Health tips:
ಉತ್ತಮ ಆರೋಗ್ಯ ಬೇಕಾದರೆ ಸೊಪ್ಪನ್ನು ಹೆಚ್ಚು ಸೇವಿಸುವುದು ಉತ್ತಮ. ಪ್ರತಿಯೊಬ್ಬ ವೈದ್ಯರೂ ಹೇಳುವುದು ಇದನ್ನೇ. ಏಕೆಂದರೆ ಪ್ರಕೃತಿ ನಮಗೆ ನೀಡಿದ ವರವೆನ್ನಬಹುದು .ಸೊಪ್ಪನ್ನು ಸೇವಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಹಲವಾರು ಪ್ರಯೋಜನಾಗಲಿದೆ . ಪ್ರತಿದಿನ ಯಾವುದಾದರೊಂದು ಸೊಪ್ಪನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕೆ ಬಹಳ ಪ್ರಯೋಜನಗಲಿದೆ .ಉತ್ತಮ ಆರೋಗ್ಯಕ್ಕಾಗಿ ಸಾವಿರ ಸಾವಿರ ದುಡ್ಡು ಖರ್ಚು ಮಾಡುವ ಅಗತ್ಯವಿಲ್ಲ. ಚಿಕ್ಕ ಸಲಹೆಗಳನ್ನು ಪಾಲಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲೂ ಹಸಿರು ತರಕಾರಿಗಳನ್ನು ಪ್ರತಿ ದಿನವೂ ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು .ಏಕೆಂದರೆ ಪ್ರಕೃತಿ ನಮಗೆ ನೀಡಿದ ಕೊಡುಗೆ ಸೊಪ್ಪು. ಸೊಪ್ಪನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಲಾಭಗಳಿವೆ. ಆಯುರ್ವೇದ ತಜ್ಞರು ಪದೇ ಪದೇ ಹೇಳುವಂತೆ ಹಸಿರು ತರಕಾರಿಗಳು ಪ್ರತಿದಿನ ಸೇವಿಸಿದರೆ ಜನರ ಜೀವನ ಶೈಲಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
ಸೊಪ್ಪಿನಲ್ಲಿ ಕಡಿಮೆ ಕೊಬ್ಬಿನಂಶ ಹೊಂದಿರುವುದಲ್ಲದೆ, ದೇಹಕ್ಕೆ ಅಗತ್ಯವಿರುವ ಅನೇಕ ರೀತಿಯ ಖನಿಜಗಳು,ವಿಟಮಿನ್ ಗಳು ಮತ್ತು ಪ್ರೋಟೀನ್ ಗಳು ದೇಹಕ್ಕೆ ಒದಗಿಸುತ್ತದೆ. ಮತ್ತು ಕೆಲವು ಎಲೆಗಳ ಆಹಾರವನ್ನು ರುಚಿಯಾಗಿ ಮಾಡುವ ವಿಶೇಷ ಗುಣವನ್ನು ಹೊಂದಿವೆ. ನಮಗೆ ತಿನ್ನಲು ಹಲವಾರು ರೀತಿಯ ಸೊಪ್ಪುಗಳು ಲಭ್ಯವಿದ್ದರೂ, ಹೆಚ್ಚಿನ ಜನರು ಅವುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ನಿಮ್ಮ ದೈನಂದಿನ ಆಹಾರದಲ್ಲಿ ಸೊಪ್ಪನ್ನು ಸೇರಿಸುವುದರಿಂದ ಅನೇಕ ಪ್ರಯೋಜನಗಳಿದೆ. ಯಾವ ಸೊಪ್ಪು ತಿನ್ನುವುದರಿಂದ ಯಾವ ಪ್ರಯೋಜನಗಳಿದೆ ಎಂದು ತಿಳಿಯೋಣ.
ಕರಿಬೇವಿನ ಎಲೆಗಳು:
ಅನೇಕ ಜನರು ಕರಿಬೇವಿನ ಸೊಪ್ಪನ್ನು ತಿನ್ನುವುದಿಲ್ಲ ಕರಿಬೇವಿನ ಎಲೆಗಳನ್ನು ಪ್ರತಿದಿನ ಮೂರು ತಿಂಗಳವರೆಗೆ ಸೇವನೆ ಮಾಡಿದರೆ ಮಧುಮೇಹ ರೋಗ ಗುಣವಾಗುತ್ತದೆ .ಇದು ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳು ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಆದರೆ ನೀವು ಅವುಗಳನ್ನು ಹಸಿದಾಗಿ ಹಾಗೆಯೆ ತಿನ್ನಲು ಹಾಗದಿದ್ದರೆ , ನೀವು ಎಲೆಗಳನ್ನು ಒಣಗಿಸಿ ತೆಗೆದುಕೊಳ್ಳಬಹುದು. ಇದನ್ನು ಆಹಾರದಲ್ಲಿ ಹೇಗೆ ಸೇರಿಸಿದರೂ ಅದು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.ಕರಿಬೇವಿನ ಎಲೆಗಳನ್ನು ಜೇನುತುಪ್ಪದೊಂದಿಗೆ ಅದ್ದಿ ತಿಂದರೆ ಮೂಲವ್ಯಾಧಿ, ಆಮಶಂಕೆ, ಅತಿಸಾರ ರೋಗಗಳನ್ನು ನಿವಾರಿಸಬಹುದು. ಕರಿಬೇವಿನ ಚಟ್ನಿಯನ್ನು ಪ್ರತಿದಿನ ಉಪಯೋಗಿಸುತ್ತಿದ್ದರೆ ಬೊಜ್ಜು ಕರಗಿ ಹೋಗಿ ದೇಹದ ತೂಕ ಕಡಿಮೆಯಾಗುತ್ತದೆ .
ಸಬ್ಬಸಿಗೆ ಸೊಪ್ಪು;
ಬಾಣಂತಿಯರು ಸಬ್ಬಸಿಗೆ ಸೊಪ್ಪು ಸೇವಿಸಿದರೆ ಎದೆಹಾಲು ವೃದ್ಧಿಯಾಗುವುದು. ಸಬ್ಬಸಿಗೆ ಸೊಪ್ಪಿನ ಸಾರು ಮತ್ತು ಪಲ್ಯದ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಒಣದ ಸಬ್ಬಸಿಗೆ ಸೊಪ್ಪನ್ನು ಮೆಂತ್ಯದೊಂದಿಗೆ ಮಿಶ್ರ ಮಾಡಿ ತುಪ್ಪದಲ್ಲಿ ಹುರಿದು ಒಣ ಮೆಣಸಿನಕಾಯಿ, ಉಪ್ಪು, ಸಾಸಿವೆ ಸೇರಿಸಿ ಕುಟ್ಟಿ ಪುಡಿ ಮಾಡಿಕೊಂಡು ಬಳಸುವುದರಿಂದ ಅಜೀರ್ಣ, ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ. ಸಬ್ಬಸಿಗೆ ಸೊಪ್ಪನ್ನು ಅರಿಶಿನದೊಂದಿಗೆ ನುಣ್ಣಗೆ ಅರೆದು ಹುಣ್ಣುಗಳಿಗೆ ಹಚ್ಚಿದರೆ ಬೇಗನೆ ವಾಸಿಯಾಗುತ್ತದೆ .ಸಬ್ಬಸಿಗೆ ಸೊಪ್ಪಿನ ಕಷಾಯ ಮಗುವಿಗೆ ಕುಡಿಸಿದರೆ ಹಾಲು ಜೀರ್ಣವಾಗುತ್ತದೆ ಮತ್ತು ಮಗುವಿಗೆ ನಿದ್ರೆ ಚೆನ್ನಾಗಿ ಬರುತ್ತದೆ.
ಪುದೀನ ಸೊಪ್ಪು:
ಪುದೀನ ಸೊಪ್ಪಿನ ರಸವನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೆ ಅಜೀರ್ಣ, ನೆಗಡಿ ಮತ್ತು ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.ಹಾಗೂ ಚಟ್ನಿ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಪುದೀನ ಎಲೆಗಳನ್ನು ಗಿಡದಿಂದ ಸೇವಿಸುವುದರಿಂದ ನಾಲಿಗೆಯ ರುಚಿಗ್ರಹಣ ಶಕ್ತಿ ವೃದ್ಧಿಯಾಗುತ್ತದೆ. ಪುದೀನ ಸೊಪ್ಪಿನ ಕಶಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ಗಂಟಲು ಕಟ್ಟಿರುವುದು ನಿವಾರಣೆಯಾಗುತ್ತದೆ. ಊಟದ ನಂತರ ಒಂದೆರಡು ಪುದೀನ ಎಲೆಗಳನ್ನು ಜಗಿದು ತಿಂದರೆ ಹಲ್ಲು ಹುಳುಕಾಗುವುದು ತಪ್ಪುತ್ತದೆ. ಶರೀರದಲ್ಲಿನ ಬೇಡದ ರಾಸಾಯನಿಕ ಪದಾರ್ಥಗಳನ್ನು ರಕ್ತದಿಂದ ಬೇರ್ಪಡಿಸಿ ಮೂತ್ರದ ಮೂಲಕ ಹೊರಕ್ಕೆ ಹಾರುತದೆ. ಪುದೀನ ರಸವನ್ನು ಮುಖಕ್ಕೆ ಹಚ್ಚಿದರೆ ಮೊಡವೆಗಳು ಗುಣವಾಗುತ್ತವೆ. ಬಾರಿಯಲ್ಲಿನ ದುರ್ವಾಸನೆಯನ್ನು ನಿವಾರಿಸಲು ಪುದೀನ ಎಲೆಗಳನ್ನು ಅಗಿದು ತಿನ್ನಬೇಕು. ಇದರಿಂದ ವಸಡು ಮತ್ತು ಹಲ್ಲುಗಳು ದೃಢವಾಗುತ್ತವೆ. ಪುದೀನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹಚ್ಚಿ ಅದಕ್ಕೆ ಈರುಳ್ಳಿ, ಸೌತೇಕಾಯಿ, ಟೊಮ್ಯಾಟೊ, ಕಾಳು ಮೆಣಸಿನ ಪುಡಿ, ಉಪ್ಪು ಮತ್ತು ನಿಂಬೆರಸವನ್ನು ಕೂಡಿಸಿ ತಿಂದರೆ ಆರೋಗ್ಯವೃದ್ಧಿಯಾಗುತ್ತದೆ.
ದಂಟಿನ ಸೊಪ್ಪು:
ದಂಟಿನ ಸೊಪ್ಪು ನಿಯಮಿತವಾಗಿ ಸೇವಿಸಿದರೆ ದೃಷ್ಟಿದೋಷ ಪರಿಹಾರವಾಗುತ್ತದೆ, ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ. ಮುಟ್ಟಿನ ಅವಧಿಯಲ್ಲಿ ಅಧಿಕ ರಕ್ತಸ್ರಾವವನ್ನು ತಡೆಗಟ್ಟುತ್ತದೆ . ದಂಟಿನ ಸೊಪ್ಪಿನ ಪಲ್ಯ ಸೇವಿಸಿದರೆ ಉಷ್ಣ ಕಡಿಮೆಯಾಗಿ ಜೀರ್ಣಶಕ್ತಿ ವೃದ್ಧಿಯಾಗುತ್ತದೆ ಹಾಗೂ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ.
ಕೊತ್ತಂಬರಿ ಸೊಪ್ಪು:
ಕೊತ್ತಂಬರಿ ಬೀಜ ಮತ್ತು ಒಣ ಶುಂಠಿಯ ಕಷಾಯ ತಯಾರಿಸಿ ಸೇವಿಸಿದರೆ ಹೊಟ್ಟೆ ನೋವು ಗುಣವಾಗುವುದು. ಒಂದು ಬಟ್ಟಲು ಎಳನೀರಿಗೆ ಸ್ವಲ್ಪ ಬೆಲ್ಲ ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವದರಿಂದ ಉರಿ ಮೂತ್ರ ನಿವಾರಣೆಯಾಗುವುದು, ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರಮಾಡಿ ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ನಿವಾರಣೆಯಾಗುತ್ತವೆ.
ನಿಮ್ಮ ಸ್ಕಿನ್ ವೈಟ್ ಅಂಡ್ ಗ್ಲೋ ಆಗಲು ಅದ್ಬುತವಾದ ಸೌಂದರ್ಯ ಚಿಕಿತ್ಸೆ…!
ನಿಮಗೆ ಅತಿಯಾಗಿ ಕೂದಲು ಉದುರುತ್ತಿದೆಯಾ..? ಹಾಗಾದರೆ ಈ ಮನೆ ಮದ್ದನು ಅನುಸರಿಸಿ…!
ಯೌವನಯುತವಾದ ಚರ್ಮವನ್ನು ಪಡೆಯಬೇಕಾದರೆ ಈ ಫೇಸ್ ಪ್ಯಾಕ್ ಅನ್ನು ಬಳಸಿ…!