Wednesday, June 12, 2024

Latest Posts

‘ಮಂಜುಮ್ಮೆಲ್ ಬಾಯ್ಸ್‌’ ವಿರುದ್ಧ ಇಳಯರಾಜ ನೊಟೀಸ್: ಬಾತ್‌ರೂಮ್‌ನಲ್ಲಿ ಹಾಡಿದ್ರೂ ದುಡ್ಡು ಕೇಳಬಹುದು ಎಂದು ಟ್ರೋಲ್

- Advertisement -

Movie News: ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಕಣ್ಮಣಿ ಎಂಬ ಇಳಯರಾಜ ಅವರು ರಚಿಸಿದ ಹಾಡನ್ನ ಹಾಡಲಾಗಿದ್ದು, ಈ ಕಾರಣಕ್ಕೆ, ಇಳಯರಾಜ ಸಿನಿಮಾ ತಂಡದ ವಿರುದ್ಧ ನೊಟೀಸ್ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇಳಯರಾಜ, ಟೈಟಲ್ ಕಾರ್ಡ್‌ನಲ್ಲಿ ನನ್ನ ಹೆಸರಿರುವ ಕಾರಣ, ನಾನು ಅನುಮತಿ ನೀಡಿದ್ದೇನೆ ಎಂದರ್ಥವಲ್ಲ. ಈ ಸಿನಿಮಾದಲ್ಲಿ ನಾನು ರಚಿಸಿದ ಹಾಡನ್ನು ಹಾಕಲು ನನ್ನ ಅನುಮತಿ ಕೇಳಲೇ ಇಲ್ಲವೆಂದು ಆರೋಪಿಸಿದ್ದಾರೆ.

ಆದರೆ ಮಂಜುಮ್ಮಲ್ ಬಾಯ್ಸ್ ಸಿನಿಮಾ ನಿರ್ಮಾಪಕರು ಮಾತ್ರ, ನಾವು ಸಿನಿಮಾದಲ್ಲಿ ಈ ಹಾಡನ್ನು ಬಳಸಲು, ಆ ಸಿನಿಮಾದ ನಿರ್ಮಾಪಕರ ಅನುಮತಿ ಕೇಳಿದ್ದೇವೆ ಎಂದಿದ್ದಾರೆ. ಇನ್ನು ಈ ಮೊದಲು ತಾವು ರಚಿಸಿದ್ದ ಹಾಡನ್ನು ಎಸ್‌.ಪಿ.ಬಾಲಸುಬ್ರಹ್ಮಣ್ಯ ಲೈವ್ ಶೋನಲ್ಲಿ ಹಾಡಿದ್ದಕ್ಕಾಗಿ, ಇಳಯರಾಜ ನೊಟೀಸ್ ನೀಡಿದ್‌ದರು.

ಈ ಎಲ್ಲ ಕಾರಣಗಳಿಂದ ಇಳಯರಾಜ ಇದೀಗ ಟ್ರೋಲ್ ಆಗುತ್ತಿದ್ದಾರೆ. ಟ್ರೋಲಿಗರು, ಈವರು ರಚಿಸಿದ ಹಾಡನ್ನು ನಾವು ಬಾತ್‌ರೂಮ್‌ನಲ್ಲಿ ಹಾಡಿದರೂ ನೊಟೀಸ್ ಕೊಟ್ಟು, ದುಡ್ಡು ಕೇಳಬಹುದು ಎಂದು ತಮಾಷೆ ಮಾಡಿದ್ದಾರೆ.

ಅಂಜಲಿ ಕೊಲೆ ಪ್ರಕರಣ , ಆರೋಪಿಯೊಂದಿಗೆ ಬಂದು ಸ್ಥಳ ಮಹಜರು ಮಾಡಿದ ಸಿಐಡಿ

ಧಾರವಾಡ ಕರ್ನಾಟಕ ವಿವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾದ ಕಿಡಿಗೇಡಿ

ಕಾನೂನು ರೀತಿಯಲ್ಲಿ ಅಂತರ್ ಧರ್ಮದ ವಿವಾಹ ನೋಂದಣಿಗೆ ಆಗ್ರಹಿಸಿ ಮನವಿ ಸಲ್ಲಿಕೆ

- Advertisement -

Latest Posts

Don't Miss