Friday, November 22, 2024

Latest Posts

ಆಹಾರ ಸೇವನೆ ಮಾಡುವಾಗ ಈ ಮಾತುಗಳನ್ನು ನೆನಪಿನಲ್ಲಿರಿಸಿಕೊಂಡರೆ, ಉದ್ಧಾರವಾಗುತ್ತೀರಿ

- Advertisement -

Spiritual: ಆಹಾರ ಸೇವನೆ ಮಾಡುವುದು ನಮ್ಮೆಲ್ಲರ ಜೀವನದ ಮುಖ್ಯವಾದ ಮತ್ತು ಅವಶ್ಯಕವಾದ ಭಾಗವಾಗಿದೆ. ಅದಕ್ಕಾಗಿಯೇ ಮನುಷ್ಯ ದುಡಿಯುತ್ತಾನೆ. ಆದರೆ ನಾವು ಆಹಾರ ಸೇವಿಸುವಾಗ ಸರಿಯಾದ ಕ್ರಮವನ್ನು ಅನುಸರಿಸಿದರೆ, ಅನ್ನಪೂರ್ಣೇಶ್ವರಿಯ ಕೃಪೆ ನಮ್ಮ ಮೇಲಿರುತ್ತದೆ. ಇಲ್ಲದಿದ್ದಲ್ಲಿ, ನಾವು ಹೊಟ್ಟೆತುಂಬ, ನಮಗಿಷ್ಟವಾದ ಊಟ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ನಾವಿಂದು, ಆಹಾರ ಸೇವನೆ ಮಾಡುವಾಗ ಯಾವ ತಪ್ಪನ್ನು ಮಾಡಬಾರದು. ಯಾವ ನಿಯಮ ಅನುಸರಿಸಬೇಕು ಅಂತಾ ಹೇಳಲಿದ್ದೇವೆ.

ಮೊದಲನೇಯದಾಗಿ ನೆಲದ ಮೇಲೆ ಕುಳಿತು ಊಟ ಮಾಡಿ. ಯಾವುದೇ ಕಾರಣಕ್ಕೂ ಬೆಡ್ ಮೇಲೆ ಸೋಫಾದ ಮೇಲೆ ಕುಳಿತು ಊಟ ಮಾಡಬೇಡಿ. ಇಂದಿನ ಕಾಲದಲ್ಲಿ ಡೈನಿಂಗ್ ಟೇಬಲ್ ಒಂದು ಶೋಕಿಯಾಗಿದೆ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲದೇ, ಅದು ನಮ್ಮ ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತದೆ.

ಎರಡನೇಯದಾಗಿ ಮುರಿದ ಬಟ್ಟಲಿನಲ್ಲಿ ಊಟ ಸೇವಿಸಬಾರದು. ನೀವು ಆಹಾರ ಸೇವಿಸುವ ಪ್ಲೇಟ್ ಸರಿಯಾಗಿ ಇರಬೇಕು. ಒಡೆದಿರಬಾರದು. ಏಕೆಂದರೆ, ಒಡೆದ ಲೋಟ, ಪ್ಲೇಟ್‌ನಲ್ಲಿ ಆಹಾರ ಸೇವನೆ ಮಾಡಿದರೆ, ಆ ಮನೆಯಲ್ಲಿ ಸದಾ ದರಿದ್ರವೇ ಆಗುತ್ತದೆ. ನೆಮ್ಮದಿ ಹಾಳಾಗುತ್ತದೆ. ಆರ್ಥಿಕ ಸಮಸ್ಯೆ ಉದ್ಭವಿಸುತ್ತದೆ.

ಮೂರನೇಯದಾಗಿ ನೆಲಕ್ಕೆ ಬಿದ್ದ ಆಹಾರ ಸೇವನೆ ಮಾಡಬೇಡಿ. ನೆಲಕ್ಕೆ ಬಿದ್ದ ಆಹಾರದಲ್ಲಿ ಕೂದಲು, ರೋಮ, ಧೂಳು ಎಲ್ಲವೂ ತಾಕುತ್ತದೆ. ಹಾಗಾಗಿಯೇ ನೆಲಕ್ಕೆ ಬಿದ್ದ ಆಹಾರವನ್ನು ಸೇವಿಸಬಾರದು. ಇದು ಆರೋಗ್ಯ ಚೆನ್ನಾಗಿರಲು ಹೇಳಲಾಗಿದೆ. ಇನ್ನು ಈ ಆಹಾರ ಸೇವಿಸಬಾರದು ಅನ್ನೋದಕ್ಕೆ ಇರುವ ಇನ್ನೊಂದು ಕಾರಣ ಅಂದ್ರೆ, ನೆಲದ ಮೇಲೆ ಬಿದ್ದಿರುವ ಆಹಾರ ಪ್ರೇತದ ಪಾಲಾಗುತ್ತದೆ ಅಂತಾ ಹೇಳಲಾಗುತ್ತದೆ. ಪ್ರೇತ ಬಾಧೆ ಇರುವವರು, ನೆಲಕ್ಕೆ ಬಿದ್ದ ಆಹಾರವನ್ನು ಹಾವಿನಂತೆ ಬಂದು ಬಾಚಿ ತಿನ್ನುತ್ತಾರೆ ಅಂತಾ ಹೇಳಲಾಗುತ್ತದೆ. ಹಾಗಾಗಿ ನೆಲಕ್ಕೆ ಬಿದ್ದ ಆಹಾರವನ್ನು ಸೇವಿಸಬಾರದು ಅಂತಾ ಹೇಳಲಾಗಿದೆ.

ನಾಲ್ಕನೇಯದಾಗಿ ಕೂದಲು ಬಿದ್ದಿರುವ ಆಹಾರವನ್ನು ಸೇವಿಸಬಾರದು. ಊಟ ಮಾಡುವಾಗ ಕೂದಲು ಸಿಕ್ಕರೆ ಅಂಥ ಆಹಾರವನ್ನು ಸೇವಿಸಬಾರದು ಅನ್ನೋ ನಿಯಮವಿದೆ.

ಐದನೇಯದಾಗಿ ಒಂದೇ ತಟ್ಟೆಯಲ್ಲಿ ಯಾರೂ ಊಟ ಮಾಡಬಾರದು. ಅದು ಪತಿ- ಪತ್ನಿಯೇ ಆಗಲಿ, ತಾಯಿ ಮಗುವೇ ಆಗಲಿ. ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ, ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಅಲ್ಲದೇ, ವೈಜ್ಞಾನಿಕವಾಗಿ ಇದನ್ನು ನೋಡಿದಾಗ, ಆರೋಗ್ಯದ ದೃಷ್ಟಿಯಿಂದಲೂ ಹೀಗೆ ಮಾಡಬಾರದು.

- Advertisement -

Latest Posts

Don't Miss