Beauty:
ಸಾಮಾನ್ಯವಾಗಿ ಎಲ್ಲರು ಅಂದವನ್ನು ಹೆಚ್ಚಿಸಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಯಾವುದೋ ಫೇಸ್ ಪ್ಯಾಕ್, ಕ್ರೀಮು ಗಳನ್ನೂ ಹಚ್ಚಿ ಅಂದವಾಗಿ ಕಾಣಲು ಶ್ರಮಿಸುತ್ತಾರೆ. ಆದರೆ.. ಆಹಾರದೊಂದಿಗೆ ಆರೋಗ್ಯ ಮಾತ್ರವಲ್ಲ ಅಂದವನ್ನು ಸಹ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಆಹಾರದಿಂದ ದೊರೆಯುವ ಪೋಷಕಾಂಶಗಳು ಚರ್ಮವನ್ನು ಪ್ರಕಾಶಮಾನವಾಗಿರುವಂತೆ ಮಾಡುತ್ತದೆ. ಅಂತಹ ಆಹಾರ ಪದಾರ್ಥಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
ಅವಕಾಡೊ..
ಈ ಅವಕಾಡೊಗಳಲ್ಲಿ ಆರೋಗ್ಯಕರ ಎಣ್ಣೆಗಳು, ವಿಟಮಿನ್‌ಗಳು ಎರಡೂ ಹೆಚ್ಚಾಗಿರುತ್ತದೆ. ಇವು ಚರ್ಮವನ್ನು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ .
ಕ್ಯಾರೆಟ್..
ಇದರಲ್ಲಿ ವಿಟಮಿನ್ ಸೀ ಹೆಚ್ಚಾಗಿ ಇರುತ್ತದೆ. ಇದು ಕೊಲ್ಲಾಜೆನ್ ಪ್ರೊಟೀನ್ ತಯಾರಿಕೆಗೆ ಉಪಯುಕ್ತವಾಗಿದೆ.. ಚರ್ಮವನ್ನು ದೃಢವಾಗಿ, ಮೃದುವಾಗಿರಲು ಪರಿವರ್ತಿಸುತ್ತದೆ.
ಸೊಪ್ಪು..
ಕಾಂತಿಯುತ ಚರ್ಮವನ್ನು ಬಯಸಿದಲ್ಲಿ ಕಡ್ಡಾಯವಾಗಿ ಆಹಾರದಲ್ಲಿ ಸೊಪ್ಪನ್ನು ಇರಿಸಿಕೊಳ್ಳಲು ತಜ್ಞರು ಸೂಚಿಸುತ್ತಿದ್ದಾರೆ. ಇವುಗಳಲ್ಲಿ ಇರುವ ವಿಟಮಿನ್ ಎ, ಸಿ, ಆ್ಯಂಟಿ ಆಕ್ಸಿಡೆಂಟ್‌ಗಳು ಎಲ್ಲಾ ರೀತಿಯ ಸ್ಕಿನ್ ಇನ್‌ಫೆಕ್ಷನ್‌ಗಳನ್ನು ದೂರ ಮಾಡುತ್ತದೆ. ಪ್ರತಿಯಾಗಿ ಐರನ್ ರಕ್ತ ಹೀನತನವನ್ನು ತಡೆಯುತ್ತದೆ..
ಗೆಣಸು..
ಮೊಡವೆ, ಬೊಕ್ಕೆ ಇತ್ಯಾದಿ ಸಮಸ್ಯೆಗಳು ಚರ್ಮದಲ್ಲಿ ಕಂಡುಬರುವುದು. ಗೆಣಸನ್ನು ರೋಸ್ಟ್ ಮಾಡಿಕೊಂಡು ಸೇವನೆ ಮಾಡಿದರೆ ಅದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಆಂಟಿಆಕ್ಸಿಡೆಂಟ್ ಮತ್ತು ನಾರಿನಾಂಶವು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸಿಗುವುದು.
ಗ್ರೀನ್ ಟೀ..
ಗ್ರೀನ್ ಟೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ತ್ವಚೆಯನ್ನು ಹಗುರಗೊಳಿಸುತ್ತದೆ. ಇದಲ್ಲದೆ, ಸುಕ್ಕುಗಳನ್ನು ಸಹ ತೆಗೆದುಹಾಕಲಾಗುತ್ತದೆ.
ಟೊಮೆಟೊ..
ಯುವಿ ಕಿರಣಗಳಿಂದಾಗಿ ಚರ್ಮಕ್ಕೆ ಆಗುವಂತಹ ಹಾನಿಯನ್ನು ಟೊಮೆಟೊವು ತಪ್ಪಿಸುವುದು. ಅಕಾಲಿಕ ವಯಸ್ಸಾಗುವುದು ಮತ್ತು ಚರ್ಮದ ಕ್ಯಾನ್ಸರ್ ಸಮಸ್ಯೆಯನ್ನು ಇದು ದೂರ ಮಾಡುವುದು.
ಬಾದಾಮಿ..
ಬಾದಾಮಿಯನ್ನು ಮುಖದ ಚರ್ಮದ ಆರೈಕೆಗೆ ಬಳಸುವ ಮೂಲಕ ವೃದ್ಧಾಪ್ಯದ ಚಿಹ್ನೆಯನ್ನು ನಿಧಾನಗೊಳಿಸಲು ಹಾಗೂ ಮೃದುವಾದ ಮತ್ತು ಕಲೆರಹಿತವಾದ ತ್ವಚೆಯನ್ನು ಹೊಂದಲು ಸಾಧ್ಯವಾಗುತ್ತದೆ
ಡಾರ್ಕ್ ಚಾಕಲೇಟ್..
ಚಾಕಲೇಟ್ ತಿಂದರೆ ದಪ್ಪ ಆಗುತ್ತಾರೆ ಎಂಬ ಒಂದು ನಂಬಿಕೆ ಎಲ್ಲರಲ್ಲೂ ಇದೆ. ಇದು ಕೇವಲ ವಿಪರೀತ ಪ್ರಮಾಣದಲ್ಲಿ ಮಾತ್ರ ಸಾಧ್ಯವಾಗುತ್ತದೆ. ನಿಯಂತ್ರಿತ ಪ್ರಮಾಣದಲ್ಲಿ ಡಾರ್ಕ್ ಚಾಕಲೇಟ್ ಸೇವನೆ ಮಾಡಿದರೆ ನಿಮ್ಮ ಹೃದಯಕ್ಕೆ ಮತ್ತು ನಿಮ್ಮ ಚರ್ಮಕ್ಕೆ ಅಗಾಧವಾದ ಆರೋಗ್ಯ ಲಾಭಗಳು ಸಿಗುತ್ತವೆ.
ವಾಲ್ನಟ್ ಗಳು..
ವಾಲ್ನಟ್ ಗಳು ನಿಮ್ಮ ದೇಹದ ಸುಂದರವಾದ ಚರ್ಮಕ್ಕೆ ಚಮತ್ಕಾರವನ್ನೇ ಉಂಟು ಮಾಡುತ್ತವೆ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಆರೋಗ್ಯಕರವಾದ ಕೊಬ್ಬಿನ ಅಂಶಗಳು, ಜಿಂಕ್ ಅಂಶಗಳು,ವಿಟಮಿನ್’ಇ’ ಸೆಲಿನಿಯಂ ಮತ್ತು ಪ್ರೋಟೀನ್ ಅಂಶಗಳು ಯಥೇಚ್ಛವಾಗಿರುವ ಕಾರಣ ನಿಮ್ಮ ಆಹಾರ ಪದ್ದತಿಯಲ್ಲಿ ಇದೊಂದು ಆರೋಗ್ಯಕರವಾದ ಆಹಾರ ಎಂದು ಹೇಳಬಹುದು.
ಸಿಟ್ರಸ್ ಹಣ್ಣುಗಳು, ಸೌತೆಕಾಯಿ ಅಥವಾ ಬೆರ್ರಿಗಳನ್ನು ಹಾಕಿಕೊಂಡು ನೀರನ್ನು ರುಚಿಕರವಾಗಿ ಮಾಡಬಹುದು ಮತ್ತು ಇದರಿಂದ ದೇಹಕ್ಕೆ ಬೇಕಾಗಿರುವಂತಹ ಆಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಸಿಗುವುದು. ಚರ್ಮದಲ್ಲಿ ಶೇ.30ರಷ್ಟು ನೀರಿನಾಂಶವು ಇರುವ ಕಾರಣದಿಂದ ಸರಿಯಾದ ರೀತಿಯಲ್ಲಿ ನೀರು ಕುಡಿಯಬೇಕು. ಪ್ರತಿನಿತ್ಯವೂ 8-10 ಲೋಟ ನೀರು ಕುಡಿದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುವರು.
ಮಾನ್ಸೂನ್ ಸಮಯದಲ್ಲಿ ನಿಮ್ಮ ಪಾದಗಳನ್ನು ಫಂಗಲ್ ಸೋಂಕಿನಿಂದ ರಕ್ಷಿಸಿ..!
ಆರೋಗ್ಯಕರವಾಗಿರುವ ಆರು ಮುಖ್ಯ ಗುಣಲಕ್ಷಣಗಳು ನಿಮಗೆ ಇದೆಯೇ ಎಂದು ಚೆಕ್ ಮಾಡಿ..!!