Wednesday, June 12, 2024

Latest Posts

ಧಾರವಾಡ ಕರ್ನಾಟಕ ವಿವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾದ ಕಿಡಿಗೇಡಿ

- Advertisement -

Dharwad News: ಧಾರವಾಡ: ಹುಬ್ಬಳ್ಳಿ ಧಾರವಾಡದಲ್ಲಿ ಒಂದೇ ತಿಂಗಳಲ್ಲಿ ಇಬ್ಬರು ಹೆಣ್ಣು ಮಕ್ಕಳ ಸಾವಾಗಿದ್ದು, ಹುಬ್ಬಳ್ಳಿ ಸೇಫ್ ಸಿಟಿ ಅಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ.

ಪ್ರೀತಿಗೆ ಒಪ್ಪದ ಕಾರಣ, ಯುವತಿಯರ ಮೇಲೆ ಹಲ್ಲೆ ಮಾಡಿದ್ದ ದುಷ್ಕರ್ಮಿಗಳು, ಚಾಕುವಿನಿಂದ ಚುಚ್ಚಿ ಕೊಂದಿದ್ದಾರೆ. ಪ್ರಕರಣ ದಾಖಲಾಗಿ, ಹಂತಕರ ವಿಚಾರಣೆಯೂ ನಡೆಯುತ್ತಿದೆ. ಆದರೂ ಕೂಡ ಈ ಸಿಟಿಯಲ್ಲಿ ಹಲ್ಲೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ.

ಯಾವುದೇ ನಿರ್ಜನ ಪ್ರದೇಶದಲ್ಲಿ ಅಲ್ಲದೇ, ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗಳ ಮಧ್ಯದಲ್ಲೇ ಹಲ್ಲೆ, ಕೊಲೆಗಳು ನಡೆಯುತ್ತಿದೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲೇ ಬೈಕ್‌ನಲ್ಲಿ ಬಂದ ಯುವಕನೋರ್ವ, ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಸಿಸಿಟಿವಿ ಇಲ್ಲದ ಕಾರಣ, ಸಾಕ್ಷಿ ಇಲ್ಲದಂತಾಗಿದೆ.

ಮೇ 14ರಂದು ಈ ಘಟನೆ ನಡೆದಿದ್ದು, ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೇಮಾವತಿ ಚಲವಾದಿ ಎಂಬ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ, ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಕಾರಣಕ್ಕೆ ಹೇಮಾವತಿ ಎಬಿವಿಪಿ ಸಂಘಟನೆಗೆ ಕರೆ ಮಾಡಿ, ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ.

ಅಲ್ಲದೇ ಮೇ21ರಂದು ಉಪನಗರ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿ ದೂರು ಕೊಟ್ಟಿದ್ದಾಳೆ. ಉಪನಗರ ಪೊಲೀಸರು ಹಲ್ಲೆಕೋರನಿಗೆ ಬಲೆ ಬೀಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇಲ್ಮನೆ ಚುನಾವಣೆ: ಜವರಾಯಿಗೌಡರ ಪರ ಜೆಡಿಎಸ್ ವರಿಷ್ಠರ ಒಲವು..?

ನಟಿ ಆಲಿಯಾ ಭಟ್‌ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು: ಭಾರತ ಬಿಟ್ಟು ತೊಲಗು ಎಂದು ಆಕ್ರೋಶ

ಮಗುವಿನ ಲಿಂಗ ಪತ್ತೆಯ ಖುಷಿಗೆ ಪಾರ್ಟಿ ಆಚರಿಸಿದ ಯೂಟ್ಯೂಬರ್‌ಗೆ ಆರೋಗ್ಯ ಇಲಾಖೆಯಿಂದ ನೊಟೀಸ್

- Advertisement -

Latest Posts

Don't Miss