Business News: ಐಕಿಯಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎರಡು ವರ್ಷಗಳ ಹಿಂದೆ ಐಕಿಯಾ ಬೆಂಗಳೂರಿಗೆ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಇದ್ದವರು, ಅಥವಾ ಬೆಂಗಳೂರು ಪ್ರವಾಸಕ್ಕೆ ಬಂದವರು, ಐಕಿಯಾ ನೋಡೇ ನೋಡಿರುತ್ತಾರೆ. ಐಕಿಯಾದಲ್ಲಿ ನಿಮಗೆ ತರಹೇವಾರಿ ಫರ್ನಿಚರ್, ಗೊಂಬೆಗಳು, ಹೀಗೆ ಮನೆಯನ್ನು ಶೃಂಗರಿಸಬಹುದಾದ ಹಲವು ವಸ್ತುಗಳು ಕಾಣ ಸಿಗುತ್ತದೆ.
ಆದರೆ ಆಶ್ಚರ್ಯಕರ ವಿಷಯ ಅಂದ್ರೆ, ಐಕಿಯಾ ಬರೀ ಫರ್ನಿಚರ್ ಉದ್ಯಮದಲ್ಲಿ ಅಷ್ಟೇ ಅಲ್ಲದೇ, ಫುಡ್ ಬ್ಯುಸಿನೆಸ್‌ನಲ್ಲೂ ಕೋಟ್ಯಂತರ ರೂಪಾಯಿ ಲಾಭ ಸಿಗುತ್ತದೆ. ನೀವೂ ಐಕಿಯಾಗೆ ಹೋದ್ರೆ, ಅಲ್ಲಿ ನಿಮಗೆ ರೆಸ್ಟೋರೆಂಟ್ ಕಾಣ ಸಿಗುತ್ತದೆ. ಯಾರಿಗಾದರೂ, ಐಕಿಯಾ ಸುತ್ತಿ ಹಸಿವಾಯಿತು ಅಂದ್ರೆ, ನೀವು ಅಲ್ಲಿ ಹೋಗಿ ತಿಂಡಿ ತಿನ್ನಬಹುದು.
ಮಾಲ್‌ನಲ್ಲಿ ಹೇಗೆ ರೆಸ್ಟೋರೆಂಟ್, ಬೇಕರಿ ಇರುತ್ತದೆಯೋ, ಅದೇ ರೀತಿ ಐಕಿಯಾದಲ್ಲಿ ಕೂಡ ರೆಸ್ಟೋರೆಂಟ್ ಇರುತ್ತದೆ. ಐಕಿಯಾದಲ್ಲಿ ಸುತ್ತಿದವರಿಗೆ ಖಂಡಿತವಾಗಿಯೂ ಬಾಯಾರಿಕೆ, ಹಸಿವು ಆಗೇ ಆಗುತ್ತದೆ. ಅಂಥವರಲ್ಲಿ ಕೆಲವರಾದರೂ ಆ ರೆಸ್ಟೋರೆಂಟ್‌ಗೆ ಬಂದು ಆಹಾರ ಸವಿಯುತ್ತಾರೆ. ಜ್ಯೂಸ್ ಕುಡಿಯುತ್ತಾರೆ. ಇಂಥ ಗ್ರಾಹಕರಿಂದಲೇ, ಐಕಿಯಾ ಕೋಟ್ಯಂತರ ರೂಪಾಯಿ ಲಾಭ ಮಾಡುತ್ತದೆ.
ಇಡೀ ಭಾರತದಲ್ಲಿ ಇರುವ ಐಕಿಯಾ ಕಂಪನಿಗಳಲ್ಲಿ ನಡೆಯುವ ಹೊಟೇಲ್ ಉದ್ಯಮದಿಂದಲೇ ಐಕಿಯಾಗೆ ತಿಂಗಳಿಗೇ ಉತ್ತಮ ಲಾಭ ಬರುತ್ತದೆ. ಇನ್ನು ಇಡೀ ಪ್ರಪಂಚದಲ್ಲೇ ಇರುವ ಐಕಿಯಾದಲ್ಲಿನ ರೆಸ್ಟೋರೆಂಟ್‌ನಿಂದ ಕೋಟ್ಯಂತರ ರೂಪಾಯಿ ಲಾಭ ಸಿಗುತ್ತದೆ. ಅಲ್ಲದೇ ವಿದೇಶದಲ್ಲಿ ಐಕಿಯಾ ತನ್ನ ಫುಡ್ ಬ್ರ್ಯಾಂಡ್ ಕೂಡ ಲಾಂಚ್ ಮಾಡಿದ್ದು, ಜ್ಯೂಸ್, ಫಾಸ್ಟ್ ಫುಡ್ ಸೆಲ್ ಮಾಡುತ್ತದೆ.
2019ರಲ್ಲಿ ಐಕಿಯಾ ಫರ್ನಿಚರ್ ಉದ್ಯಮ ಬಿಟ್ಟು, ಬರೀ ರೆಸ್ಟೋರೆಂಟ್ ಉದ್ಯಮದಿಂದಲೇ ಐಕಿಯಾ 18 ಸಾವಿರ ಕೋಟಿ ರೂಪಾಯಿ ಲಾಭ ಪಡೆದಿತ್ತು.