Bengaluru: ಬೆಂಗಳೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಬ್ರಹ್ಮಾಂಡ ಗುರೂಜಿ ಎಂದೇ ಖ್ಯಾತವಾಗಿರುವ ನರೇಂದ್ರ ಬಾಬು ಶರ್ಮಾ ಗುರೂಜಿ, ನಟಿ ಬಿ. ಸರೋಜಾದೇವಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸರೋಜಮ್ಮ ಹೋಗಿದ್ದು ಬೇಸರವಾಗಿದೆ. ಆದರೆ ಸಮಾಧಾನದ ಸಂಗತಿ ಅಂದ್ರೆ ಅವರು ಇಂಥ ಪುಣ್ಯದ ದಿನ ಹೋಗಿದ್ದಾರೆ. ಅವರು ಸಂಕಷ್ಟಿ ದಿನ ತೀರಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅವರು ಯಾವಾಗಲೂ ನಗು ನಗುತ್ತ ಇರುತ್ತಿದ್ದರು. ಹಲವರಿಗೆ ಸಹಾಯ ಮಾಡಿದ್ದಾರೆ. ನಾನು ಬಾಲ್ಯದಲ್ಲಿ ಸಿನಿಮಾದಲ್ಲಿ ನಟಿಸುತ್‌ತಿದ್ದೆ. ನನ್ನನ್ನು ಹಲವು ಕನ್ನಡ, ತಮಿಳು ಸಿನಿಮಾಗಳಿಗೆ ಸರೋಜಮ್ಮ ರೆಫರ್ ಮಾಡಿದ್ದರು ಎಂದು ತಮ್ಮ ಹಳೆಯ ದಿನಗಳಲ್ಲಿ ಸರೋಜಮ್ಮ ಮಾಡಿದ ಸಹಾಯವನ್ನು ಗುರೂಜಿ ನೆನೆದಿದ್ದಾರೆ.
ಈಗಲೂ ಯಾವುದಾದರೂ ದೇವಸ್ಥಾನಕ್ಕೆ ಹೋಗುವ ಸಮಯದಲ್ಲಿ ನನಗೆ ಕರೆ ಮಾಡಿ ಹೇಳುತ್ತಿದ್ದರು. ಪೂಜೆ ಮಾಡಬೇಕೆಂದರೂ ನನ್ನ ಸಲಹೆ ಕೇಳುತ್ತಿದ್ದರು. 2 ತಿಂಗಳ ಹಿಂದೆ ಭೇಟಿಯಾದಾಗ, 1ವರೆ ತಿಂಗಳಿನಿಂದ ಆರೋಗ್ಯ ಸರಿಯಾಗಿಲ್ಲ ಎಂದು ಹೇಳಿದ್ದರು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.