕೊಂಡು , ಬಗವಂತನ ಪೂಜೆಯನ್ನು ಮಾಡಬೇಕು, ಮುಂಜಾನೆ ಮತ್ತು ಸಾಯಂಕಾಲ ದೇವರ ಮುಂದೆ ತಪ್ಪದೆ ದೀಪವನ್ನು ಬೆಳಗಿಸಬೇಕು, ಮುಖ್ಯವಾಗಿ ದೇವರಕೋಣೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು . ದೇವರ ಕೋಣೆಯಲ್ಲಿರುವ ಮೂರ್ತಿಯಳನ್ನು ಹಾಗೂ ಫೋಟೋಗಳನ್ನು ಸ್ವಚ್ಛಗೊಳಿಸಬೇಕು. ನಿಯಾಮಗಳನ್ನು ಗಮನದಲ್ಲಿಟ್ಟುಕೊಂಡು ಪದ್ದತಿಯಿಂದ ಪೂಜೆಯನ್ನು ಮಾಡಬೇಕು .ಯಾವುದೇ ಕಾರಣಕ್ಕೂ ನೀವು ದೇವರಿಗೆ ಅರ್ಪಿಸಿಸುವ ಹೂಗಳನ್ನು ವಾಸನೆ ನೋಡಬಾರದು ಆರತಿಮಾಡುವಾಗ ತಪ್ಪದೆ ಗಂಟೆಯನ್ನು ಬಾರಿಸಬೇಕು ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ .

ಪೂಜೆಯಲ್ಲಿ ಕಳಸಕ್ಕೆ ವಿಶೇಷವಾದ ಮಹತ್ವವಿದೆ , ಕಲಸವಿಲ್ಲದ ಪೂಜೆ ಅಪೂರ್ಣ ಎಂದು ಪರಿಗಣಿಸಲಾಗುತ್ತದೆ . ದೇವತೆಗಳನ್ನು ಆಹ್ವನಿಸಲು ಕಳಸವನ್ನು ಪೂಜೆಯಲ್ಲಿ ಬಳಸುತ್ತಾರೆ . ಈಶ್ವರನ ಮುಂದೆ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಇಡುವುದು ಬಹಳ ಶುಭ ಎಂದು ಪರಿಗಣಿಸಲಾಗಿದೆ . ನಮ್ಮ ಶಾಸ್ತ್ರಗಳಲ್ಲಿ ಕಳಸವನ್ನು ಸುಖ ಮತ್ತು ಸಮೃದ್ಧಿಯ ಪ್ರತೀಕ ಎಂದು ಪರಿಗಣಿಸಿದ್ದಾರೆ , ಜೊತೆಗೆ ದೀಪವನ್ನು ಹಚ್ಚುವುದರಿಂದ ನಿಮಗೆ ಹಲವಾರು ರೀತಿಯ ಲಾಭಗಳು ದೊರೆಯುತ್ತದೆ . ಹಿಂದೂ ಧರ್ಮದಲ್ಲಿ ಸಾಯಂಕಾಲ ವೇಳೆ ತುಂಬಾ ಮಹತ್ವ ಪೂರ್ಣ ಎಂದು ತಿಳಿಸಿದ್ದಾರೆ ಯಾರ ಮನೆಯಲ್ಲಿ ಸಾಯಂಕಾಲ ದೀಪಗಳನ್ನು ಉರಿಸುವುದಿಲ್ಲವೋ ಅಂತಹ ಮನೆಯಲ್ಲಿ ಸಾಮಾನ್ಯವಾಗಿ ತೊಂದರೆಗಳು ಕಂಡು ಬರುತ್ತದೆ . ಇವರ ಮನೆಯಲ್ಲಿ ಹಣದ ಸಮಸ್ಯೆಗಳು ಕಂಡುಬರುತ್ತದೆ . ಮನೆಯಲ್ಲಿ ಮಕ್ಕಳು, ತಮ್ಮ ತಂದೆ ತಾಯಿಯ ಮಾತುಗಳನ್ನು ಕೇಳುವುದಿಲ್ಲ ಸಾಕಷ್ಟು ಜನರಿಗೆ ಈ ಉಪಾಯಗಳು ಗೊತ್ತಿದ್ದರೂ ಸಹ ಮಾಡುವುದಿಲ್ಲ , ನಿಮ್ಮ ಮನೆಯ ದೇವರ ಮನೆಯಿಂದಲೇ ಮನೆಯಲ್ಲಿರುವ ಎಲ್ಲ ನೆಗೆಟಿವ್ ಎನರ್ಜಿಗಳು ದೂರವಾಗುತ್ತದೆ .

ಮನೆಯ ಸದಸ್ಯರಿಗೆ ಅತಿಯಾದ ರೋಗಗಳು ಬರುತಿದ್ದರೆ, ಮನೆಯಲ್ಲಿ ತೊಂದರೆಗಳು ಹೆಚ್ಚಾಗುತ್ತಿದ್ದರೆ ಇಂತಹ ಎಲ್ಲ ಸಮಸ್ಯೆಗಳನ್ನು ದೂರಮಾಡಲು ನೀವು ನಿಮ್ಮ ಮನೆಯಲ್ಲಿ ಸೂರ್ಯ ಮುಳುಗುವ ಸಮಯದಲ್ಲಿ ತುಪ್ಪದ ದೀಪ ಅಥವಾ ಸಾಸಿವೆ ಎಣ್ಣೆಯದೀಪ ಅಥವಾ ಯದಾದರೂ ಎಣ್ಣೆಯ ದೀಪವನ್ನು ನೀವು ಪೂರ್ವ ದಿಕ್ಕಿನಲ್ಲಿ ಉರಿಸಬೇಕು, ಪ್ರತಿದಿನ ಈ ಕಾರ್ಯಗಳು ಮಾಡಿದಾಗ ಮಾತ್ರ ನಿಮಗೆ ಲಾಭಗಳು ದೊರೆಯುತ್ತದೆ .

ನಿಮಗೆ ಹಣದ ಸಮಸ್ಯೆಗಳು ಇದ್ದರೆ ನೌಕರಿ ವ್ಯವಸಾಯಕ್ಕೆ ಸಂಬಂದಿಸಿದ ಸಮಸ್ಯೆಗಳು ಇದ್ದರೆ ನೀವು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ದಿನವೂ ತುಪ್ಪದ ದೀಪವನ್ನು ಬೆಳಗಬೇಕು , ಇದನ್ನು ಒಂದುದಿನವು ಮಿಸ್ ಮಾಡದೇ ಉರಿಸಬೇಕು. ಹೀಗೆ ನೀವು ಪ್ರತಿದಿನ ಮಾಡಿದರೆ ಹಣಕ್ಕೆ ಸಂಬಂದಿಸಿದ ಸಮಸ್ಯೆಗಳು ದೂರವಾಗುತ್ತದೆ.  ಯಾರಿಗೆ ನೌಕರಿ ಸಿಗುವುದು ಕಷ್ಟವಾಗಿರುತ್ತದೋ ಅವರಿಗೆ ನೌಕರಿ ಸಿಗುತ್ತದೆ. ಪ್ರತಿದಿನ ಸಾಯಂಕಾಲ ತಪ್ಪದೆ ಪಾಲಿಸಬೇಕು, ಆಗ ಮಾತ್ರ ನೀವು ನಿಮ್ಮ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ  ಹಾಗೂ ನಿಮ್ಮ ಮನಸ್ಸಿನ ಇಚ್ಚೆಗಳು ಈಡೇರುತ್ತದೆ.

ಜ್ಯೋತಿಷ್ಯದಲ್ಲಿ ನಿಂಬೆ ಹಣ್ಣಿನ ಪರಿಣಾಮಕಾರಿ ತಂತ್ರಗಳು..!

ದಂಪತಿಗಳ ನಡುವೆ ನಿರಂತರ ಜಗಳವೇ..? ಮನೆಯಲ್ಲಿ ಈ ಬದಲಾವಣೆಗಳನ್ನು ಪ್ರಯತ್ನಿಸಿ…!

ಸಮಸ್ಯೆ ಏನೇ ಇರಲಿ..ದೇವರು ನಮ್ಮನ್ನು ಕಾಪಾಡಲು ಪ್ರಯತ್ನಿಸುತ್ತಾನೆ.. ಈ ಕಥೆ ಕೇಳಿದರೆ ನಿಮಗೇ ಅರ್ಥವಾಗುತ್ತದೆ…

- Advertisement -

Latest Posts

Don't Miss