- Advertisement -
ತಿರುವನಂತಪುರಂ: ಕೇರಳದ ಕಾಡಿನಲ್ಲಿ ಗರ್ಭಿಣಿ ಆನೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಬಂಧಿಸಿಲಾಗಿದೆ ಎಂದು ರಾಜ್ಯ ಅರಣ್ಯ ಸಚಿವರು ತಿಳಿಸಿದ್ದಾರೆ.
ನಿನ್ನೆ ತಾನೇ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಬಗ್ಗೆ ಮಾತನಾಡಿ, ಮೂವರು ಶಂಕಿತರನ್ನು ಗುರುತಿಸಲಾಗಿದೆ ಎಂದು ಹೇಳಿದ್ದರು.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮುಖ್ಯ ವನ್ಯಜೀವಿ ವಾರ್ಡನ್ ಸುರೇಂದ್ರ ಕುಮಾರ್, ಶಂಕಿತ ವ್ಯಕ್ತಿ ತನ್ನ ನಲವತ್ತರ ಹರೆಯದಲ್ಲಿ ಸ್ಫೋಟಕಗಳನ್ನು ತಯಾರಿಸಿ, ಇತರರಿಗೂ ಸಹಕರಿಸಿದ್ದಾನೆಂದು ಹೇಳಿದ್ದಾರೆ.
ಕೇರಳದ ಪಲಕ್ಕಡ್ ಜಿಲ್ಲೆಯ ಕಾಡೊಂದರಲ್ಲಿ ಆಹಾರ ಹುಡುಕಿ ಹೊರಟಿದ್ದ ಗರ್ಭಿಣಿ ಆನೆ ಅಲ್ಲೇ ಸಿಕ್ಕ ಅನಾನಸ್ ತಿಂದಿತ್ತು. ಆದ್ರೆ ಆ ಅನಾನಸ್ ಹಣ್ಣಿನಲ್ಲಿ ಸ್ಪೋಟಕವನ್ನಿರಿಸಲಾಗಿತ್ತು. ಅದನ್ನ ತಿಂದ ಆನೆ ನಿಂತಲ್ಲೇ ಸಾವನ್ನಪ್ಪಿದ್ದು, ಈ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
- Advertisement -