Friday, April 11, 2025

Latest Posts

ಪ್ರತಿದಿನ ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ನಿಮ್ಮ ಸ್ವಂತ..!

- Advertisement -

ಗರುಡ ಪುರಾಣದಲ್ಲಿ ದಿನನಿತ್ಯದ ವಿಶೇಷ ವಿಷಯಗಳನ್ನೂ ಉಲ್ಲೇಖಿಸಲಾಗಿದೆ. ದಿನ ಹೇಗೆ ಪ್ರಾರಂಭವಾಗಬೇಕು, ಜೀವನದಲ್ಲಿ ಏನು ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.

ಒಟ್ಟು 4ವೇದಗಳು ಮತ್ತು 18ಮಹಾಪುರಾಣಗಳನ್ನು ನಮಗೆ ವಿವರಿಸಲಾಗಿದೆ. ಈ ವೇದಗಳು ಮತ್ತು ಪುರಾಣಗಳಲ್ಲಿ ಜ್ಞಾನ ಮತ್ತು ಜೀವನದ ಸಾರ ಅಡಗಿದೆ ಎಂದು ಹೇಳಲಾಗುತ್ತದೆ.18ಮಹಾಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದು ವಿಷ್ಣು ಮತ್ತು ಅವನ ವಾಹನ ಗರುಡ (ಪಕ್ಷಿ) ನಡುವಿನ ಸಂಭಾಷಣೆಯನ್ನು ವಿವರಿಸುತ್ತದೆ. ಉತ್ತಮ ಜೀವನ, ಸಾವು ಮತ್ತು ಮರಣಾನಂತರದ ಘಟನೆಗಳನ್ನು ವಿವರಿಸುತ್ತದೆ. ಇದಲ್ಲದೇ ದಿನನಿತ್ಯದ ಜೀವನದ ವಿಶೇಷ ವಿಷಯಗಳನ್ನೂ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ದಿನವನ್ನು ಹೇಗೆ ಪ್ರಾರಂಭಿಸ ಬೇಕು? ಹೀಗೆ ಮಾಡದ್ದಿದ್ದರೆ ನಿಮ್ಮ ದಿನ ಅಪೂರ್ಣ ,ಯಾವ ಕೆಲಸಗಳನ್ನು ನಿಯಮಿತವಾಗಿ ಮಾಡುವುದರಿಂದ ವ್ಯಕ್ತಿಯು ದಿನವಿಡೀ ಸಂತೋಷವಾಗಿರುತ್ತಾನೆ ಹಾಗೂ ನಿಮ್ಮಅನೇಕ ಸಮಸ್ಯೆಗಳನ್ನು ಹೇಗೆ ತೊಡೆದು ಹಾಕಿ ಸಂತೋಷದ ಜೀವನವನ್ನು ನಡೆಸಬೇಕು ಎಂದು ಪುರಾಣಗಳಲ್ಲಿ ಹೇಳಾಲಾಗಿದೆ. ಇವುಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಸಂತೋಷವು ನಿಮ್ಮನ್ನು ಹಿಂಬಾಲಿಸುತ್ತದೆ. ಸಂತೋಷದಿಂದ ಅದೃಷ್ಟ ಹೆಚ್ಚಾಗುತ್ತದೆ. ಈ ಕೆಲಸಗಳನ್ನು ಮಾಡುವುದರಿಂದ ಮಾತ್ರ ಮರಣಾನಂತರ ಮೋಕ್ಷವನ್ನು ಪಡೆಯುತ್ತಾನೆ.

ಅನ್ನದಾನ..
ಅನ್ನದಾನ ಮಾಡುವುದು ಮಾನವನ ಜೀವನದಲ್ಲಿ ಅತ್ಯಂತ ದೊಡ್ಡ ಪುಣ್ಯ ಎಂದು ಹೇಳಲಾಗುತ್ತದೆ. ಗರುಡ ಪುರಾಣದ ಪ್ರಕಾರ.. ಪ್ರತಿದಿನ ಹಸಿದವರಿಗೆ ಮತ್ತು ಬಡವರಿಗೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅನ್ನದಾನ ಮಾಡಿದರೆ ನಿಮ್ಮ ಪುಣ್ಯವು ಹೆಚ್ಚಾಗುತ್ತದೆ. ದಾನ ಮಾಡುವುದರಿಂದ ಕುಟುಂಬಕ್ಕೆ ದೇವರ ಆಶೀರ್ವಾದ ಸಿಗುತ್ತದೆ

ಧ್ಯಾನ..
ವ್ಯಕ್ತಿಯು ಚಿಂತೆ ಎಲ್ಲದೆ ಇರಬೇಕು ಎಂದು ಹೇಳುತ್ತಾರೆ, ಏಕೆಂದರೆ ಧ್ಯಾನವು ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಗರುಡ ಪುರಾಣದ ಪ್ರಕಾರ ಧ್ಯಾನ ಎಂದರೆ ಜಪ, ಒಬ್ಬ ವ್ಯಕ್ತಿ ಪ್ರತಿ ದಿನ ಸ್ವಲ್ಪ ಸಮಯ ಪ್ರಶಾಂತ ಮನಸ್ಸಿನಿಂದ ಧ್ಯಾನ ಮಾಡಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ದೇವರಿಗೆ ನೈವೇದ್ಯ..
ಕೆಲವರು ಅಡುಗೆ ಮಾಡಿದ ನಂತರ ಸ್ವಯಂ ಊಟ ಬಡಿಸಿ ತಿನ್ನಲು ಪ್ರಾರಂಭಿಸುತ್ತಾರೆ. ಆದರೆ ಗರುಡ ಪುರಾಣದಲ್ಲಿ ಹೇಳಿರುವುದು ಮನೆಯಲ್ಲಿ ತಯಾರಿಸಿದ ಆಹಾರವನ್ನು ಮೊದಲು ದೇವರಿಗೆ ಅರ್ಪಿಸಬೇಕು. ಇದರಿಂದ ಲಕ್ಷ್ಮಿ ದೇವಿಯ ಕೃಪೆಯು ಮನೆಯಲ್ಲಿ ನೆಲೆಸುತ್ತದೆ ಮತ್ತು ಅನ್ನಪೂರ್ಣೆ ನೆಲೆಸುತ್ತಾಳೆ. ಆದರೆ, ಯಾವಾಗಲೂ ದೇವರಿಗೆ ಶುದ್ಧವಾದ ಆಹಾರವನ್ನು ಅರ್ಪಿಸಲು ಮರೆಯದಿರಿ.

ಮನೆಯಲ್ಲಿ ನವಿಲುಗರಿ ಇದ್ದರೆ ಆ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ..ಕುತೂಹಲಕಾರಿ ವೈಶಿಷ್ಟ್ಯಗಳು ನಿಮಗಾಗಿ..!

2022 ಮುಗಿಯುವ ಮೊದಲು ಈ 5 ವಸ್ತುಗಳನ್ನು ಮನೆಗೆ ತನ್ನಿ..!!

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಉಚಿತವಾಗಿ ತೆಗೆದುಕೊಳ್ಳಬೇಡಿ..!

 

- Advertisement -

Latest Posts

Don't Miss