Tech News: ಇದೀಗ ಹಬ್ಬಗಳೆಲ್ಲ ಶುರುವಾಗಿದೆ. ಹಬ್ಬಕ್ಕೆ ಮನೆಯಲ್ಲಿರುವ ಸಹೋದರಿ, ಪತ್ನಿ, ಮಗಳಿಗೆ ಏನಾದರೂ ಗಿಫ್ಟ್ ನೀಡಬೇಕು ಅಂತಾ ನಿಮಗೆ ಅನ್ನಿಸಬಹುದು. ಯಾವಾಗ ನೋಡಿದರೂ ಬಟ್ಟೆ, ಚಪ್ಪಲಿ ಗಿಫ್ಟ್ ಮಾಡಿದ್ರೆ, ಅದು ತುಂಬಾ ಬೋರಿಂಗ್ ಆಗಿರತ್ತೆ. ಹಾಗಾಗಿಯೇ ನಾವಿಂದು ಯಾವ ರೀತಿಯ ಗಿಫ್ಟ್ ನೀಡಬಹುದು ಎಂಬ ಬಗ್ಗೆ ಐಡಿಯಾ ನೀಡಲಿದ್ದೇವೆ.
ಟೂ ಇನ್ 1 ಸ್ಕಾಲ್ಫ್ ಮಸಾಜರ್: ಈ ಮಸಾಜರ್‌ನಲ್ಲಿ ಎಣ್ಣೆ ಹಾಕಿ, ತಲೆಗೆ ಮಸಾಜ್ ಮಾಡಿದರೆ, ತಲೆನೋವು ಹೋಗುತ್ತದೆ. ಸೂಪರ್ ಮಸಾಜ್ ಕೂಡ ಆಗುತ್ತದೆ.
ಕ್ರ್ಯಾಂಪ್ ಮಸಾಜರ್: ಹೆಣ್ಣು ಮಕ್ಕಳಿಗೆ ತಿಂಗಳ ಸಮಸ್ಯೆ ಕಾಡೋದು ಸಹಜ. ಆದರೆ ನೀವು ಕ್ರ್ಯಾಂಪ್ ಮಸಾಜರ್ ನೀಡಿದರೆ, ಆ ನೋವಿಗೆ ಪರಿಹಾರ ಸಿಕ್ಕಂತೆ. ಈ ಮಸಾಜರ್‌ನ್ನು ಹೊಟ್ಟೆಗೆ ಕಟ್ಟಿದ್ರೆ ಅದು ಹಾಟ್ ಬ್ಯಾಗ್ ರೀತಿ ಕೆಲಸ ಮಾಡುತ್ತದೆ. ನೀವು ಬಟನ್ ಮೂಲಕ, ತಾಪಮಾನವನ್ನು ಹೆಚ್ಚು- ಕಡಿಮೆ ಮಾಡಿಕ“ಳ್ಳಬಹುದು.
ಐಫೋನ್ ಕೀ ಬಂಚ್: ನಿಮ್ಮ ಸಹೋದರಿಯ ಬಳಿ ಐಫೋನ್ ಇದ್ದರೆ, ನೀವು ಈ ಐಫೋನ್ ಕೀ ಬಂಚ್ ಗಿಫ್ಟ್ ಮಾಡಬಹುದು. ಈ ಕೀ ಬಂಚ್‌ನ ಸ್ಮಾರ್ಟ್ ಬಟನ್ ಆನ್ ಮಾಡಿ, ಬ್ಯಾಗ್‌ನಲ್ಲಿ ಹಾಕಿದ್ರೆ ಆಯ್ತು. ನಿಮ್ಮ ಬ್ಯಾಗ್ ಕಳೆದು ಹೋದ್ರೆ, ನೀವು ನಿಮ್ಮ Mobile ಆನ್ ಮಾಡಿ, ನಿಮ್ಮ ಬ್ಯಾಗ್ ಎಲ್ಲಿದೆ, ಯಾವ ಲೋಕೇಷನ್‌ನಲ್ಲಿ ಇದೆ ಅಂತಾ ಚೆಕ್ ಮಾಡಬಹುದು.
ಸ್ಮಾರ್ಟ್ ಮೇಕಪ್ ಕಿಟ್: ಈ ಕಿಟ್‌ನಲ್ಲಿ ಎಲ್ಲ ಮೇಕಪ್ ವಸ್ತುಗಳನ್ನು ಇರಿಸಬಹುದು. ಕನ್ನಡಿ ಇರುವುದರಿಂದ ಇದರ ಮುಂದೆ ನೀವು ಮೇಕಪ್ ಮಾಡಬಹುದು. ಜತೆಗೆ ಇದರಲ್ಲಿ ಎಲ್‌ಇಡಿ ಲೈಟ್ ಇದೆ. ಸೆಕೆಯಾದ್ರೆ ಮುಖಕ್ಕೆ ಫ್ಯಾನ್ ಕೂಡ ಬಳಸಬಹುದು.