Sunday, December 22, 2024

Latest Posts

Singapore : ಕೋಟಿ ಕೋಟಿ ಗೆದ್ದ.. ಸತ್ತೇ ಹೋದ!

- Advertisement -

ಹಣ.. ಹಣ.. ಅಂದ್ರೆ ಸಾಕು ಹೆಣ ಕೂಡ ಬಾಯಿ ಬಿಡುತ್ತೇ ಅನ್ನೋ ಮಾತಿದೆ. ಅದ್ರಲ್ಲೂ ಕೋಟಿ ಕೋಟಿ ಹಣ ಗಳಿಸಬೇಕು, ಒಮ್ಮೆಯಾದರು ಜೀವನದಲ್ಲಿ ಕೋಟಿ ಹಣವನ್ನು ನೋಡಬೇಕು ಎಂಬುದು ಕೋಟ್ಯಂತರ ಜನರ ಕನಸಾಗಿರುತ್ತದೆ. ಅದಕ್ಕಾಗಿಯೇ ಸಾಕಷ್ಟು ಪರಿಷ್ರಮ ಪಡುವವರಿದ್ದಾರೆ. ಇನ್ನೂ ಕೆಲವರು ಅನ್ಯಮಾರ್ಗದಲ್ಲಿ ಹಣ ಗಳಿಸುತ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ಕ್ಯಾಸಿನೊ ಗೇಮ್​​ನಲ್ಲಿ ಬರೋಬ್ಬರಿ 33 ಕೋಟಿ ರೂಪಾಯಿಗಳನ್ನು ಗೆದ್ದ ಖುಷಿಯಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ. ಸದ್ಯ ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ಸಿಂಗಾಪುರದ ಮರೀನಾ ಬೇಯಲ್ಲಿ ಕ್ಯಾಸಿನೊ ಗೇಮ್ ಸಖತ್ ಫೇಮಸ್ ಆಗಿದೆ. ಈ ಗೇಮ್​ ಆಡಲೆಂದೆ ವ್ಯಕ್ತಿಯೊಬ್ಬರು ಯಾವಾಗಲೂ ಕ್ಯಾಸಿನೊಗೆ ಬರುತ್ತಿದ್. ಆದರೆ ಯಾವಾಗ ಬಂದರು ಸೋತು ಬೇಸರದಿಂದ ಹೋಗುತ್ತಿದ್ದ. ಆದರೆ ಈ ಬಾರಿ ಅವರಿಗೆ ಒಂದಲ್ಲ ಎರಡಲ್ಲ, ಬರೋಬ್ಬರಿ 33,42,61,604 ರೂಪಾಯಿಗಳ ಜಾಕ್​ಪಾಟ್ ಹೊಡೆದಿದೆ. ಇದರಿಂದ ಗೇಮಿಂಗ್​ ಕಟ್ಟಡದಲ್ಲಿ ವ್ಯಕ್ತಿಯ ಸಂಭ್ರಮ ಮುಗಿಲು ಮುಟ್ಟಿತ್ತು. ಕೋಟಿ ಕೋಟಿ ಹಣ ಗೆದ್ದು ಅತಿಯಾದ ಉತ್ಸಾಹದಿಂದ ವ್ಯಕ್ತಿ ಫುಲ್ ಎಕ್ಸೈಟ್​​ಮೆಂಟ್​ನಲ್ಲಿದ್ದ. ಅವರ ಇಡೀ ಜೀವನನ್ನೇ ಇದೊಂದು ಕ್ಯಾಸಿನೊ ಆಟದ ಜಾಕ್​ಪಾಟ್ ಬದಲಿಸಿತ್ತು.
ದುರದೃಷ್ಟ ಅಂದ್ರೆ.. ಈ ಖುಷಿ ಬಹಳ ಹೊತ್ತು ಇರಲಿಲ್ಲ. ಅತೀಯಾದ ಖುಷಿಯಲ್ಲಿದ್ದ ವ್ಯಕ್ತಿಗೆ ಕಾರ್ಡಿಕ್ ಅರೆಸ್ಟ್​​ ಆಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. 33 ಕೋಟಿ ಹಣ ಗೆದ್ದಾಗ ಅವರಲ್ಲಿ ಆದ ತೀವ್ರ ಉತ್ಸಾಹವೇ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಸತತ ಪ್ರಯತ್ನದ ನಂತರ ಹೇಗೋ ಅದೃಷ್ಟ ಲಕ್ಷ್ಮಿ ಆತನಿಗೆ ಒಲಿದಿತ್ತು. ಆದರೆ ಅದನ್ನು ಅನುಭವಿಸಲು ಈಗ ಆತನೇ ಇಲ್ಲದಂತಾಗಿದೆ.

- Advertisement -

Latest Posts

Don't Miss