Tuesday, April 15, 2025

Latest Posts

ಶುಕ್ರವಾರದಂದು ಹೀಗೆ ಪೂಜೆ ಮಾಡಿದರೆ ಲಕ್ಷ್ಮಿದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ…!

- Advertisement -

Devotional:

ಹಿಂದೂ ಸಂಪ್ರದಾಯಗಳ ಪ್ರಕಾರ, ವಾರದ ಏಳು ದಿನಗಳು ವಿಶೇಷತೆಯನ್ನು ಹೊಂದಿವೆ. ಆದರೆ ಶುಕ್ರವಾರ ಎಲ್ಲಾ ವಾರಗಳಿಗಿಂತ ಹೆಚ್ಚು ಮುಖ್ಯವಾಗಿದೆ. ಏಕೆಂದರೆ ಇಂದು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಅದಕ್ಕಾಗಿಯೇ ಅನೇಕ ಜನರು ಈ ಮಂಗಳಕರ ದಿನದಂದು ದೇವಿಯನ್ನು ಮೆಚ್ಚಿಸಲು ಉಪವಾಸವನ್ನು ಆಚರಿಸುತ್ತಾರೆ ಇನ್ನು ಕೆಲವರು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಲಕ್ಷ್ಮಿದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಹಿನ್ನಲೆಯಲ್ಲಿ ಲಕ್ಷ್ಮಿದೇವಿಯ ಕೃಪೆಗೆ ಪಾತ್ರರಾಗಲು, ನಿಮ್ಮ ಮನೆಯಲ್ಲಿ ಲಕ್ಷ್ಮಿಸದಾ ನೆಲೆಸಲು ಯಾವ ರೀತಿಯ ಪೂಜೆಯನ್ನು ಮಾಡಬೇಕು. ಅನುಸರಿಸಬೇಕಾದ ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ.

ಅಷ್ಟಲಕ್ಷ್ಮಿ ಪೂಜೆ:
ಲಕ್ಷ್ಮಿದೇವಿಗೆ ಎಂಟು ರೂಪಗಳಿವೆ. ಆದಿಲಕ್ಷ್ಮಿ, ವಿದ್ಯಾಲಕ್ಷ್ಮಿ, ಧಾನ್ಯಲಕ್ಷ್ಮಿ, ವಿಜಯ ಅಥವಾ ವರಲಕ್ಷ್ಮಿ, ಗಜಲಕ್ಷ್ಮಿ, ಧೈರ್ಯಲಕ್ಷ್ಮಿ, ಐಶ್ವರ್ಯಲಕ್ಷ್ಮಿ, ಸಂತಾನಲಕ್ಷ್ಮಿ. ಹೀಗಾಗಿ ಶುಕ್ರವಾರದಂದು ಲಕ್ಷ್ಮಿದೇವಿಯ ಮಂತ್ರಗಳನ್ನು ಪಠಿಸಿ ಎಂಟು ರೂಪಗಳಲ್ಲಿ ಲಕ್ಷ್ಮಿಯನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಹಣದ ಸಮಸ್ಯೆ ದೂರವಾಗುತ್ತದೆ, ಬುದ್ದಿವಂತಿಕೆ ಹೆಚ್ಚುತ್ತದೆ ಮತ್ತು ನಿಮ್ಮ ಸಂಸಾರದಲ್ಲಿ ಸುಖ ಸಂತೋಷವಾಗುತ್ತದೆ ಎನ್ನುತ್ತಾರೆ ವಿದ್ವಾಂಸರು. ಮಕ್ಕಳಿಲ್ಲದವರು ಶೀಘ್ರದಲ್ಲೇ ಒಳ್ಳೆಯ ಸುದ್ದಿ ಕೇಳುತ್ತಾರೆ.

ಪೂಜಾ ವಿಧಾನ:
ಹಿಂದೂ ಪುರಾಣಗಳ ಪ್ರಕಾರ, ಲಕ್ಷ್ಮಿದೇವಿಯನ್ನು ಪೂಜಿಸಲು ರಾತ್ರಿವೇಳೆ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಶುಕ್ರವಾರ ರಾತ್ರಿ 9 ರಿಂದ 10 ಗಂಟೆಯೊಳಗೆ ಲಕ್ಷ್ಮಿದೇವಿಯನ್ನು ಪೂಜಿಸಿ. ಈ ಮಂಗಳಕರ ದಿನದಂದು ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು ಮತ್ತು ಕೆಂಪು ಬಟ್ಟೆಯ ಮೇಲೆ ದೇವಿಯ ಚಿತ್ರ ಅಥವಾ ವಿಗ್ರಹವನ್ನು ಇಡಬೇಕು. ಅದೇ ವಿಧವಾಗಿ ಶ್ರೀ ಯಂತ್ರವನ್ನು ಇಡಬೇಕು. ಮೊದಲು ತುಪ್ಪದ ದೀಪ ಹಚ್ಚಿ. ಅಷ್ಟ ಗಂಧವನ್ನು ಶ್ರೀಯಂತ್ರ ಮತ್ತು ಲಕ್ಷ್ಮಿದೇವಿಗೆ ತಿಲಕವಾಗಿ ಇಡಬೇಕು .

ನಿಮ್ಮ ಮನೆಯ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನು ಬೆಳಗಿಸಿ, ಓಂ ಐಂ ಹ್ರೀಂ ಶ್ರೀ ಅಷ್ಟ ಲಕ್ಷ್ಮೀಯೈ ಹ್ರೀಂ ಸಿದ್ಧಯೇ ಮಾಂ ಗೃಹೇ ಅಚ್ಛಗಚ ನಮಃ ಸ್ವಾಹಾ ಎಂಬ ಮಂತ್ರವನ್ನು ಅಷ್ಟ ಲಕ್ಷಗಳಿಗೆ ಸಂಬಂಧಿಸಿದ ಮಂತ್ರಗಳೊಂದಿಗೆ ಪಠಿಸಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದ ಪ್ರತಿಯೊಂದು ಸಮಸ್ಯೆಯೂ ಖಂಡಿತ ಪರಿಹಾರವಾಗುತ್ತದೆ ಎನ್ನುತ್ತಾರೆ ಪಂಡಿತರು.

ಕರ್ನಾಟಕದ ಆ ಗುಡಿಯಲ್ಲಿ ಚಪ್ಪಲಿಯ ದಂಡನ್ನು ಸಮರ್ಪಿಸುತ್ತಾರೆ.. ಈ ಸಂಪ್ರದಾಯದ ಹಿಂದೆ ಇರುವ ಕಾರಣಗಳೇನು ಗೊತ್ತಾ..?

ಸಂಕಷ್ಟ ಚತುರ್ಥಿ ದಿನ ಗಣೇಶನ ಅನುಗ್ರಹಕ್ಕಾಗಿ ಹೀಗೆ ಮಾಡಿ..!

ನವೆಂಬರ್ 24ರಂದು ಗುರುವಿನ ನೇರ ನಡೆಯಿಂದ ಈ 3ರಾಶಿಯವರಿಗೆ ಭಾರೀ ಅದೃಷ್ಟ..!

 

- Advertisement -

Latest Posts

Don't Miss