ಕರ್ನಾಟಕ ಟಿವಿ : ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯರೊಂದಿಗಿನ ಕಾಳಗ ಮುಂದುವರೆದಿದೆ. ರಾಜಕಾರಣದಲ್ಲಿ ಯಾರನ್ನ ನಂಬೋದು ಅನ್ನೊದೆ ಗೊತ್ತಾಗ್ತಿಲ್ಲ.
ನಾನೇ ಟಿಕೆಟ್ ಕೊಟ್ಟವರು ಶಾಸಕರಾದ್ರು ನಂತ್ರ ನನ್ನ ವಿರುದ್ದ ನಿಲ್ತಾರೆ. ರಾಜಕೀಯದಲ್ಲಿ ನಂಬಿಕೆ ಅನ್ನೊ ಪದಕ್ಕೆ ಅರ್ಥ ಇಲ್ಲದಂತಾಗಿದೆ ಅಂತ ಮೈಸೂರಿನಲ್ಲಿ ಸಿದ್ದರಾಮಯ್ಯ ರಾಜಕೀಯ ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಇದು ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಅಂತಿಮವಾಗಿ ಜನ ತೀರ್ಮಾನ ಮಾಡ್ತಾರೆ ಅಂತ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ರು.
ಎಂಟಿಬಿ ನಾಗರಾಜ್ ಹೇಳಿಕೆಗೆ ಯಾವ ಕಿಮ್ಮತ್ತಿದೆ..?
ಇನ್ನು ಸಿದ್ದರಾಮಯ್ಯ ತನ್ನ ಶಿಷ್ಯ ಎಂಟಿಬಿ ನಾಗರಾಜ್ ವಿರುದ್ಧ ವ್ಯಂಗ್ಯದ ಮಾತುಗಳನ್ನಾಡಿದ್ರು. ಅವರ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ. ಎದೆ ಬಗೆದರೆ ಸಿದ್ದರಾಮಯ್ಯ ಅಂತಿದ್ದವರು.
ಈಗ ಬೇರೆ ಮಾತಾಡ್ತಿದ್ದಾರೆ ಏನ್ ಅರ್ಥವಿದೆ ಅದರಲ್ಲಿ ಬಹಳ ಜನ ನಾನು ಟಿಕೆಟ್ ಕೊಟ್ಟವರು, ಗೆಲ್ಲಿಸಿದವರು ನನಗೆ ವಿರೋಧವಾಗಿದ್ದಾರೆ. ಇದಕ್ಕೆ ಏನ್ ಮಾಡೋಕೆ ಆಗುತ್ತೆ. ಎಂಟಿಬಿ ನಾಗರಾಜ್ ನ ಬಗ್ಗೆ ಹೆಚ್ಚು ಮಾಡಲ್ಲ. ಜನರೆ ಅವರ ಬಗ್ಗೆ ನಿರ್ಧಾರ ಮಾಡ್ತಾರೆ ಅಂತ ಸಿದ್ದರಾಮಯ್ಯ ಲೇವಡಿ ಮಾಡಿದ್ರು.