ಚಿಕ್ಕ ಮಕ್ಕಳಿದ್ದವರು ಮನೆಯಲ್ಲಿ ಈ ಪದ್ಧತಿಯನ್ನ ಖಂಡಿತ ಅನುಸರಿಸಿ..

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿವೆ. ನಂಬಿಕೆಗಳಿವೆ. ಅದನ್ನ ಕೆಲವರು ಇಂದಿಗೂ ಅನುಸರಿಸಿಕೊಂಡು ಬರುತ್ತಿದ್ದಾರೆ. ಹಾಗಾದ್ರೆ ನಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ರೆ ನಾವು ಯಾವ ಪದ್ಧತಿಯನ್ನು ಅನುಸರಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮೊದಲನೇಯದಾಗಿ ಮಕ್ಕಳು ಹುಟ್ಟ ಮುನ್ನ ಅದಕ್ಕಾಗಿ ನಾವು ಯಾವ ವಸ್ತುಗಳನ್ನ ಕೂಡ ಖರೀದಿಸಬಾರದು. ಬಟ್ಟೆಗಳನ್ನು ಕೂಡ ಖರೀದಿಸಬಾರದು ಅಂತಾ ಹಿರಿಯರು ಹೇಳುತ್ತಾರೆ. ಯಾಕಂದ್ರೆ ನಾವು ವಸ್ತುಗಳನ್ನ ಖರೀದಿಸಿದರೆ, ಹೆರಿಗೆ ಸಮಯದಲ್ಲಿ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಗು ಹುಟ್ಟುವ ಮುನ್ನ ಅದಕ್ಕಾಗಿ ಯಾವುದೇ ವಸ್ತು ಖರೀದಿಸಬಾರದು ಅಂತಾ ಹೇಳಲಾಗುತ್ತದೆ.

ಎರಡನೇಯದಾಗಿ ಮಕ್ಕಳಿಗೆ ಒಂದು ವರ್ಷ ತುಂಬುವ ಮುನ್ನ  ಕನ್ನಡಿ ತೋರಿಸಬಾರದು. ಯಾಕಂದ್ರೆ ಮಕ್ಕಳು ಒಂದು ವರ್ಷ ತುಂಬುವ ಮುನ್ನ ಕನ್ನಡಿ ನೋಡಿದರೆ, ಅವರ ಆರೋಗ್ಯ ಕ್ಷಿಣಿಸುತ್ತದೆ. ಅವರ ಶಕ್ತಿ ಕಡಿಮೆಯಾಗುತ್ತದೆ ಮತ್ತು ಅವರು ಅಶಕ್ತರಾಗುತ್ತಾರೆ ಅಂತಾ ಹೇಳಲಾಗಿದೆ. ಇದಲ್ಲದೇ ಮಕ್ಕಳಿಗೆ ಕಾಡಿಗೆ ಹಚ್ಚದೇ, ಹೊರಗೊಯ್ಯಬಾರದು. ಕಾಡಿಗೆ ಅಂದ್ರೆ ದೃಷ್ಟಿ ಬೊಟ್ಟು. ಕಾಡಿಗೆ ಹಚ್ಚುವುದರಿಂದ ಮಕ್ಕಳಿಗೆ ದೃಷ್ಟಿ ಬೀಳುವುದಿಲ್ಲ. ದೃಷ್ಟಿ ಬೀಳದಿದ್ದರೆ, ಮಕ್ಕಳ ಬೆಳವಣಿಗೆ ಉತ್ತಮವಾಗಿರುತ್ತದೆ. ಮತ್ತು ಆರೋಗ್ಯವಂತರಾಗಿರುತ್ತಾರೆ.

ಇನ್ನು ಕೆಲ ಹಿರಿಯರ ಪ್ರಕಾರ ಮಕ್ಕಳಿಗೆ ಯಾವಾಗಲೂ ಅಂದವಾದ ಬಟ್ಟೆ ಹಾಕಬಾರದಂತೆ. ಪ್ರತಿದಿನ ಶೃಂಗಾರ ಮಾಡಬಾರದಂತೆ. ಕೆಲ ತಾಯಂದಿರಿಗೆ ತನ್ನ ಮಗು ಯಾವಾಗಲೂ ಚಂದ ಕಾಣಲಿ ಎಂಬ ಆಸೆ ಇರುತ್ತದೆ. ಅದಕ್ಕಾಗಿ ಮಗುವಿಗೆ ಚಂದ ಚಂದದ ಬಟ್ಟೆ ಹಾಕಿ, ಪೌಡರ್ ಹಾಕಿ ಆಡಲು ಕಳುಹಿಸುತ್ತಾರೆ. ಆದ್ರೆ ಮಕ್ಕಳಿಗೆ ಪ್ರತಿದಿನ ಚೆಂದದ ಬಟ್ಟೆ ಹಾಕುವುದರಿಂದ ದೃಷ್ಟಿ ತಗುಲುತ್ತದೆ ಅಂತಾ ಹೇಳಲಾಗಿದೆ. ಆದ್ದರಿಂದ ಮಕ್ಕಳಿಗೆ ಸಿಂಪಲ್ ಆದ ಬಟ್ಟೆ ಹಾಕಬೇಕು. ಮತ್ತು ತಪ್ಪದೇ ಕಾಡಿಗೆ ಹಚ್ಚಬೇಕು. ಇನ್ನು ಮಕ್ಕಳಿಗೆ ತಿಂಗಳಿಗೆ ಒಮ್ಮೆಯಾದರೂ ದೃಷ್ಟಿ ತೆಗೆಯಬೇಕು. ವೃದ್ಧರಿಗೆ ದೃಷ್ಟಿ ತೆಗೆಯುವುದು ಹೇಗಂತ ಉತ್ತಮವಾಗಿ ಗೊತ್ತಿರುತ್ತದೆ. ಅಂಥವರ ಬಳಿ ದೃಷ್ಟಿ ತೆಗೆಸಿದರೆ, ನಿಮ್ಮ  ಮಗು ಆರೋಗ್ಯವಾಗಿರುತ್ತದೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author