Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹನುಮ ದೇವರ ಬಗ್ಗೆ, ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿದ್ದಾರೆ.
ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿರುವ ಭರತ್, ತಾವು ಬೆಳಿಗ್ಗೆ 5 ಗಂಟೆಗೆ ಎದ್ದು, ರನ್ ಮಾಡಿ, ವ್ಯಾಯಾಮವೆಲ್ಲ ಮಾಡಿ, 8 ಗಂಟೆಗೆ ಸ್ನಾನಾದಿಗಳನ್ನು ಮುಗಿಸಿ, ಹನುಮಾನ್ ಚಾಲೀಸಾ ಹೇಳಲು ಶುರು ಮಾಡುತ್ತಾರಂತೆ. ಪ್ರತಿದಿನ 3 ಬಾರಿ ಹನುಮಾನ್ ಚಾಲೀಸಾ ಹೇಳುತ್ತಾರಂತೆ.
ಭರತ್ ಅವರು 21 ದಿನಗಳ ಕಾಲ ನೀವು ಭಕ್ತಿಯಿಂದ ಹನುಮಾನ್ ಚಾಲೀಸಾ ಹೇಳಿ ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆಯಾಗಲು ಶುರುವಾಗುತ್ತದೆ ಎಂದು ವೀಡಿಯೋ ಮಾಡಿದ್ದರು. ಈ ಮ್ಯಾನಿಫೆಸ್ಟೇಷನ್ ನಿಯಮಗಳನ್ನು ಫಾಲೋ ಮಾಡಿದ್ದ ಕೆಲವರು, ಭರತ್ ಅವರ ಬಳಿ ಹೇಳಿದ್ದರಂತೆ. ನಿಮ್ಮ ವೀಡಿಯೋ ನೋಡಿ, ಮ್ಯಾನಿಫೆಸ್ಟ್ ಮಾಡಿದ ಮೇಲೆ ನನ್ನ ಜೀವನವೇ ಬದಲಾಯಿತು ಅಂತಾರೆ. ಅಷ್ಟು ಪವರ್‌ಫುಲ್ ಅಂತೆ ಹನುಮಾನ್ ಚಾಲೀಸಾ.
ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು, ನಿಮ್ಮ ಕೆಲಸ ಮುಗಿಸಿ, ಸ್ನಾನಾದಿಗಳನ್ನು ಮುಗಿಸಿ, ಆಂಜನೇಯನ ಫೋಟೋ ಅಥವೋ ಮೂರ್ತಿ ಮುಂದೆ ಕುಳಿತು ಭಕ್ತಿಯಿಂದ 3 ಸಲ ಹನುಮಾನ್ ಚಾಲೀಸಾ ಹೇಳಬೇಕು. ಹೀಗೆ ಹೇಳುವಾಗ, ಗಾಜಿನ ಗ್ಲಾಸ್‌ನಲ್ಲಿ ನೀರನ್ನಿರಿಸಿ. ಬಳಿಕ ಹನುಮಾನ್ ಚಾಲೀಸಾ ಹೇಳಿ. ಬಳಿಕ ನಿಮ್ಮ ಕೋರಿಕೆಯನ್ನು ದೇವರ ಮುಂದೆ ಹೇಳಬೇಕು. ನಂತರ ನೀರನ್ನು ಕುಡಿಯಬೇಕು.
21 ದಿನಗಳ ಕಾಲ ಹೀಗೆ ಮಾಡಿದರೆ, ಬಳಿಕ ನಿಮ್ಮ ಕೋರಿಕೆ ಖಂಡಿತ ಈಡೇರುತ್ತದೆ. ಹನುಮಂತ ನಿಮ್ಮ ಜತೆ ಇದ್ದು, ನಿಮ್ಮ ಆಸೆ ಆಕಾಂಕ್ಷೆಯನ್ನು ಈಡೇರಿಸಿ, ನಿಮ್ಮನ್ನು ಧೈರ್ಯವಂತ, ಆರೋಗ್ಯವಂತ, ಹಣವಂತನನ್ನಾಗಿ ಮಾಡುತ್ತಾನೆ. ನಾನು 2 ವರ್ಷದಿಂದ ಈ ಕೆಲಸ ಪ್ರತಿದಿನ ಮಾಡುತ್ತೇನೆ. 2 ವರ್ಷದಲ್ಲಿ ಸಾಕಷ್ಟು ಅತ್ಯುತ್ತಮ ಬದಲಾವಣೆ ನನ್ನಲ್ಲಿ ಕಾಣಿಸಿದೆ ಅಂತಾರೆ ಭರತ್. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




