Health Tips: ಸಕ್ಕರೆ ಅನ್ನೋದು ನಮ್ಮ ಪ್ರತಿದಿನದಲ್ಲಿ ಇರಲೇಬೇಕಾದ ಆಹಾರ. ಸಕ್ಕರೆ ಇಲ್ಲದೇ ಕೆಲವರು ಚಹಾ, ಕಾಫಿ ಸೇವನೆ ಮಾಡೋದೇ ಇಲ್ಲ. ಇನ್ನು ಕೆಲವರಿಗೆ ತಿಂಡಿಯಲ್ಲಿ ಸ್ವಲ್ಪವಾದರೂ ಸಕ್ಕರೆ ಇರಲೇಬೇಕು. ಆದರೆ ನೀವು ದಿನಕ್ಕೆ 5ರಿಂದ 6 ಬಾರಿ ಚಹಾ ಸೇವನೆ ಮಾಡಿದ್ದಲ್ಲಿ, ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಸೇವಿಸಿದ್ದೀರಿ ಎಂದರ್ಥ. ಆದರೆ ನೀವು ಹೇಗಾದರೂ ಮಾಡಿ 21 ದಿನ ಸಕ್ಕರೆ ಸೇವನೆ ನಿಲ್ಲಿಸಿದರೆ ಏನಾಗತ್ತೆ..? ಆ ಬಗ್ಗೆ ತಿಳಿಯೋಣ ಬನ್ನಿ..
ಸಕ್ಕರೆ ಅತ್ಯಂತ ವಿಷಕಾರಿ ಅಂಶವಾಗಿದ್ದು, ಇದರಲ್ಲಿ ಯಾವುದೇ ಪೋಷಕಾಂಶ ಆಗಲಿ ಪ್ರೋಟೀನ್, ವಿಟಾಮಿನ್ ಏನೂ ಇರುವುದಿಲ್ಲ. ಹಾಗಾಗಿ ಇದರ ಸೇವೆಯಿಂದ ನಮ್ಮ ದೇಹಕ್ಕೇನೂ ಪ್ರಯೋಜನವಿಲ್ಲ. ಬರೀ ರುಚಿಗಷ್ಟೇ ನಾವು ಇದನ್ನು ಬಳಸಬೇಕು.
ನೀವು 21 ದಿನಗಳ ಕಾಲ ಸಕ್ಕರೆ ಸೇವನೆ ನಿಲ್ಲಿಸಿದರೆ, ನಿಮ್ಮ ದೇಹದ ಕೆಟ್ಟ ಅಂಶ, ತೂಕ, ರೋಗ ಎಲ್ಲವೂ ಕಂಟ್ರೋಲಿಗೆ ಬರುತ್ತದೆ. ಆದರೆ 21 ದಿನ ತಾಳ್ಮೆಯಿಂದ ನೀವು ಸಕ್ಕರೆ ಸೇವನೆ ನಿಲ್ಲಿಸುವುದು ಮಾತ್ರ ಮುಖ್ಯ. ನೀವು ಹೀಗೆ ಮಾಡಿದ್ದಲ್ಲಿ, ವ್ಯಾಯಾಮ ಮಾಡದಿದ್ದರೂ ಕೂಡ 1ರಿಂದ 2 ಕೆಜಿ ತೂಕ ಇಳಿಯುತ್ತದೆ.