ನವದೆಹಲಿ : ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಕೆಲವೊಮ್ಮೆ ಕೋಪಗೊಳ್ಳುತ್ತೇವೆ, ಆಕ್ರೋಶಿತರಾಗುತ್ತೇವೆ. ನಾನಾ ಕಾರಣಗಳಿಗಾಗಿ ನಮ್ಮ ತಾಳ್ಮೆಯನ್ನೂ ಕಳೆದುಕೊಳ್ಳುವ ಸಂದರ್ಭಗಳೂ ಎದುರಾಗುತ್ತವೆ. ಇಂತಹ ಸಮಯದಲ್ಲಿ ನಾವು ಬಳಸುವ ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಅದರಲ್ಲಿಯೇ ಕೆಲವು ನಿಂದನಾತ್ಮಕವಾಗಿ ಬಳಸುತ್ತೇವೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ಬೈಗುಳಗಳನ್ನು ಹೊರಹಾಕುತ್ತೇವೆ. ಆದರೆ ಇಡೀ ದೇಶದಲ್ಲಿ ಯಾವ ರಾಜ್ಯ ಈ ರೀತಿಯಾಗಿ ಅತಿಹೆಚ್ಚು ಬೈಗುಳ, ಅಸಂಬದ್ದವಾದ ಭಾಷೆಯನ್ನು ಬಳಸುತ್ತದೆ ಎನ್ನುವ ಬಗ್ಗೆ ಒಂದು ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗವಾಗಿದೆ.
ಯಾವ ರಾಜ್ಯದಲ್ಲಿ ಎಷ್ಟು ಬೈಗುಳ ಬಳಸುತ್ತಾರೆ? ಶೇಕಡಾವಾರುಗಳಲ್ಲಿ..
ದೆಹಲಿ – 80
ಪಂಜಾಬ್ – 78
ಉತ್ತರ ಪ್ರದೇಶ – 74
ಬಿಹಾರ – 74
ರಾಜಸ್ಥಾನ – 68
ಹರಿಯಾಣ – 62
ಮಹಾರಾಷ್ಟ್ರ – 58
ಗುಜರಾತ್ – 55
ಮಧ್ಯಪ್ರದೇಶ – 48
ಉತ್ತರಾಖಂಡ – 45
ಇನ್ನೂ ದೇಶದಲ್ಲಿಯೇ ಅತಿ ಹೆಚ್ಚು ನಿಂದನೆ ಹಾಗೂ ಬೈಗುಳಗಳನ್ನು ಬಳಸುವಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲನೇ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಮಾತನಾಡುವಾಗಲೂ ಇಲ್ಲಿನ ಜನರು ಬೈಗುಳಗಳನ್ನೇ ಬಳಸುತ್ತಾರೆ. ಮಹಿಳೆಯರ ವಿಚಾರದಲ್ಲಿಯೂ, ತಾಯಿ, ಸಹೋದರಿ ಇವರನ್ನು ಟಾರ್ಗೆಟ್ ಮಾಡಿ ನಿಂದಿಸಲಾಗುತ್ತದೆ. ಹೀಗಾಗಿ ದೆಹಲಿಯು ದೇಶದಲ್ಲಿಯೇ ಬೈಗುಳಗಳಿಂದ ಗಮನ ಸೆಳೆಯುತ್ತಿರುವ ನಗರವಾಗಿದೆ. ಶೇಕಡಾ 80 ರಷ್ಟು ಜನರು ನಿಂದನಾತ್ಮಕವಾಗದ ಭಾಷೆಯಿಂದಲೇ ವ್ಯವಹರಿಸುತ್ತಾರೆ, ಮಾತನಾಡುತ್ತಾರೆ ಎನ್ನುವುದು ಸಮೀಕ್ಷೆಯಲ್ಲಿ ಬಯಲಾಗಿದೆ.
ಅಲ್ಲದೆ ಪಂಜಾಬ್ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಇಲ್ಲಿಯೂ ದೆಹಲಿಗಿಂತ ಕೇವಲ ಶೇಕಡಾ 2ರಷ್ಟು ಕಡಿಮೆ ಅಂದರೆ 78 ರಷ್ಟು ಜನರು ಅಸಂಬದ್ದ ಹಾಗೂ ನಿಂದನೆಯುಳ್ಳ ಭಾಷೆಯನ್ನು ಬಳಸುತ್ತಾರೆ ಎನ್ನುವುದು ತಿಳಿದು ಬಂದಿದೆ. ಇನ್ನುಳಿದಂತೆ ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ತಲಾ ಶೇಕಡಾ 74ರೊಂದಿಗೆ ನಂತರದ ಸ್ಥಾನದಲ್ಲಿವೆ. ಇನ್ನೂ ರಾಜಸ್ಥಾನದಲ್ಲಿ ಶೇಕಡಾ 68, ಹರಿಯಾಣ ಶೇಕಡಾ 62ರಷ್ಟು ಜನರು ಬೈಗುಳಗಳನ್ನು ಬಳಸುತ್ತಾರೆ ಎನ್ನುವುದನ್ನು ಸಮೀಕ್ಷೆ ಹೇಳುತ್ತದೆ.
ಇನ್ನೂ ನಮ್ಮ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಶೇಕಡಾ 58 ರಷ್ಟು ಜನರು ನಿಂದಿಸುತ್ತಲೇ ಮಾತನಾಡುತ್ತಾರೆ. ಬೈಗುಳಗಳಿಂದಲೇ ತಮ್ಮ ಮಾತುಗಳನ್ನು ಶುರು ಮಾಡುತ್ತಾರೆ. ಇದಾದ ಬಳಿಕ ಗುಜರಾತ್ನಲ್ಲಿ ಶೇಕಡಾ 55 ರಷ್ಟು ಜನರು, ಮಧ್ಯಪ್ರದೇಶದಲ್ಲಿ ಶೇಕಡಾ 48 ರಷ್ಟು ಜನರು ಹಾಗೂ ಉತ್ತರಾಖಂಡ ರಾಜ್ಯದಲ್ಲಿ ಶೇಕಡಾ 45 ರಷ್ಟು ಜನರು ಹೀಗೆ ಬೈಗುಳಗಳನ್ನು ಹೇಳುತ್ತಾರೆ ಎಂದು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ವರದಿಯಾಗಿದೆ. ಬೈಗುಳಗಳನ್ನು ನಿಲ್ಲಿಸಿ ಎಂದು ಮನೆ ಮನೆಗೂ ಅಭಿಯಾನ ನಡೆಸಿರುವ ರೋಹತಕ್ನ ಡಾ. ಸುನೀಲ್ ಜಗಳನ್ ನೇತೃತ್ವದಲ್ಲಿ ದೇಶದ ಹಿಂದಿ ಭಾಷಿಕ ರಾಜ್ಯಗಳ ಸುಮಾರು 70 ಸಾವಿರ ಜನರನ್ನು ಇದರಲ್ಲಿ ಭಾಗವಹಿಸುವಂತೆ ಮಾಡಲಾಗಿತ್ತು. ಬೇರೆ ಬೇರೆ ಹಿನ್ನೆಲೆಯನ್ನು ಹೊಂದಿರುವ ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.